ಸುದ್ದಿಮೂಲ ವಾರ್ತೆ ಹರಪನಹಳ್ಳಿ, ೆ.13:
ಹಿಂದಿನ ಮನ್-ರೆಗಾ ಯೋಜನೆಯಲ್ಲಿ ಕಾಂಗ್ರೆೆಸ್ಸಿಿಗರಿಗೆ ಲೂಟಿ ಹೊಡೆಯಲು ಅವಕಾಶವಿದ್ದಂತೆ ಈಗಿನ ವಿ-ಬಿ ಜಿ ರಾಮ್ ಜಿ ಯಲ್ಲಿ ಯಾವುದೇ ಅವಕಾಶವಿಲ್ಲ.ಇದು ಗ್ರಾಾಮೀಣ ಭಾಗದ ಕೃಷಿ ಕೂಲಿ ಕಾರ್ಮಿಕರಿಗೆ ಅನುಕೂಲಕರವಾಗಲಿದೆ ಎಂದು ರಾಜ್ಯ ಸಹಕಾರಿ ಮಹಾ ಮಂಡಳದ ಅಧ್ಯಕ್ಷ ಜಿ.ನಂಜನ ಗೌಡ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇದೇ 20ರ ಶುಕ್ರವಾರದಂದು ತರಳು ಬಾಳು ಕಲ್ಯಾಾಣ ಮಂಟಪದಲ್ಲಿ ನಡೆಯುವ ಬಿಜೆಪಿ ಪಕ್ಷದ ಸಂಘಟನೆ ಸಭೆ ಉದ್ದೇಶಿಸಿ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದರು.
ಕೇಂದ್ರ ತಂದಿರುವ ಜೀ ರಾಮ್ ಜಿಯಲ್ಲಿ ಗ್ರಾಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಹೆಚ್ಚು ಆರ್ಥಿಕ ಉತ್ತೇಜನ ನೀಡುವುದರ ಜೊತೆಗೆ ಹೆಚ್ಚಿಿನ ಕೂಲಿ ದಿನಗಳು ಸೃಷ್ಟಿಿಯಾಗಿ ಕೂಲಿ ದರವನ್ನು ಹೆಚ್ಚಿಿ ಸಲಾಗಿದೆ. ಕಾಂಗ್ರೆೆಸ್ ಪಕ್ಷ ಅಪಪ್ರಚಾರದಲ್ಲಿ ತೊಡಗಿದ್ದು ಗಾಂಧಿ ಹೆಸರನ್ನು ಕೈ ಬಿಡಲಾಗಿದೆ ಎಂದು ಪ್ರಚಾರ ಮಾಡುತ್ತಿಿದ್ದಾರೆ ಇದೇ ನಕಲಿ ಗಾಂಧಿ ಕುಟುಂಬದವರ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಸಾವಿರಾರು ಯೋಜನೆಗಳಿಗೆ ಅವರ ಹೆಸರು ಇಡಲಾಗಿದೆ. ಗಾಂಧಿ ಬಗ್ಗೆೆ ಕೇವಲ ಮೊಸಳೆ ಕಣ್ಣೀರನ್ನು ಸುರಿಸುತ್ತಿಿದ್ದಾರೆ. ಕೇವಲ ಹೆಸರನ್ನು ಮಾರ್ಪಡಿಸುವುದಲ್ಲದೆ ಅದರ ತಾಂತ್ರಿಿಕ ಕಾರ್ಯ ವ್ಯಾಾಪ್ತಿಿಯನ್ನು ಉತ್ತೇಜಿಸಿ ಹೊಸ ರೂಪದಲ್ಲಿ ಕಾಯ್ದೆೆಯನ್ನು ಜಾರಿಗೆ ತರಲಾಗಿದೆ.
ಲೋಕಸಭೆಯ ಕಲಾಪದಲ್ಲಿ ರಾಹುಲ್ ಗಾಂಧಿಯವರು ಅನವಶ್ಯಕ ಆಧಾರವಿಲ್ಲದ ವಿಚಾರಗಳಿಗೆ ಸದನದ ಸಮಯ ಹಾಳು ಮಾಡುತ್ತಿಿದ್ದು ಅಭಿವೃದ್ಧಿಿ ವಿಚಾರಗಳಿಗೆ ದೇಶದ ಸಮಸ್ಯೆೆಗಳಿಗೆ ಕಿವಿಗೊಡದೆ ಅನೈತಿಕ ರಾಜಕಾರಣ ಮಾಡುತ್ತಿಿದ್ದಾರೆ.
ನಮ್ಮ ರಾಜ್ಯ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆೆ ಹಾಳಾಗಿದ್ದು. ಪೊಲೀಸ ವ್ಯವಸ್ಥೆೆ ರಾಜಕೀಯ ಒತ್ತಡದಿಂದ ನಿಯಂತ್ರಣವಿಲ್ಲದಂತೆ ಆಗಿದೆ. ಅನೇಕ ಹಗರಣಗಳಿಂದ ಮಂತ್ರಿಿಗಳು ರಾಜೀನಾಮೆ ನೀಡುವ ಸ್ಥಿಿತಿ ಬಂದು ಒದಗಿದೆ.
