ಸುದ್ದಿಮೂಲ ವಾರ್ತೆ ಹೊಸಪೇಟೆ (ಹಂಪಿ ಉತ್ಸವ), ೆ.13:
ಹಂಪಿ ಉತ್ಸವದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಕೃತಿ ಇಲಾಖೆ ಹಾಗೂ ವಿವಿಧ ಇಲಾಖೆ ಗಳ ಸಂಯುಕ್ತಾಾಶ್ರಯದಲ್ಲಿ ಶ್ರೀ ವಿರೂಪಾಕ್ಷ ದೇವಸ್ಥಾಾನದ ಮುಂಭಾಗದಲ್ಲಿ ಹ ಮ್ಮಿಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಹೆಣ್ಣು ಭ್ರೂಣ ಉಳಿಸಿ ಎಂಬ ಚಿತ್ರದ ಮೂಲಕ ಸಾಮಾಜಿಕ ಜಾಗೃತಿ ಕಂಡುಬಂದಿತು.
ಈ ಸ್ಪರ್ಧೆಯಲ್ಲಿ ಐತಿಹಾಸಿಕ ವಿಜಯನಗರ ಸಾಮ್ರಾಾಜ್ಯದ ವರಾಹ ಲಾಂಛನದ ಚಿತ್ರ, ಶ್ರೀ ಕೃಷ್ಣ ದೇವರಾಯನ ಚಿತ್ರ, ಶಿವಲಿಂಗ ಚಿತ್ರ, ಸಿಂಹದ ಚಿತ್ರ ಸೇರಿದಂತೆ ಶ್ರೀ ವಿರೂಪಾಕ್ಷ ದೇವಸ್ಥಾಾನದ ಮುಂಭಾಗದಲ್ಲಿ ಮೂಡಿ ಬಂದ ರಂಗೋಲಿ ಆಕರ್ಷಣೀಯವಾಗಿದ್ದು, ನೋಡುಗರ ಗಮನ ಸೆಳೆಯುತ್ತಿಿವೆ. ಈ ಎಲ್ಲಾ ಬಣ್ಣ-ಬಣ್ಣದ ರಂಗೋಲಿ ಚಿತ್ತಾಾರಗಳು ಹಂಪಿಯ ಉತ್ಸವದ ಮೆರಗನ್ನು ಹೆಚ್ಚಿಿಸಿದವು.
ರಂಗೋಲಿ ಸ್ಪರ್ಧೆಯಲ್ಲಿ ಒಟ್ಟು 41 ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು. ಬಗೆ-ಬಗೆಯ ರಂಗೋಲಿ ಚಿತ್ತಾಾರಗಳು ಹಬ್ಬದ ವಾತಾವರಣವನ್ನು ಸೃಷ್ಠಿಿಸಿದ್ದು ವಿಶೇಷ ವಾಗಿತ್ತು.
ಹೆಣ್ಣು ಭ್ರೂಣ ಉಳಿಸಿ: ಹಂಪಿ ಉತ್ಸವದ ರಂಗೋಲಿ ಸ್ಪರ್ಧೆಯಲ್ಲಿ ಕಂಡುಬಂದ ಸಾಮಾಜಿಕ ಜಾಗೃತಿ

