ಸುದ್ದಿಮೂಲ ವಾರ್ತೆ ನವದೆಹಲಿ, ೆ.13:
ಪ್ರಧಾನ ಮಂತ್ರಿಿ ನರೇಂದ್ರ ಮೋದಿ ಅವರು ಹೊಸ ಸಂಯೋಜಿತ ಪ್ರಧಾನ ಮಂತ್ರಿಿ ಕಚೇರಿ ಸಂಕೀರ್ಣ ಸೇವಾ ತೀರ್ಥ’ವನ್ನು ಶುಕ್ರವಾರ ಉದ್ಘಾಾಟಿಸಿದರು.
ಇದರೊಂದಿಗೆ ಪಧಾನಿ ಕಚೇರಿ (ಪಿಎಂಓ) ಅಧಿಕೃತವಾಗಿ ಹೊಸ ಕಚೇರಿಗೆ ಸ್ಥಳಾಂತರಗೊಂಡಿದೆ. ಸ್ವಾಾತಂತ್ರ್ಯಾಾ ನಂತರ ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿಿ ಕಚೇರಿ ಆಧುನಿಕ ಹಾಗೂ ಅತ್ಯಾಾಧುನಿಕ ಸೌಲಭ್ಯಕ್ಕೆೆ ಬದಲಾಗಿದ್ದು, ಎಲ್ಲವನ್ನೂ ಒಂದೇ ಕೇಂದ್ರದಲ್ಲಿ ಕ್ರೋೋಢೀಕರಿಸಿ ಆಡಳಿತ ದಕ್ಷತೆಯನ್ನು ಹೆಚ್ಚಿಿಸುವ ಉದ್ದೇಶ ಹೊಂದಿದೆ.
ಈ ಮಹತ್ವದ ಸಂದರ್ಭವನ್ನು ಸರ್ಕಾರ ’ಭಾರತದ ಆಡಳಿತದ ರೂಪುರೇಷೆಯಲ್ಲಿ ಪರಿವರ್ತನಾತ್ಮಕ ಮೈಲಿಗಲ್ಲು’ ಎಂದು ಹೇಳಿದ್ದು, ಇದರ ನೆನಪಿಗಾಗಿ ಪ್ರಧಾನಿ ಮೋದಿ ಅವರು 100 ರೂ. ಮುಖಬೆಲೆಯ ನಾಣ್ಯವನ್ನೂ ಬಿಡುಗಡೆ ಮಾಡಿದರು.
ಶುಕ್ರವಾರ ಮಧ್ಯಾಾಹ್ನ 2 ಗಂಟೆಗೆ ಪ್ರಧಾನಿ ಮೋದಿ ಸೇವಾ ತೀರ್ಥ’ ಎಂಬ ಹೆಸರನ್ನು ಅನಾವರಣಗೊಳಿಸಿದರು. ಬಳಿಕ ಸೇವಾ ತೀರ್ಥ ಹಾಗೂ ಕರ್ತವ್ಯ ಭವನ-1 ಮತ್ತು 2 ಕಟ್ಟಡಗಳನ್ನು ಔಪಚಾರಿಕವಾಗಿ ಉದ್ಘಾಾಟಿಸಿದರು. ಹಲವಾರು ಪ್ರಮುಖ ಸಚಿವಾಲಯಗಳಿಗೆ ಸ್ಥಳಾವಕಾಶ ಕಲ್ಪಿಿಸುವ ಈ ಯೋಜನೆ ಆಧುನಿಕ, ದಕ್ಷ ಹಾಗೂ ನಾಗರಿಕ-ಕೇಂದ್ರಿಿತ ಆಡಳಿತ ವ್ಯವಸ್ಥೆೆಯನ್ನು ರೂಪಿಸುವ ದೃಷ್ಟಿಿಕೋನದ ಪ್ರತಿಬಿಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಶಕಗಳ ಕಾಲ ಸೆಂಟ್ರಲ್ ವಿಸ್ಟಾಾದಾದ್ಯಂತ ಹಳೆಯ ಹಾಗೂ ಅಲ್ಲಲ್ಲಿ ಚದುರಿದ ಕಟ್ಟಡಗಳಲ್ಲಿ ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿಿದ್ದವು. ಇದರಿಂದ ಸಮನ್ವಯದ ಕೊರತೆ, ಲಾಜಿಸ್ಟಿಿಕ್ ಅಡಚಣೆಗಳು ಇದ್ದವು. ಈಗ ಸೇವಾ ತೀರ್ಥ ಸಂಕೀರ್ಣದಲ್ಲಿ ಮೂರು ಪ್ರಮುಖ ಕಾರ್ಯನಿರ್ವಾಹಕ ಘಟಕಗಳಿಗೆ ಸ್ಥಳ ಕಲ್ಪಿಿಸಲಾಗಿದೆ – ಪ್ರಧಾನ ಮಂತ್ರಿಿ ಕಚೇರಿ (ಸೇವಾ ತೀರ್ಥ-1), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (ಸೇವಾ ತೀರ್ಥ-2) ಹಾಗೂ ಕ್ಯಾಾಬಿನೆಟ್ ಸಚಿವಾಲಯ (ಸೇವಾ ತೀರ್ಥ-3). ಇವುಗಳು ಇದುವರೆಗೆ ಪ್ರತ್ಯೇಕ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿಿದ್ದವು. ಒಂದೇ ಸ್ಥಳದಲ್ಲಿರುವುದರಿಂದ ಉನ್ನತ ಮಟ್ಟದ ಕಾರ್ಯತಂತ್ರ ಸಮನ್ವಯ ಮತ್ತಷ್ಟು ಬಲವಾಗಲಿದೆ ಎಂದು ಅಂದಾಜಿಸಲಾಗಿದೆ.
ಕರ್ತವ್ಯ ಭವನ-1 ಮತ್ತು 2ರಲ್ಲಿ ಹಣಕಾಸು, ರಕ್ಷಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ, ಕಾರ್ಪೊರೇಟ್ ವ್ಯವಹಾರಗಳು, ಶಿಕ್ಷಣ, ಸಂಸ್ಕೃತಿ, ಕಾನೂನು ಮತ್ತು ನ್ಯಾಾಯ, ಮಾಹಿತಿ ಮತ್ತು ಪ್ರಸಾರ, ಕೃಷಿ ಮತ್ತು ರೈತರ ಕಲ್ಯಾಾಣ, ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಹಾಗೂ ಬುಡಕಟ್ಟು ವ್ಯವಹಾರಗಳಂತಹ ಪ್ರಮುಖ ಸಚಿವಾಲಯಗಳಿರಲಿವೆ. ಇದರಿಂದ ಅಂತರ-ಸಚಿವಾಲಯ ಸಮನ್ವಯ ಸುಧಾರಿಸುವುದರ ಜೊತೆಗೆ ಸಾರ್ವಜನಿಕರಿಗೆ ಪ್ರವೇಶ ಸುಲಭವಾಗಲಿದೆ.
ಈವರೆಗೆ ಪ್ರಧಾನ ಮಂತ್ರಿಿ ಕಚೇರಿ ಕಾರ್ಯನಿರ್ವಹಿಸುತ್ತಿಿದ್ದ ದಕ್ಷಿಣ ಬ್ಲಾಾಕ್ ಮತ್ತು ಉತ್ತರ ಬ್ಲಾಾಕ್ ಕಟ್ಟಡಗಳನ್ನು ಖಾಲಿ ಮಾಡಿದ ಬಳಿಕ ಅವುಗಳನ್ನು ಯುಗೆ ಯುಗೀನ್ ಭಾರತ್ ಸಂಗ್ರಹಾಲಯ’ವೆಂಬ ಸಾರ್ವಜನಿಕ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಯೋಜಿತ ವಸ್ತುಸಂಗ್ರಹಾಲಯದ ಅಭಿವೃದ್ಧಿಿಗೆ ತಾಂತ್ರಿಿಕ ಸಹಕಾರಕ್ಕಾಾಗಿ 2024 ಡಿಸೆಂಬರ್ 19ರಂದು ್ರಾನ್ಸ್ನ ವಸ್ತುಸಂಗ್ರಹಾಲಯ ಅಭಿವೃದ್ಧಿಿ ಸಂಸ್ಥೆೆಯೊಂದಿಗೆ ಒಪ್ಪಂದಕ್ಕೆೆ ಸಹಿ ಹಾಕಲಾಗಿದೆ.

