ಸುದ್ದಿಮೂಲ ವಾರ್ತೆ ಕಲಬುರಗಿ, ೆ.16:
ಸಮಾನತೆ ಮತ್ತು ಕಾಯಕದ ಮಹತ್ವವನ್ನು ಜಗತ್ತಿಿಗೆ ಸಾರಿದ ಮಹಾನ್ ಸಂತ ಸೇವಾಲಾಲ್ ಮಹಾರಾಜರು, ಬಂಜಾರ ಸಮಾಜದ ಸರ್ವತೋಮುಖ ಏಳಿಗೆಗೆ ತೋರಿಸಿರುವ ಮಾರ್ಗದಲ್ಲಿ ನಡೆಯುವುದು ನಮ್ಮೆೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಬಸವರಾಜ ಮತ್ತಿಿಮಡು ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಜರುಗಿದ ಶ್ರೀ ಸಂತ ಸೇವಾಲಾಲ ಮಹಾರಾಜರ ಜಯಂತೋತ್ಸವದಲ್ಲಿ ಸೇವಾಲಾಲ ಮಹಾರಾಜರ ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಮಾಡಿ ಮಾತನಾಡಿದರು. ಬಂಜಾರ ಸಮಾಜವು ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಇಡೀ ವಿಶ್ವಕ್ಕೆೆ ಮಾದರಿಯಾಗಿದೆ. ನುಡಿದಂತೆ ನಡೆಯುವ ಮತ್ತು ಕೈಹಿಡಿದವರನ್ನು ಎಂದಿಗೂ ಕೈಬಿಡದ ವಿಶ್ವಾಾಸಾರ್ಹ ಸಮಾಜ ಎಂದು ಶ್ಲಾಾಘಿಸಿದರು. ಬಂಜಾರ ಸಮಾಜದ ಅಭಿವೃದ್ಧಿಿಗೆ ರಾಜಕೀಯ ಮರೆತು ನಾವೆಲ್ಲರೂ ಒಂದಾಗಿ ಶ್ರಮಿಸಬೇಕು ಎಂದರು.
ಶಾಸಕರಾದ ಡಾ.ಅವಿನಾಶ ಜಾಧವ ಮಾತನಾಡಿ, ಮಾಜಿ ಮುಖ್ಯಮಂತ್ರಿಿ ಯಡಿಯೂರಪ್ಪನವರು ಸರ್ಕಾರದಲ್ಲಿದ್ದಾಗ ಬಂಜಾರಾ ಸಮಾಜದ ನಿಗಮ ಸ್ಥಾಾಪನೆ ಮಾಡಿದರು. ಸಮಾಜದ ಸರ್ವತೋಮುಖ ಅಭಿವೃದ್ಧಿಿಯಾಗಬೇಕಿದ್ದರೆ ಯಾವುದೇ ರಾಜಕೀಯ ಪಕ್ಷಪಾತ ಹಾಗೂ ಭಿನ್ನಾಾಭಿಪ್ರಾಾಯಗಳನ್ನು ಮರೆತು ನಾವೆಲ್ಲರೂ ಮೊದಲು ಒಂದಾಗಬೇಕು. ಸಮಾಜದ ಹಿರಿಯರು ಮತ್ತು ಕಿರಿಯರು ಒಗ್ಗಟ್ಟಿಿನಿಂದ ಶ್ರಮಿಸಿದರೆ ಮಾತ್ರ ಸಮಾಜಕ್ಕೆೆ ಒಳ್ಳೆೆಯದು ಮಾಡಲು ಸಾಧ್ಯ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಡಾ.ಬಿ.ಜಿ. ಪಾಟೀಲ, ಶ್ರೀ ಸಂತ ಸೇವಾಲಾಲ್ ಮಹಾರಾಜ ಜಿಲ್ಲಾ ಗೌರವಾಧ್ಯಕ್ಷರು ಹಾಗೂ ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಮಾತನಾಡಿದರು. ಡಾ.ಗಣಪತಿ ರಾಠೋಡ ವಿಶೇಷ ಉಪನ್ಯಾಾಸ ನೀಡಿದರು. ಇದಕ್ಕೂ ಮುನ್ನ ಗಂಜ್ ನಗರೇಶ್ವರ ಶಾಲೆಯಿಂದ ರಂಗಮಂದಿರ ವರೆಗೆ ಭವ್ಯವಾದ ಮೆರವಣೆಗೆ ಜರುಗಿತು.
ಸಮಾರಂಭದಲ್ಲಿ ಕೆಸರಟಗಿಯ ಮಾತಾ ಲತಾ ದೇವಿ, ಓಂಕಾರ ಮಹಾರಾಜ, ಶಂಕರ ಮಹಾರಾಜ ದಿವ್ಯ ಸಾನಿಧ್ಯವಹಿಸಿದರು. ಎಂಎಲ್ಸಿಿ ಶಶೀಲ ನಮೋಶಿ, ಶಿವಪ್ರಭು ಹೀರೆಮಠ, ಜಿಲ್ಲಾ ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ಸಾಗರ ರಾಠೋಡ, ಮಹೇಶ ಹುಬಳ್ಳಿಿ, ಜಗದೀಶ್ವರಿ ನಾಸಿ ವಿಠಲ ಜಾಧವ, ಪ್ರೇೇಮಸಿಂಗ ಚವ್ಹಾಾಣ, ಶ್ಯಾಾಮನೂರ ಪವರ, ಕೃಷ್ಣೇ ನಾಯಕ, ಬಾಬು ಜಾಧವ, ಉಮೇಶ ರಾಠೋಡ, ರಾಕೇಶ ಚವ್ಹಾಾಣ ಸೇರಿದಂತೆ ಸಮಾಜದ ಮುಖಂಡರು ಇದ್ದರು.
ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಆಚರಣೆ ಬಂಜಾರ ಸಮಾಜದ ಅಭಿವೃದ್ಧಿಗೆ ಒಂದಾಗಿ ಶ್ರಮಿಸಬೇಕು : ಮತ್ತಿಮಡು

