ಸುದ್ದಿಮೂಲ ವಾರ್ತೆ ಕಲಬುರಗಿ, ೆ.17:
ಕನ್ನಡ ಭಾಷೆ ಮತ್ತು ಸಾಹಿತ್ಯವು ಕೇವಲ ಕರುನಾಡು, ಭಾರತಕ್ಕೆೆ ಸೀಮಿತವಾಗದೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೇ ತಲುಪುವಂತಾಗಬೇಕು ಎಂದು ಶರಣಬಸವೇಶ್ವರ ವಿದ್ಯಾಾವರ್ಧಕ ಸಂಘದ ಅಧ್ಯಕ್ಷೆ ಡಾ. ದಾಕ್ಷಾಯಣಿ ಎಸ್. ಅಪ್ಪ ಆಶಯ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದ ಆವರಣದ ಬಾಪೂಗೌಡ ದರ್ಶನಾಪುರ ರಂಗಮಂದಿರದಲ್ಲಿ ನಡೆಯುತ್ತಿಿರುವ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಮಂಗಳವಾರ ಸಮ್ಮೇಳನಾಧ್ಯಕ್ಷರ ಬದುಕು-ಬರಹ ವಿಶೇಷ ಉಪನ್ಯಾಾಸದಲ್ಲಿ ಭಾಗಿಯಾಗಿ ಮಾತನಾಡಿದರು.
ಕನ್ನಡ ಸಾಹಿತ್ಯವನ್ನು ಜಗತ್ತಿಿನಾದ್ಯಂತ ಪಸರಿಸಲು ತಾಂತ್ರಿಿಕತೆಯನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ವೈದ್ಯರು, ಇಂಜಿನಿಯರ್ಗಳು ಹಾಗೂ ಪ್ರತಿಯೊಬ್ಬ ವಿದ್ಯಾಾವಂತ ಕನ್ನಡಿಗರು ತಮ್ಮ ವೃತ್ತಿಿಯ ಜೊತೆಗೆ ಕನ್ನಡ ಸಾಹಿತ್ಯವನ್ನು ಸಂಗ್ರಹಿಸಿ, ಅದನ್ನು ವಿಶ್ವಮಟ್ಟಕ್ಕೆೆ ಕೊಂಡೊಯ್ಯಲು ಶ್ರಮಿಸಬೇಕು ಎಂದು ಹೇಳಿದರು.
ಹಳೆಯ ಬೇರು, ಹೊಸ ಚಿಗುರು ಎನ್ನುವಂತೆ ಹಿರಿಯ ಸಾಹಿತಿಗಳ ಅನುಭವದೊಂದಿಗೆ ಯುವಕರನ್ನು ಪ್ರೋೋತ್ಸಾಾಹಿಸಿ ಕನ್ನಡವನ್ನು ಬೆಳೆಸಬೇಕಿದೆ. ಶರಣರ ಸಾಹಿತ್ಯ ಮಾರ್ಗ ನಮಗೆ ಎಂದಿಗೂ ಆದರ್ಶವಾಗಿದೆ ಎಂದು ತಿಳಿಸಿದರು.
ಪೂಜ್ಯ ಶರಣಬಸಪ್ಪ ಅಪ್ಪ ಮತ್ತು ದೊಡ್ಡಪ್ಪ ಅಪ್ಪ ಅವರು ಕನ್ನಡದ ಮೇಲೆ ಇಟ್ಟಿಿದ್ದ ಅಪಾರ ಪ್ರೀೀತಿ ಹಾಗೂ ಕನ್ನಡ ನಾಡು ಕಟ್ಟುವಲ್ಲಿ ಅವರು ನೀಡಿದ ಕೊಡುಗೆ ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ಕಲಬುರಗಿ ಜಿಲ್ಲೆಯು ಕನ್ನಡ ಸಾಹಿತ್ಯಕ್ಕೆೆ ತಾಯಿ ಮನೆಯಂತಿದೆ. ಇಲ್ಲಿನ ಸಿರಿವಂತಿಕೆಯ ಸಾಹಿತ್ಯಿಿಕ ಪರಂಪರೆ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.
ಶಾಸಕ ಬಸವರಾಜ ಮತ್ತಿಿಮೂಡ್ ಅವರು ಮಾತನಾಡಿ, ಕಲಬುರಗಿಯನ್ನು ರಾಜ್ಯದ ಉಪರಾಜಧಾನಿಯನ್ನಾಾಗಿ ಮಾಡುವಂತೆ ಸಮ್ಮೇಳನಾಧ್ಯಕ್ಷ ಮುಡಬಿ ಗುಂಡೇರಾವ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಪ್ರಸ್ತಾಾಪಿಸಿದ್ದು, ಅದಕ್ಕೆೆ ತಮ್ಮ ಸಂಪೂರ್ಣ ಬೆಂಬಲವಿದೆ. ಈ ಭಾಗದ ಅಭಿವೃದ್ಧಿಿ ಮತ್ತು ಆಡಳಿತಾತ್ಮಕ ದೃಷ್ಟಿಿಯಿಂದ ಕಲಬುರಗಿಗೆ ಉಪರಾಜಧಾನಿ ಪಟ್ಟ ಸಿಗಬೇಕೆಂಬ ಕೂಗಿನಲ್ಲಿ ನ್ಯಾಾಯವಿದೆ. ಈ ಕುರಿತು ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವೆ ಎಂದರು.
ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಿದ ಶ್ರೀಶೈಲಂ ಸಾರಂಗಮಠದ ಪೂಜ್ಯ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಾಮಿಗಳು ಮಾತನಾಡಿ, ಕಲಬುರಗಿ ಜಿಲ್ಲೆ ಭೌಗೋಳಿಕವಾಗಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಗಡಿಗಳಿಗೆ ಹೊಂದಿಕೊಂಡಿರುವುದರಿಂದ, ಇಲ್ಲಿನ ಭಾಷೆಯಲ್ಲಿ ಆಯಾ ರಾಜ್ಯಗಳ ಪ್ರಭಾವ ಕಾಣುವುದು ಸಹಜ. ಈ ವಿಭಿನ್ನತೆಯ ನಡುವೆಯೂ ನಮ್ಮದು ಗಂಡು ಮೆಟ್ಟಿಿದ ನಾಡು. ಬೆಂಗಳೂರಿನವರು ನಮ್ಮ ಭಾಷೆಯನ್ನು ನೋಡಿ ನಗಬಹುದು ಆದರೆ ನಮ್ಮ ಭಾಷೆಯ ಗತ್ತು ಮತ್ತು ಚೈತನ್ಯವೇ ಬೇರೆ ಎಂದು ಹೆಮ್ಮೆೆಯಿಂದ ನುಡಿದರು.
ಹಿಂದೆಲ್ಲ ಕಲಬುರಗಿಯಲ್ಲಿ ಕನ್ನಡ ಕಲಿಕೆ ಎಷ್ಟು ಕಷ್ಟಕರವಾಗಿತ್ತೆೆಂದರೆ ಉರ್ದು ಬೋರ್ಡ್ಗಳನ್ನು ಹಾಕಿ ಒಳಗೆ ಕನ್ನಡ ಕಲಿಸುವಂತಹ ಪರಿಸ್ಥಿಿತಿ ಇತ್ತು. ಅಂತಹ ಕಠಿಣ ಹಾದಿಯನ್ನು ದಾಟಿ ಇಂದು ಕನ್ನಡ ಸ್ವತಂತ್ರವಾಗಿ ಹೆಮ್ಮರವಾಗಿ ಬೆಳೆದಿರುವುದು ಸಂತಸದ ವಿಷಯ ಎಂದರು.
ಕನ್ನಡ ಸಾಹಿತ್ಯಕ್ಕೆೆ ನಿಜವಾದ ಮೆರುಗು ನೀಡಿದವರು ಬಸವಾದಿ ಶರಣರು. ದಯವೇ ಧರ್ಮದ ಮೂಲವೆಂದು ಸಾರಿದ ಶರಣರ ವಚನಗಳು ಇಂದಿಗೂ ನಮಗೆ ಸ್ಪೂರ್ತಿ. ವಿಜಯಕುಮಾರ್ ತೇಗಲತಿಪ್ಪಿಿ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅತ್ಯುತ್ತಮ ಕೆಲಸ ಮಾಡುತ್ತಿಿದೆ. ಇದು ನಂದಾ ದೀಪದಂತೆ ಪ್ರಜ್ವಲಿಸುತ್ತಿಿದೆ ಎಂದರು. ನರಸಪ್ಪ ಚಿನ್ನಕಟ್ಟಿಿ ಅವರು ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತು ವಿಶೇಷ ಉಪನ್ಯಾಾಸದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮುಡಬಿ ಗುಂಡೇರಾವ, ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆೆ ಅಧ್ಯಕ್ಷೆ ಅಮರೇಶ್ವರಿ ಬಾಬುರಾವ ಚಿಂಚನಸೂರ, ರಾಜ್ಯ ಗುತ್ತಿಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಾಥ ಶೇಖಜಿ, ಮಂಜುನಾಥ ನಾಲವರಕರ್, ಗೋಪಾಲ ನಾಟಿಕಾರ, ಗುರು ಬಂಡಿ, ಪ್ರಶಾಂತಗೌಡ ಮಾಲಿಪಾಟೀಲ, ಮಹೇಶ ಧರಿ ಉಪಸ್ಥಿಿತರಿದ್ದರು. ಅಂಬಾರಾಯ ಮಡ್ಡೆೆ, ವೆಂಕುಬಾಯಿ ರಜಪೂತ ನಿರೂಪಿಸಿದರು. ಮಂಜುನಾಥ ಕಂಬಾಳಿಮಠ ಸ್ವಾಾಗತಿಸಿದರು. ಶಕುಂತಲಾ ಪಾಟೀಲ ವಂದಿಸಿದರು.
ಕನ್ನಡ ಸಾಹಿತ್ಯ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲಿ : ಡಾ.ದಾಕ್ಷಾಯಣಿ ಅಪ್ಪ

