ಸುದ್ದಿಮೂಲ ವಾರ್ತೆ ರಾಯಚೂರು, ೆ.16:
ಭಾರತ ಸರ್ಕಾರ ರಾಷ್ಟ್ರಗೀತೆಗಿಂತ ರಾಷ್ಟ್ರಗಾನಕ್ಕೆೆ ಆದ್ಯತೆ ನೀಡುವಂತೆ ಆದೇಶ ಹೊರಡಿಸಿದ್ದು ಇದು ಸಂವಿಧಾನದ ಭಾವವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸಿಪಿಐ(ಎಂ) ಆಕ್ಷೇಪಿಸಿದೆ.
ಈ ಬಗ್ಗೆೆ ಜಿಲ್ಲಾಾ ಕಾರ್ಯದರ್ಶಿ ಕೆ.ಜಿ ವೀರೇಶ ಹೇಳಿಕೆ ನೀಡಿದ್ದು ಭಾರತ ಸಂವಿಧಾನದ ವಿಧಿ 51ಅ(ಅ) ಪ್ರಕಾರ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ಸ್ಪಷ್ಟವಾಗಿ ಹೇಳಲಾಗಿದೆ. ಸಮಗ್ರ ಚರ್ಚೆಯ ನಂತರ ಸಂವಿಧಾನ ಸಭೆಯು ರಾಷ್ಟ್ರಗಾನದ ಕುರಿತು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ನೀಡಿದ ಹೇಳಿಕೆಯನ್ನು ಅಂಗೀಕರಿಸಿತು. ಅದರಲ್ಲಿ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ನಿರ್ಧರಿಸಲಾಗಿತ್ತು. ಇತ್ತೀಚಿನ ಆದೇಶದ ಮೂಲಕ ಸರ್ಕಾರವು ಉಳಿದ ನಾಲ್ಕು ಚರಣಗಳನ್ನು ಸೇರಿಸಲು ಯತ್ನಿಿಸುತ್ತಿಿದೆ. ಅವು ಭಾರತೀಯ ಗಣರಾಜ್ಯದ ಧರ್ಮನಿರಪೇಕ್ಷ ಸ್ವಭಾವಕ್ಕೆೆ ಹೊಂದಿಕೆಯಾಗುವು ದಿಲ್ಲವೆಂದು ಸಂವಿಧಾನ ಸಭೆ ಅಭಿಪ್ರಾಾಯಪಟ್ಟಿಿತ್ತು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದುರುದ್ದೇಶಗಳಿಂದ ರಾಷ್ಟ್ರಗಾನ ಮತ್ತು ರಾಷ್ಟ್ರಗೀತೆಯ ವಿಷಯದಲ್ಲಿ ಒಂದು ಅನಗತ್ಯ ವಿವಾದ ಸೃಷ್ಟಿಿಸಲು ಪ್ರಯತ್ನಿಿಸುತ್ತಿಿದೆ. ಇಂತಹ ಐತಿಹಾಸಿಕ ಸಾಂಸ್ಕೃತಿಕ ಚಿಹ್ನೆೆಗಳೊಂದಿಗೆ ಬಿಜೆಪಿ ಸರ್ಕಾರ ಆಟವಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾಾರೆ.
ರಾಷ್ಟ್ರಗೀತೆಗಿಂತ ರಾಷ್ಟ್ರಗಾನಕ್ಕೆ ಆದ್ಯತೆಗೆ ಸಿಪಿಐಎಂ ಆಕ್ಷೇಪ

