ಸುದ್ದಿಮೂಲ ವಾರ್ತೆ ಲಿಂಗಸಗೂರು, ೆ.20:
ಪುನಾತನ ಪ್ರಾಾಚೀನ ಪಾರಂಪರಿಕ ವೈದ್ಯ ಪದ್ಧತಿ ಹಾಗೂ ಪಾರಂಪರಿಕ ವೈದ್ಯರನ್ನು ಉಳಿಸಿ ಬೆಳೆಸುವ ನಿಟ್ಟಿಿನಲ್ಲಿ ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕೆಂದು ಕಲ್ಯಾಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಆಗ್ರಹಿಸಿದೆ.
ಕಲ್ಯಾಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ವೈದ್ಯ ಆನಂದ ಡಿ. ಹೇರೂರು ಅವರು, ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಾಳ ಅವರಿಗೆ ಮನವಿ ಸಲ್ಲಿಸಿ, ಪಾರಂಪರಿಕ ವೈದ್ಯರ ಸಮಸ್ಯೆೆಗಳನ್ನು ಸದನದಲ್ಲಿ ಪ್ರಸ್ತಾಾಪಿಸುವಂತೆ ಒತ್ತಾಾಯಿಸಿದರು. ಈ ಕುರಿತು ಮಾತನಾಡಿದ ಅವರು, ‘‘ಕಲ್ಯಾಾಣ ಕರ್ನಾಟಕ ಭಾಗದಲ್ಲಿ 3 ಸಾವಿರಕ್ಕೂ ಅಧಿಕ ಪಾರಂಪರಿಕ ವೈದ್ಯರು ಹಲವು ತಲೆಮಾರುಗಳಿಂದ ಪಾರಂಪರಿಕ ವೈದ್ಯ ಪದ್ಧತಿಯನ್ನು ಅನುಸರಿಸುತ್ತಾಾ ಸೇವೆ ಸಲ್ಲಿಸುತ್ತಿಿದ್ದಾಾರೆ. ಸಣ್ಣ ಕಾಯಿಲೆಯಿಂದ ಹಿಡಿದು ಮಾರಣಾಂತಿಕ ಕಾಯಿಲೆಗಳವರೆಗೆ ಚಿಕಿತ್ಸೆೆ ನೀಡುತ್ತಿಿರುವ ಇವರು, ಆಸ್ಪತ್ರೆೆಗಳಲ್ಲಿ ಗುಣಮುಖವಾಗದ ಹಲವಾರು ಕಾಯಿಲೆಗಳನ್ನು ಯಶಸ್ವಿಿಯಾಗಿ ಗುಣಪಡಿಸಿರುವ ದಾಖಲೆಗಳಿವೆ ಪಾರಂಪರಿಕ ವೈದ್ಯ ಪದ್ಧತಿ ಸನಾತನ ಹಾಗೂ ಪ್ರಾಾಚೀನ ವೈದ್ಯ ಪದ್ಧತಿಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ಜವಾಬ್ದಾಾರಿ ಸರ್ಕಾರದ ಮೇಲಿದೆ. ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡಬೇಕೆಂದು ಪಾರಂಪರಿಕ ವೈದ್ಯರ ಹಕ್ಕುಗಳ ರಕ್ಷಣೆಗೆ ಸದನದಲ್ಲಿ ಧ್ವನಿಯೆತ್ತುವಂತೆ ವೈದ್ಯ ಆನಂದ ಹೇರೂರು ಮನವಿ ನೀಡಿದರು.

