ಸುದ್ದಿಮೂಲ ವಾರ್ತೆ ರಾಯಚೂರು, ೆ.20:
ಆರ್ಬಿಎಸ್ಕೆ ವೈದ್ಯಕೀಯ ತಂಡವು ಕ್ಷೇತ್ರ ಮಟ್ಟದಲ್ಲಿ ಗುರುತಿಸಿದ ನ್ಯೂನ್ಯತೆಯುಳ್ಳ ಮಕ್ಕಳಿಗೆ ತಜ್ಞ ವೈದ್ಯರಿಂದ ೆ.20ರಂದು ತಪಾಸಣೆ ಶಿಬಿರ ನಡೆಯಿತು.
ರಾಯಚೂರು ನಗರದ ತಾಯಿ ಮಕ್ಕಳ ಆಸ್ಪತ್ರೆೆಯಲ್ಲಿ ನಡೆದ ಈ ಶಿಬಿರದಲ್ಲಿ ಹುಟ್ಟಿಿನಿಂದ 18 ವರ್ಷದೊಳಗಿನ ಜನ್ಮಜಾತ ಹೃದಯ ಖಾಯಿಲೆಯ 14 ಮಕ್ಕಳು, ಸೀಳು ತುಟಿ, ಸೀಳು ಅಂಗಳದ 3 ಮಕ್ಕಳಿಗೆ ತಪಾಸಣೆ ಮಾಡಲಾಯಿತು. ಮಕ್ಕಳ ತಜ್ಞ ಡಾ.ಇಮ್ರಾಾನ್ ತಪಾಸಣೆ ನಡೆಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 12 ಆರ್ಬಿಎಸ್ಕೆ ವೈದ್ಯಕೀಯ ತಂಡಗಳ ಕಾರ್ಯನಿರ್ವಹಿಸುತ್ತಿಿದ್ದು, ಪ್ರತಿ ತಂಡದಲ್ಲಿ ವೈದ್ಯರು, ಶೂಶ್ರೂಷಕರು, ನೇತ್ರಾಾಧಿಕಾರಿಗಳು ಇದ್ದು, ಅಂಗನವಾಡಿ, ಶಾಲೆಗಳಲ್ಲಿ ತಪಾಸಣೆ ಕೈಗೊಂಡು ರಾಯಚೂರಿನ ತಾಯಿ ಮಕ್ಕಳ ಆಸ್ಪತ್ರೆೆಯಲ್ಲಿ ಮುಖ್ಯ ವೈದ್ಯಾಾಧಿಕಾರಿ ಡಾ.ಪ್ರಜ್ವಲ್ ಕುಮಾರ್ ನೇತೃತ್ವದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಮಕ್ಕಳ ತಜ್ಞರಿಂದ ತಪಾಸಣೆ ಮಾಡಿಸಲಾಗುತ್ತದೆ. ಇದಕ್ಕೆೆ ನವೋದಯ ಹಾಗೂ ರಿಮ್ಸ್ ಆಸ್ಪತ್ರೆೆಯ ತಜ್ಞರು ಕೈಜೋಡಿಸಿದ್ದಾರೆ.
ಜಿಲ್ಲಾ ಆರಂಭಿಕ ಮಧ್ಯಸ್ಥಿಿಕೆ ಕೇಂದ್ರ: ಮಕ್ಕಳ ಬೆಳವಣಿಗೆಗೆ ಕಾರಣವಾಗುವ ನಾಲ್ಕು ಕಾರಣಗಳನ್ನು ಗುರುತಿಸಿ ಮಕ್ಕಳ ತಜ್ಞರು, ಇಎನ್ಟಿ ತಜ್ಞರು, ಮಾನಸಿಕ ತಜ್ಞರು, ಫೀಜಿಯೋಥೆರಪಿಸ್ಟ್ ಅವರು ಅಗತ್ಯ ಚಿಕಿತ್ಸೆೆ, ಸಲಹೆಗಳನ್ನು ನೀಡುತ್ತಾಾರೆ. ಪ್ರಸ್ತುತ ಪ್ರತಿದಿನ 15-20 ಮಕ್ಕಳು ಕೇಂದ್ರದ ಸದುಪಯೋಗ ಪಡೆಯುತ್ತಿಿದ್ದಾರೆ.
ಖಾಸಗಿ ಆಸ್ಪತ್ರೆೆಗಳಲ್ಲಿ ಸಹ ಚಿಕಿತ್ಸೆೆ : ಜನ್ಮಜಾತ ಹೃದಯ ಸಂಬಂಧಿ ಖಾಯಿಲೆಗಳ ತುರ್ತು ಶಸಚಿಕಿತ್ಸೆೆಗಳಿಗಾಗಿ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡ ಬೆಂಗಳೂರಿನ ಆಸ್ಪತ್ರೆೆಗಳಿಗೆ ಕಳುಹಿಸಲಾಗುತ್ತಿಿದೆ.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣಾಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ.
ಸಿಹೆಚ್ಡಿ ಪತ್ತೆೆಗಾಗಿ ರಾಯಚೂರು ಜಿಲ್ಲೆಯಲ್ಲಿ ಓಪೆಕ್ ಸೂಪರ್ ಸ್ಪೆೆಶಾಲಿಟಿ ಆಸ್ಪತ್ರೆೆಯೊಂದಿಗೆ ಇಕೊ ಟೆಸ್ಟ್ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರಿಂದ ಸಮಯ ಉಳಿತಾಯವಾಗಲಿದೆ. ಎಲ್ಲ ತಾಲೂಕುಗಳಲ್ಲಿ ಗುರುತಿಸಲ್ಪಟ್ಟ ಸಮಸ್ಯೆೆ ಇರುವ ಮಕ್ಕಳನ್ನು ಇಲ್ಲಿ ತಪಾಸಣೆ ಮಾಡಲಾಗುವುದು ಎಂದರು.
ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ನಂದಿತಾ ಎಮ್ ಎನ್ ಮಾತನಾಡಿದರು.
ಇಂದಿನ ತಪಾಸಣೆ ವೇಳೆ ಡಾ.ಸಂಧ್ಯಾಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಹಿರಿಯ ಶುಶ್ರೂಷಣಾಧಿಕಾರಿ ಸಲೋಮಿ, ಡಿವೈಹೆಚ್ಇಓ ಬಸಯ್ಯ, ಡಿಪಿಎಮ್ ನವೀನ್ಕುಮಾರ, ಆರ್ಬಿಎಸ್ಕೆ ಕನ್ಸ್ಲ್ಟಂಟ್ ಸಿದ್ದಮ್ಮ, ಬಿಹೆಚ್ಇಓ ಸರೋಜಾ ಕೆ, ಡಿಇಐಸಿ ತಂಡದ ಸಿಬ್ಬಂದಿ ಉಪಸ್ಥಿಿತರಿದ್ದರು.
ನ್ಯೂನ್ಯತೆಯುಳ್ಳ ಮಕ್ಕಳಿಗೆ ತಜ್ಞ ವೈದ್ಯರಿಂದ ತಪಾಸಣೆ ಶಿಬಿರ

