ಸುದ್ದಿಮೂಲ ವಾರ್ತೆ ಸಿರವಾರ, ೆ.16:
ಅಲೆಮಾರಿಗಳಾದ ಲಂಬಾಣಿ, ಬಂಜಾರ ಜನಾಂಗಕ್ಕೆೆ ಒಂದೆಡೆ ನೆಲೆ ನಿಲ್ಲುವಂತೆ ಮಾಡಿ ವ್ಯವಸಾಯ, ಪಶುಪಾಲನೆ ಮಾಡಲು ಮಾರ್ಗದರ್ಶನ ನೀಡಿ, ಸಮಾಜವನ್ನು ಮುನ್ನೆೆಲಿಗೆ ತಂದವರು ಮಹಾತ್ಮ ಸಂತ ಸೇವಲಾಲರು ಎಂದು ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿದರು.
ಅವರು ರವಿವಾರ ಪಟ್ಟಣದ ಸಜ್ಜಲಶ್ರೀ ಶರಣಮ್ಮ ತಾಯಿ ಶಾಖಾ ಮಠದ ಆವರಣದಲ್ಲಿ ಬಂಜಾರ ಸಮಾಜದಿಂದ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಅವರ 287 ನೇ ಜಯಂತಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿ ಬಂಜಾರ ಸಮಾಜವು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು, ಕುಟುಂಬಗಳಲ್ಲಿ ಕೊನೆಯಲ್ಲಿಯೇ ಉಳಿದಿದ್ದು, ಎಲ್ಲರನ್ನು ಒಟ್ಟಿಿಗೆ ತೆಗೆದುಕೊಂಡು ಸಮಾಜಕ್ಕೆೆ ಮಾದರಿಯಾಗಬೇಕು ಎಂದರು. ಚುಕ್ಕಿಿ ಸೂಗಪ್ಪ ಸಾಹುಕಾರ, ಜೆ.ಶರಣಪ್ಪಗೌಡ, ಜಿ.ಲೋಕರೆಡ್ಡಿಿ, ಪ.ಪಂ.ಸದಸ್ಯ ಕೃಷ್ಣ ನಾಯಕ ಸೇರಿದಂತೆ ಸಮಾಜದ ಮುಖಂಡರು ಮಾತನಾಡಿದರು.
ಮೆರವಣಿಗೆ : ಪಟ್ಟಣದ ನೀರಾವರಿ ಇಲಾಖೆ ಆವರಣದಿಂದ ಕಾರ್ಯಕ್ರಮದ ಸ್ಥಳದವರೆಗೆ ಸಂತ ಸೇವಲಾಲ್ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಬಂಜಾರ ಸಮಾಜದ ಯುವಕರು ಮಹಿಳೆಯರು ಡಿ.ಜೆ ಹಾಡಿಗೆ ಮಾಡಿದ ನೃತ್ಯಗಳು ನೋಡುಗರ ಕಣ್ಮನ ಸೆಳೆದವು. ಪ.ಪಂ.ಅಧ್ಯಕ್ಷ ಹಾಜಿ ಚೌದ್ರಿಿ, ಉಪಾಧ್ಯಕ್ಷೆ ಲಕ್ಷ್ಮಿಿ ಆದೆಪ್ಪ ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ಮಲ್ಲಿಕಾರ್ಜುನಗೌಡ ಬಲ್ಲಟಗಿ, ಮೌನೇಶ ಪಾಟೀಲ, ಶರಣಪ್ಪಗೌಡ ಮದ್ಲಾಾಪೂರ, ದಾನಪ್ಪ, ರಂಜಿತ್, ರಾಮು, ಶಿವರಾಜ ನಾಯಕ ಚಾಗಭಾವಿ, ರಾಮಾಚಾರಿ, ಸಮಾಜದ ಮುಖಂಡರಾದ ಭೀಮೇಶಪ್ಪ ಪೂಜಾರಿ, ಶೇಖರಪ್ಪ ರಾಠೋಡ್, ಪರಮೇಶ ನಾಯ್ಕ ಮುರ್ಕಿಗುಡ್ಡ, ಅಮರೇಶ ಪವಾರ್, ಗೋವಿಂದ, ಪಾಂಡುರಂಗ ನಾಯ್ಕ, ಜಯರಾಮ ನಾಯ್ಕ, ಕಮಲಪ್ಪ, ನಾಯ್ಕ, ಗೊನ್ನಪ್ಪ, ಜಗನಪ್ಪ, ಮೀಟಪ್ಪ, ಕೇಶಪ್ಪ, ಕೋನಪ್ಪ, ನಿವೃತ್ತ ಎಎಸ್ಐ ಚನ್ನಪ್ಪ, ಮಂಜುಳಾ ಕಡದಿನ್ನಿಿ ಕ್ಯಾಾಂಪ್, ಶ್ರೀನಿವಾಸ ನಾಯ್ಕ್, ರಾಮು ನಾಯ್ಕ, ರಾಜು ರಾಠೋಡ್, ಶಾಂತಪ್ಪ ಪವಾರ್, ದೇವೇಂದ್ರ ನಾಯ್ಕ್ ಸೇರಿದಂತೆ ನೂರಾರು ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
ಸಿರವಾರ : ಅದ್ದೂರಿ ಸಂತ ಸೇವಲಾಲ್ ಜಯಂತಿ ಬಂಜಾರ ಜನಾಂಗದ ಮಹಾತ್ಮ ಸಂತ ಸೇವಾಲಾಲ್ – ವೆಂಕಟಪ್ಪ ನಾಯಕ

