ಸುದ್ದಿಮೂಲ ವಾರ್ತೆ ರಾಯಚೂರು, ೆ.20:
ಸಮಾಜದಲ್ಲಿ ಸಾಮೂಹಿಕ ವಿವಾಹಗಳು ಹೆಚ್ಚಾಾಗಿ ನಡೆಸುವ ಮೂಲಕ ಪಾಲಕರ ಆರ್ಥಿಕ ಹೊರೆ ತಗ್ಗಿಿಸಿದಂತಾಗಲಿದೆ ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.
ಅವರು ತಾಲೂಕಿನ ಗಾರಲದಿನ್ನಿಿ ಗ್ರಾಾಮದ ಶ್ರೀ ಶಿವಾನಂದ ಮಠದಲ್ಲಿ ಸದ್ಗುರು ಸರ್ವಜ್ಞ ಕವಿ ಜಯಂತಿ ನಿಮಿತ್ತ 13ನೇ ವರ್ಷದ ಸತ್ಸಂಗ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಮಾತನಾಡಿದರು. ಮಠ ಮಾನ್ಯಗಳು ಸಮಾಜಮುಖಿ ಕಾರ್ಯಗಳನ್ನು ಶತಶತಮಾನಗಳಿಂದ ಮಾಡುತ್ತಿಿವೆ. ಶಿಕ್ಷಣ, ವಿದ್ಯಾಾರ್ಥಿಗಳಿಗೆ ಪ್ರಸಾದ, ವಸತಿ ಸೌಕರ್ಯದ ಜೊತೆ ಆರೋಗ್ಯ, ನೈತಿಕ ವೌಲ್ಯ ಬೆಳೆಸುತ್ತಿಿವೆ ಎಂದು ಶ್ಲಾಾಘಿಸಿದರು.
ಶ್ರೀ ಶಿವಾನಂದ ಮಠದ ಶ್ರೀಗಳು ಭಕ್ತರ ಸಹಕಾರದೊಂದಿಗೆ ಸಾಮೂಹಿಕವಾಗಿ ಉಚಿತ ವಿವಾಹ ಮಾಡುವ ಮೂಲಕ ಬಡ, ಮಧ್ಯಮ ವರ್ಗದ ಪಾಲಕರು ಸಾಲ ಮಾಡುವುದು ತಪ್ಪಲಿದೆ. ಅಲ್ಲದೆ ಸರಳ ಮದುವೆಗಳು ಜಾತ್ಯಾಾತೀತತೆ ಪ್ರಜ್ಞೆ ಬೆಳೆಸುತ್ತವೆ ಎಂದರು. ನವ ದಂಪತಿಗಳು ಉತ್ತಮ ಬದುಕು ಕಟ್ಟಿಿಕೊಂಡು ಸಮಾಜಕ್ಕೆೆ ಆದರ್ಶಗಳ ಬಿತ್ತುವಂತೆ ಶುಭ ಕೋರಿದರು.
ಹಂಗರಕಿಯ ಪೂಜ್ಯ ಶ್ರೀ ವೌನೇಶ ಬಡಿಗೇರಾ ಗರಗ ಅವರು ವಿಶೇಷ ಉಪನ್ಯಾಾಸ ನೀಡಿದರು.
ಕಾರ್ಯಕ್ರಮದ ಸಾನ್ನಿಿಧ್ಯವನ್ನು ಗರಗದ ಮಡಿವಾಳೇಶ್ವರ ಮಠದ ಶ್ರೀ ಆತ್ಮರಾಮ ಮಹಾಸ್ವಾಾಮೀಜಿ, ಕಿಲ್ಲೆೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ವಹಿಸಿದ್ದರು. ಹಂಗರಕಿಯ ಶ್ರೀ ಮಡಿವಾಳಪ್ಪ ಲಥ್ಗಿಿಗಟ್ಟಿಿ ಅವರು ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಿದವು. ಹೀರಾಪೂರದ ಶಂಕರಾಚಾರಿ ಮಠ ಶ್ರೀ ಹನುಮಂತಪ್ಪ ಗುರುಗಳು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರವಿಪಾಟೀಲ, ದೊಡ್ಡ ಶರಣಪ್ಪಗೌಡ ಪೊ.ಪಾಟೀಲ, ತಿಪ್ಪಯ್ಯ ಶೆಟ್ಟಿಿಘಿ, ನಾಗನಗೌಡ ಹರವಿ, ದೇವಮಿತ್ರ ವಕೀಲ, ಸಿದ್ದನಗೌಡ ಪೋ ಪಾಟೀಲ, ವೀರನಗೌಡ ಮಟಮಾರಿ, ಲಕ್ಷ್ಮೀವೆಂಕಟೇಶ ನಾಯಕ ದಿನ್ನಿಿಘಿ, ಜ್ಯೋೋತಿ ಹಂಪನಗೌಡ,ಲಕ್ಷ್ಮಣ ನಾಯಕ, ಶಿವಪ್ಪ ನಾಯಕ, ಸಂಚಾಲಕ ಉರುಕುಂದಪ್ಪ ನಾಯಕ ಮಟಮಾರಿ ಸೇರಿದಂತೆ ವಿವಿಧ ಗ್ರಾಾಮಗಳ ಮಠದ ಭಕ್ತರು, ಗ್ರಾಾಪಂ ಸದಸ್ಯರು, ಗಾರಲದಿನ್ನಿಿ ಗ್ರಾಾಮಸ್ಥರಿದ್ದರು.
ಗಾರಲದಿನ್ನಿಯಲ್ಲಿ ಉಚಿತ ಸಾಮೂಹಿಕ ವಿವಾಹ ಆರ್ಥಿಕ ಹೊರೆ ತಗ್ಗಿಸಲು ಸಾಮೂಹಿಕ ವಿವಾಹಗಳೆ ಸೂಕ್ತ – ದದ್ದಲ್

