ಸುದ್ದಿಮೂಲ ವಾರ್ತೆ ರಾಯಚೂರು, ೆ.17:
ತಾಲ್ಲೂಕಿನ ಚಂದ್ರಬಂಡಾ ಹಾಗೂ ಬಾಯಿದೊಡ್ಡಿಿ ಗ್ರಾಾಮ ಪಂಚಾಯತಿ ವ್ಯಾಾಪ್ತಿಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾಾನಗೊಂಡ ಕಾಮಗಾರಿಗಳನ್ನು ಕೇಂದ್ರ ಆಡಿಟ್ ತಂಡದ ಅಧಿಕಾರಿ ಕುಮುದ್ ದುಬೆ ಅವರು ೆ.16ರ ಸೋಮವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮೊದಲಿಗೆ ಚಂದ್ರಬಂಡಾ ಗ್ರಾಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಕಾಮಗಾರಿ ಕಡತ, ನೋಂದಣಿ, ಎನ್.ಎಂ.ಎಂ.ಎಸ್. ಹಾಜರಾತಿಗಳಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡರು.
ನಂತರ ಅರಿಸಿಗೇರಾ ತಾಂಡದಲ್ಲಿರುವ ದನದ ಕೊಟ್ಟಿಿಗೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ನಂತರ ನಾಗನದೊಡ್ಡ ಗ್ರಾಾಮದಲ್ಲಿರುವ ಸಾಮಾಜಿಕ ಅರಣ್ಯದಲ್ಲಿ ಕಂದಕ ಬದು ನಿರ್ಮಾಣ, ದನದ ಕೊಟ್ಟಿಿಗೆ ಹಾಗೂ ಚಿಂತಲ ಕುಂಟ ಅಮೃತ ಸರೋವರ ಕೆರೆ ಕಾಮಗಾರಿಗಳನ್ನು ವೀಕ್ಷಿಸಿದರು.
ನಂತರ ಚಂದ್ರಬಂಡಾ ಗ್ರಾಾಮದಲ್ಲಿರುವ ಕೀರಾಕುಂಟ ಅಮೃತ ಸರೋವರ ಕೆರೆ ಕಾಮಗಾರಿ ಪರಿವೀಕ್ಷಣೆ ಮಾಡಿದರು. ನಂತರ ಬಾಯಿ ದೊಡ್ಡಿಿ ಗ್ರಾಾಮ ಪಂಚಾಯತಿಯ ಕಡಗಂದೊಡ್ಡಿಿ ಗ್ರಾಾಮದ ಮೆಟಲ್ ರಸ್ತೆೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.
ನಂತರ ಕುರಬದೊಡ್ಡಿಿ ಗ್ರಾಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆೆ ಭೇಟಿ ನೀಡಿ ಕೂಲಿ ಕಾರ್ಮಿಕರ ಎನ್.ಎಂ.ಎಂ.ಎಸ್. ಹಾಜರಾತಿ, ಉದ್ಯೋೋಗ ಚೀಟಿ ಮತ್ತು ಕೆಲಸದ ಪ್ರಮಾಣ ಪರಿಶೀಲಿಸಿದರು. ನಂತರ ಚಂದ್ರಬಂಡಾ ಗ್ರಾಾಮ ಪಂಚಾಯತಿಯ ಕಟ್ಲಟ್ಕೂರು ಗ್ರಾಾಮದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಸಹಾಯಕ ನಿರ್ದೇಶಕರು ಹನುಮಂತ, ಪಂಚಾಯತ ಅಭಿವೃದ್ಧಿಿ ಅಧಿಕಾರಿ, ಡಿಪಿಎಮ್, ತಾಂತ್ರಿಿಕ ಸಂಯೋಜಕರು, ತಾಂತ್ರಿಿಕ ಸಹಾಯಕರು, ಐಇಸಿ ಸಂಯೋಜಕರು ಸೇರಿದಂತೆ ಗ್ರಾಾಮ ಪಂಚಾಯತ್ ಸಿಬ್ಬಂದಿಗಳು ಇದ್ದರು.
ಕೇಂದ್ರ ತಂಡದ ಅಧಿಕಾರಿಗಳಿಂದ ನರೇಗಾ ಕಾಮಗಾರಿ ಪರಿಶೀಲನೆ

