ಸುದ್ದಿಮೂಲ ವಾರ್ತೆ ಸಿಂಧನೂರು, ೆ.20:
ಬೆಂಗಳೂರಿನ ಬಿಜೆಪಿ ಶಾಸಕ ಭೈರತಿ ಬಸವರಾಜು ನಿವಾಸಕ್ಕೆೆ ಕೊಪ್ಪಳ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಭೇಟಿ ನೀಡಿ, ಭೈರತಿ ಬಸವರಾಜು ಬಂಧನ ಹಿನ್ನೆೆಲೆಯಲ್ಲಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ರಾಜ್ಯ ಕಾಂಗ್ರೆೆಸ್ ಸರಕಾರ ಬಿಜೆಪಿ ಶಾಸಕರನ್ನು, ಮುಖಂಡರನ್ನು ಟಾರ್ಗೆಟ್ ಮಾಡುತ್ತಿಿದೆ. ಭೈರತಿ ಬಸವರಾಜು ವಿರುದ್ದ ಸುಳ್ಳು ಕ್ರಿಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧಿಸುವ ಮೂಲಕ ತೇಜೋವಧೆ ಮಾಡಲು ಹೊರಟಿದೆ. ರಾಜಕೀಯವನ್ನು ರಾಜಕೀಯವಾಗಿಯೇ ಎದುರಿಸಬೇಕು. ರಾಜಕೀಯವಾಗಿ ಎದುರಿಸಲಾಗದೇ ಕುತಂತ್ರ ಮಾಡುತ್ತಿಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಕಾಂಗ್ರೆೆಸ್ ನಾಯಕರ ನಡೆಯನ್ನು ಕೆ.ವಿರೂಪಾಕ್ಷಪ್ಪ ತೀವ್ರವಾಗಿ ಖಂಡಿಸಿದ ಅವರು, ಬಸವರಾಜು ಭೈರತಿ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಶಾಸಕ ಭೈರತಿ ಬಸವರಾಜು ಕುಟುಂಬಸ್ಥರು ಇದ್ದರು.
ಬೆಂಗಳೂರಿನ ಬಿಜೆಪಿ ಶಾಸಕ ಭೈರತಿ ಬಸವರಾಜ ನಿವಾಸಕ್ಕೆೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಭೇಟಿ

