ಸುದ್ದಿಮೂಲ ವಾರ್ತೆ ಮಾನ್ವಿ, ೆ.20:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆೆಸ್ ತೊರೆದು ಬಿಜೆಪಿ ಪಕ್ಷಕ್ಕೆೆ ಹೋಗಿದ್ದ ಮುಖಂಡ ಅರುಣ್ ಚಂದಾ ಸೇರಿದಂತೆ ಇತರ ಮುಖಂಡರಾದ ಪ್ರೇೇಮ್ ಕುಮಾರ, ಲೋಕೇಶ ಕುಮಾರ, ನರಸಿಂಹ ಹೆಳವರ, ಶ್ರೀನಿವಾಸ ಮುಂತಾದವರು ಶುಕ್ರವಾರ ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯ ನಾಯಕ, ಸಂಸದ ಜಿ.ಕುಮಾರ ನಾಯಕ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆೆಸ್ ಪಕ್ಷಕ್ಕೆೆ ಸೇರ್ಪಡೆಯಾದರು.
ಪಟ್ಟಣದ ಭಾರತ ಜೋಡೊ ಭವನದಲ್ಲಿ ಮುಖಂಡರನ್ನು ಪಕ್ಷಕ್ಕೆೆ ಬರಮಾಡಿಕೊಂಡ ಸಚಿವ ಬೋಸರಾಜು ಮಾತನಾಡಿ, ವಿವಿಧ ಕಾರಣಗಳಿಂದ ಕಾಂಗ್ರೆೆಸ್ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆೆ ಹೋಗಿರುವವರು ಹಾಗೂ ಬೇರೆ ಪಕ್ಷಗಳ ಮುಖಂಡರನ್ನು ಕಾಂಗ್ರೆೆಸ್ ಪಕ್ಷಕ್ಕೆೆ ಮುಕ್ತವಾಗಿ ಸ್ವಾಾಗತಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷರಾದ ಅಬ್ದುಲ್ ಗೂರ್ಸಾಬ್, ಗ್ಯಾಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಖಾಲೀದ್ ಗುರು ಸೇರಿದಂತೆ ಕಾಂಗ್ರಸ್ ಪಕ್ಷದ ಮುಖಂಡರು ಇದ್ದರು.
ಮಾನ್ವಿ : ಬಿಜೆಪಿಯ ಅರುಣ್ ಚಂದಾ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

