ಸುದ್ದಿಮೂಲ ವಾರ್ತೆ ರಾಯಚೂರು, ೆ.20:
ಮಾನ್ವಿಿ, ಸಿರವಾರ ತಾಲೂಕಿನಲ್ಲಿ ಖಾಲಿ ಜಮೀನುಗಳಲ್ಲಿ ಜೋಳ ಎಂದು ಜಿಪಿಎಸ್ ಮಾಡಿದ್ದು ತನಿಖೆಗೊಳಪಡಿಸಬೇಕು, ಜೋಳ ಖರೀದಿ ಕೇಂದ್ರದಲ್ಲಿ 25 ಕ್ವಿಿಂಟಾಲ್ ಖರೀದಿ ಸೇರಿ ವಿವಿಧ ಬೇಡಿಕೆ ಈಡೇರಿಸಲು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಾಯಿಸಿದೆ.
ಇಂದು ಅಪರ ಜಿಲ್ಲಾಾಧಿಕಾರಿ ಶಿವಾನಂದ ಅವರಿಗೆ ಮನವಿ ಸಲ್ಲಿಸಿದ ಸಂಘದ ಮುಖಂಡರು ಜೋಳ ಖರೀದಿ ಕೇಂದ್ರ ಆರಂಭಿಸಿಲ್ಲಘಿ. ತಕ್ಷಣ ಸರ್ಕಾರ ನಿಗದಿ ಪಡಿಸಿದ ಪ್ರತಿ ಎಕರೆಗೆ 15 ಕ್ವಿಿಂಟಾಲ್ ಬದಲಿಗೆ 25 ಕ್ವಿಿಂಟಾಲ್ ಹೆಚ್ಚಿಿಸಿ ಪ್ರತಿ ರೈತರಿಂದ 150 ಕ್ವಿಿಂಟಾಲ್ ಖರೀದಿಸಲು ಕ್ರಮ ವಹಿಸಬೇಕು, ಜಾನೇಕಲ್ ಖರೀದಿ ಕೇಂದ್ರ ಅಮರಾವತಿಗೆ ಬದಲಿಸಿದ್ದು ರೈತರಿಗೆ ಅನಾನೂಕೂಲ ಆಗಲಿದೆ ಹೀಗಾಗಿ, ಪುನಃ ಜಾನೇಕಲ್ನಲ್ಲಿಯೆ ಮರು ಸ್ಥಾಾಪಿಸಬೇಕು, ಖಾಲಿ ಜಮೀನುಗಳಲ್ಲಿ ಜೋಳ ಎಂದು ಜಿಪಿಎಸ್ ಮಾಡಿಸಿದ್ದು ತಕ್ಷಣ ತನಿಖೆಗೊಳಪಡಿಸಬೇಕು, ಹಿರೇಕೋಟ್ನೆೆಕಲ್ ಬಿಟ್ಟು ಎಲ್ಲ ಕಡೆ ಮಾನ್ವಿಿ ತಾಲೂಕಿನಲ್ಲಿ ಮುಂಗಾರಲ್ಲಿ ಜೋಳ ಎಂದು ಜಿಪಿಎಸ್ ಮಾಡಿದ್ದು ಇದರಿಂದ ಸಮಸ್ಯೆೆಯಾಗಿದೆ ಸರಿಪಡಿಸಬೇಕು, ತೋಟಗಾರಿಕೆ ಪರವಾನಿಗೆ ಇಲ್ಲದೆ ಮೆಣಸಿನಕಾಯಿ ಮಾರಾಟ ಮಾಡಿದ ಸಿಂಜೆಂಟಾ ಕಂಪನಿಯ ಎಸ್ಕೆಸಿಸಿ,ಇಂಡೋ ೈವ್ ವಿತರಿಸುವ ಡಿಎಸ್ಆರ್ ಮಾರಾಟಗಾರರ ವಿರುದ್ಧ ಕ್ರಮ ವಹಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಜಿಲ್ಲಾಾಧ್ಯಕ್ಷ ಪ್ರಭಾಕರ ಪಾಟೀಲ, ಸೂಗೂರಯ್ಯ ಆರ್ಎಸ್ ಮಠ,ದೇವರಾಜ ನಾಯಕ,ಕಲ್ಯಾಾಣ ಮೇಟಿ, ಬ್ರಹ್ಮಯ್ಯಘಿ,ನರಸಿಂಹಲು,ಚನ್ನಬಸವ, ಶರಣಬಸವ,ಹೊನ್ನಪ್ಪಘಿ, ರವಿ ಗಬ್ಬೂರು ಸೇರಿ ಅನೇಕರಿದ್ದರು.
25 ಕ್ವಿಿಂಟಾಲ್ ಜೋಳ ಖರೀದಿಸಿ ಜೋಳ ಸುಳ್ಳು ಜಿಪಿಎಸ್ ತನಿಖೆಗೆ ಆಗ್ರಹ

