ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.20:
ನಕಲಿ ಪಿಎಚ್ಡಿ ಪಡೆದವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾಾರ್ಥಿ ಪರಿಷತ್ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆೆ ಮನವಿ ಸಲ್ಲಿಸಿದೆ.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಜಿಲ್ಲಾಾ ಸಂಚಾಲಕ ಕೆ. ದಿಲೀಪ್ ಕುಮಾರ್ ಅವರು, ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ನಕಲಿ ಪಿಎಚ್ಡಿ ಪದವಿಗಳನ್ನು ಹೊಂದಿರುವವರು ಅತಿಥಿ ಉಪನ್ಯಾಾಸಕರಾಗಿ ಹಾಗೂ ಉಪನ್ಯಾಾಸಕರಾಗಿ ಸೇವೆ ಸಲ್ಲಿಸುತ್ತಿಿದ್ದಾಾರೆ. ನಕಲಿ ಪಿಎಚ್ಡಿ ಪಡೆದವರ ಸಂಖ್ಯೆೆ ದಿನೇ ದಿನೆ ಹೆಚ್ಚಾಾಗುತ್ತಿಿದ್ದು, ಅನೇಕರು ಹುದ್ದೆೆಗಳಿಗೆ ರಾಜೀನಾಮೆ ಸಲ್ಲಿಸುತ್ತಿಿದ್ದಾಾರೆ. ಕಾರಣ ಸರ್ಕಾರ ನಕಲಿ ಪಿಎಚ್ಡಿ ಪದವೀಧರರನ್ನು ತ್ವರಿತವಾಗಿ ಪತ್ತೆೆ ಮಾಡಿ, ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.
ನಕಲಿ ಪಿಎಚ್ಡಿ ಪದವಿಗಳನ್ನು ಸಲ್ಲಿಸಿ, ನೇಮಕಾತಿ ಆಗಿ ರಾಜೀನಾಮೆ ನೀಡುವುದರಿಂದ ಖಾಲಿ ಬೀಳುವ ಹುದ್ದೆೆಗಳನ್ನು ಸರ್ಕಾರ ತ್ವರಿತವಾಗಿ ಭರ್ತಿ ಮಾಡಬೇಕು. ಇಲ್ಲವಾದಲ್ಲಿ ಪೂರ್ಣಕಾಲಿಕ ಹುದ್ದೆೆಗಳಿಗೆ ಉಪನ್ಯಾಾಸಕ ನೇಮಕಾತಿಗೆ ಅರ್ಜಿ ಆಹ್ವಾಾನಿಸಬೇಕು ಎಂದು ಅವರು ಕೋರಿದ್ದಾಾರೆ.
ತಳವಾರ ಭರತ್, ದರ್ಶನ್, ಲೋಹಿತ್, ಮಾರುತಿ, ಕಾವ್ಯ, ಪೂರ್ಣಿಮ, ಆರ್.ಎನ್. ರಿಂದು, ಕೀರ್ತಿ, ಅರ್ಚನ ಹಾಗೂ ಕಾರ್ಯಕರ್ತರು ಪ್ರತಿಭಟನೆಯ ನೇತೃತ್ವವಹಿಸಿದ್ದರು.
ನಕಲಿ ಪಿಎಚ್ಡಿ : ಶಿಸ್ತುಕ್ರಮಕ್ಕೆ ಎಬಿವಿಪಿ ಆಗ್ರಹ