ಇದೇ ರೀತಿ ಕಲ್ಯಾಾಣ ಕರ್ನಾಟಕ ಅನುದಾನದಲ್ಲಿ ನಮ್ಮ ತಾಲೂಕಿನಲ್ಲಿ ಶಾಸಕರು ಹಿಂದೆ ಇದ್ದ ಹಳೆಯ ಕಾಮಗಾರಿಗಳನ್ನು ಹಾಳು ಮಾಡಿ ಅನುದಾನವನ್ನು ತಂದು ಹಲವಾರು ಅವೈಜ್ಞಾನಿಕ ಯೋಜನೆಗಳಿಗೆ ದುಡ್ಡು ಹಾಕಿ ತಮಗೆ ಅನುಕೂಲಕರ ಮಾಡಿಕೊಳ್ಳುತ್ತಿಿದ್ದಾರೆ. ಇದರ ಬಗ್ಗೆೆ 20ರ ಸಭೆಯಲ್ಲಿ ಮುಖಂಡರ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಬಿಡಿಸಿಸಿ ಬ್ಯಾಾಂಕ್ ನಿರ್ದೇಶಕ ಮುಖಂಡ ವೈ.ಡಿ.ಅಣ್ಣಪ್ಪ ಮಾತನಾಡಿ 20 ರ ಕಾರ್ಯಕ್ರಮದಲ್ಲಿ ಪಕ್ಷವನ್ನು ಗ್ರಾಾಮೀಣ ಭಾಗದಲ್ಲಿ ಹೆಚ್ಚಾಾಗಿ ಸಂಘಟಿಸಿ ವಿಧಾನಸಭಾ ಚುನಾವಣೆಗೆ ಸಜ್ಜುಗೊಳಿಸಲು ಪಣ ಕೊಡಬೇಕಾಗಿದೆ. ಹೀಗಾಗಿ ಕಾರ್ಯಕ್ರಮಕ್ಕೆೆ ಮಾಜಿ ಲೋಕಸಭಾ ಸದಸ್ಯರಾದ ಸಿದ್ದೇಶ್, ದೇವೇಂದ್ರಪ್ಪ, ಗಾಯತ್ರಿಿ ಸಿದ್ದೇಶ್, ಹರಿಹರ ಶಾಸಕ ಬಿ.ಪಿ.ಹರೀಶ್, ಹಗಲಿ ಶಾಸಕ ಕೃಷ್ಣ ನಾಯ್ಕ, ಜಗಳೂರು ಮಾಜಿ ಶಾಸಕರಾದ ರಾಮಚಂದ್ರ, ರಾಜೇಶ್ ಹಾಗೂ ವಿಜಯನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ರೆಡ್ಡಿಿ ಮುಂತಾದವರು ಪಾಲ್ಗೊೊಳ್ಳಲಿದ್ದು 20 ರಂದು ನಡೆಯುವ ಪಕ್ಷದ ಸಂಘಟನಾ ಸಭೆಗೆ ಕಾರ್ಯಕರ್ತರು ಹೆಚ್ಚಿಿನ ರೀತಿಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಿಗೊಳಿಸಿ ಎಂದು ಸಲಹೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಡಾ.ರಮೇಶ್ ಕುಮಾರ್, ಮುತ್ತಿಿಗೆ ವಾಗೀಶ್, ಸತ್ತೂರ್ ಹಾಲೇಶ್, ಕಣಿವೆಹಳ್ಳಿಿ ಮಂಜುನಾಥ್ ನಿಟ್ಟೂರು ಹಾಲಪ್ಪ, ಮಂಜುನಾಥ್ ಇಜಂತ್ ಕರ್, ವೆಂಕಟೇಶ್ ನಾಯ್ಕ, ಕಂಚಿಕೆರಿ ಕೆಂಚನಗೌಡ, ಪ್ರಾಾಣೇಶ್ ವಕೀಲರು, ಲಿಂಗಾನಂದ ವಕೀಲರು, ಬೂದಿ ನವೀನ್, ಓಂಕಾರ್ ಗೌಡ ಹಾಗೂ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.
20 ರಂದು ನಡೆಯುವ ಬಿಜೆಪಿ ಪಕ್ಷದ ಸಂಘಟನೆಯ ಪೂರ್ವಭಾವಿ ಸಭೆ ವಿ-ಬಿ ಜಿ ರಾಮ್ ಜಿ ಯಲ್ಲಿ ಲೂಟಿ ಹೊಡೆಯಲು ಅವಕಾಶವಿಲ್ಲ : ಜಿ.ನಂಜನ ಗೌಡ

