ಸುದ್ದಿಮೂಲ ವಾರ್ತೆ ರಾಯಚೂರು, ೆ.16:
ಕೇಂದ್ರ ಸರ್ಕಾರದ ಮಿಷನ್ ವಾತ್ಸಲ್ಯ ಮಾರ್ಗಸೂಚಿಯಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಾಯಚೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿಿರುವ ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆೆಗಳಲ್ಲಿನ ಮಕ್ಕಳಿಗಾಗಿ ಸಂಗೀತ ಹೇಳಿಕೊಡಲು ಇಬ್ಬರು ಅರೆಕಾಲಿಕ ಸಂಗೀತ ಶಿಕ್ಷಕರನ್ನು ನೇಮಕಕ್ಕೆೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾಾನಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿಯೊಂದಿಗೆ ವಿದ್ಯಾಾರ್ಹತೆ, ಅನುಭವ ಮತ್ತು ಇತರೆ ದಾಖಲಾತಿಗಳನ್ನು ಲಗತ್ತಿಿಸಿ ದಿನಾಂಕ: 23-02-2026ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಲಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಯಲಯ ಮ.ನಂ. 1-9-138 ಮಾರೆಮ್ಮ ದೇವಸ್ಥಾಾನದ ಹತ್ತಿಿರ, ಆಜಾದ ನಗರ ರಾಯಚೂರು ದೂರವಾಣಿ ಸಂಖ್ಯೆೆ: 08532-226226ಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಮರೇಶ ಹಾವಿನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

