ಸುದ್ದಿಮೂಲ ವಾರ್ತೆ ಕಲಬುರಗಿ, ೆ.20:
ಗುಲಬರ್ಗಾ ವಿಶ್ವವಿದ್ಯಾಾಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಅನುಪಮ ಸೇವೆ ಪರಿಗಣಿಸಿ ನಾಡಿನ ಹಿರಿಯ ಮುಖಂಡರಾದ ಮುರುಗೇಶ್ ನಿರಾಣಿ, ಪಿ.ಜಿ.ಆರ್ ಸಿಂಧ್ಯಾಾ ಮತ್ತು ಹೋರಾಟಗಾರ ಕೇದಾರ ಲಿಂಗಯ್ಯ ಹಿರೇಮಠ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿಿರು ವುದಕ್ಕೆೆ ಮಾಜಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅಭಿನಂದನೆ ಸಲ್ಲಿಸಿದ್ದಾರೆ.
ಸಮಾಜಮುಖಿಯಾಗಿ ಕೆಲಸ ಮಾಡಿದ ಮೂವರು ಮಹನೀಯರನ್ನು ಗುಲಬರ್ಗಾ ವಿಶ್ವವಿದ್ಯಾಾಲಯವು ಗುರುತಿಸಿ ರಾಜ್ಯಪಾಲರು ಆದ ವಿಶ್ವವಿದ್ಯಾಾಲಯದ ಕುಲಾಧಿಪತಿ ಥಾವರಚಂದ್ ಗೆಹ್ಲೋೋಟ್ ಗೌರವ ಡಾಕ್ಟರೇಟ್ ಪ್ರಶಸ್ತಿಿಗೆ ಆಯ್ಕೆೆ ಮಾಡಿದ್ದು ಸಂತಸದ ಸಂಗತಿಯಾಗಿದೆ. ಮೂವರು ಕೂಡ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅಪಾರ ಕೊಡುಗೆ ನೀಡಿ ಸಮಾಜವನ್ನು ಅಭಿವೃದ್ಧಿಿಯತ್ತ ಕೊಂಡೊಯ್ಯಲು ಶ್ರಮಿಸಿದ್ದಾರೆ.
ಮುರುಗೇಶ್ ನಿರಾಣಿಯವರು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ಸಚಿವರಾಗಿ ಮತ್ತು ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಈ ಭಾಗಕ್ಕೆೆ ಅಪಾರವಾದ ಕೊಡುಗೆ ಕೊಟ್ಟಿಿದ್ದಾರೆ. ಮಾತ್ರವಲ್ಲ ಉದ್ಯಮಿಗಳಾಗಿ ರಾಷ್ಟ್ರ ಕಂಡ ಶ್ರೇಷ್ಠ ಕೈಗಾರಿಕೋದ್ಯ ಮಿಯಾಗಿ ಸಹಕಾರಿ ಸಂಘ ಬೆಳೆಸಿದ ಮಹಾನ್ ವ್ಯಕ್ತಿಿಯಾಗಿದ್ದಾರೆ ಎಂದು ಡಾ. ಜಾಧವ್ ತಿಳಿಸಿದ್ದಾರೆ.
ಗೌರವ ಡಾಕ್ಟರೇಟ್ : ಡಾ.ಉಮೇಶ್ ಜಾಧವ್ ಅಭಿನಂದನೆ

