ಸುದ್ದಿಮೂಲ ವಾರ್ತೆ ಜಾಲಹಳ್ಳಿ, ೆ.16:
ಬಸ್ ನಿಲ್ದಾಾಣದ ಹತ್ತಿಿರ ಇರುವ ಕೇರಿ ಸಿದ್ದೇಶ್ವರ ದೇವಾಲಯದ ಪಲ್ಲಕ್ಕಿಿ ಸೇವೆ ರವಿವಾರ ಬಹಳ ಅದ್ದೂರಿಯಾಗಿ
ಜರುಗಿತು.
ಶಿವರಾತ್ರಿಿ ಅಂಗವಾಗಿ ನೂತನ ಪಲ್ಲಕ್ಕಿಿಯಲ್ಲಿ ಕೇರಿ ಸಿದ್ದೇಶ್ವರ ಮತ್ತು ತಾಯಮ್ಮ ದೇವರುಗಳ ಮೂರ್ತಿಗಳನ್ನು ಇಟ್ಟು ಗ್ರಾಾಮದ ಹೃದಯ ಭಾಗದಲ್ಲಿ ಇರುವ ಈಶ್ವರ ದೇವಾಲಯದ ವರೆಗೆ ಪಲ್ಲಕ್ಕಿಿ ಮೆರವಣಿಗೆ ಮಾಡಲಾಯಿತು.
ಪಲ್ಲಕ್ಕಿಿ ಸೇವೆಯಲ್ಲಿ ಡೊಳ್ಳು ಕುಣಿತ ಮತ್ತು ವಿಶೇಷ ಹಲಗಿ ಕುಣಿತ ಬಹಳ ಆಕರ್ಷಣೆಯಾಗಿತ್ತು. ಪಲ್ಲಕ್ಕಿಿ ಉತ್ಸವವನ್ನು ಪ್ರತಿವರ್ಷ ಮಾಡುವ ಪರಂಪರೆಯನ್ನು ಮುಂದುವರಿಸುತ್ತೇವೆ ಎಂದು ದೇವಾಲಯದ ಮುಖ್ಯಸ್ಥರಾದ ಬಸನಗೌಡ ಪತ್ರಿಿಕೆಗೆ ತಿಳಿಸಿದರು.
ಮುಂದಿನ ದಿನಮಾನದಲ್ಲಿ ಕೇರಿ ಸಿದ್ದೇಶ್ವರ ದೇವಾಲಯದಲ್ಲಿ ಶಿವರಾತ್ರಿಿ ಅಂಗವಾಗಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಾಲಹಳ್ಳಿಯಲ್ಲಿ ಶಿವರಾತ್ರಿ ಅಂಗವಾಗಿ ಕೇರಿ ಸಿದ್ದೇಶ್ವರ ಹಾಗೂ ತಾಯಮ್ಮ ಪಲ್ಲಕ್ಕಿ ಸೇವೆ

