ಸುದ್ದಿಮೂಲ ವಾರ್ತೆ ಮಸ್ಕಿ, ೆ.21:
ಉಸಿರು ನಿಲ್ಲಿಸುವ ಶರೀರಕ್ಕೊೊಂದು ಗೌರವಯುತವಾಗಿ ಅಂತ್ಯಸಂಸ್ಕಾಾರ ನೆರವೇರಿಸುವುದು ಎಲ್ಲ ಧರ್ಮಗಳಲ್ಲೂ ಕಾಣುವ ಸಂಪ್ರದಾಯ. ಅಂತ್ಯಸಂಸ್ಕಾಾರ’ ಅಡ್ಡಿಿ-ಆತಂಕಗಳಿಲ್ಲದೇ ನಡೆಯಬೇಕಾದರೆ ಸ್ಮಶಾನಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಅತ್ಯಗತ್ಯ. ಆದರೆ, ಮಸ್ಕಿಿ ಪಟ್ಟಣದ ಗಾಂಧಿನಗರದಲ್ಲಿರುವ ಮುಕ್ತಿಿಧಾಮಗಳು ಮೂಲಸೌಕರ್ಯ ಕೊರತೆಯಿಂದ ನಲುಗುತ್ತಿಿವೆ. ರಾತ್ರಿಿ ವೇಳೆ ವಿದ್ಯುತ್ ದೀಪಗಳು ಇಲ್ಲದೆ ಮೃತಪಟ್ಟವರ ಶವಸಂಸ್ಕಾಾರಕ್ಕೆೆ ಕುಟುಂಬದ ಸದಸ್ಯರು, ಸಂಬಂಧಿಕರು ಪರದಾಡುವಂತಾಗಿದೆ.
ಸ್ಮಶಾನಗಳ ಆವರಣದಲ್ಲಿ ಗಿಡ-ಗಂಟಿಗಳು ಬೆಳೆದು ನಾಯಿಗಳು, ಹಾವು, ಚೇಳಿನಂಥ ಜೀವಿಗಳ ಆವಾಸ ತಾಣಗಳಾಗಿ ಬದಲಾಗಿವೆ.ಸ್ಮಶಾನದಲ್ಲಿ ಜಾಲಿ ಗಿಡ ಮರಗಳು ಬೆಳೆದಿರುವುದು ಬಿಟ್ಟರೆ, ಬೇರೆ ಯಾವ ವ್ಯವಸ್ಥೆೆಯೂ ಇಲ್ಲ. ಅಂತ್ಯಕ್ರಿಿಯೆಗೆ ಬರುವವರು ಸ್ಮಶಾನಕ್ಕೆೆ ಬರಲು ಸರಿಯಾದ ದಾರಿ, ಅಂತ್ಯ ಸಂಸ್ಕಾಾರದ ಬಳಿಕ ಕೈ-ಕಾಲು ತೊಳೆಯಲು ನೀರು, ವಯಸ್ಸಾಾದವರಿಗೆ ಕೂರಲು ಒಂದೆರಡು ಬೆಂಚು, ಬೆಳಕಿಗೆ ಒಂದಿಷ್ಟು ವಿದ್ಯುತ್ ದೀಪಗಳು ಇಲ್ಲದೆ ಸ್ಮಶಾನಕ್ಕೆೆ ಬರುವಂತಹ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಾಾ ಶವ ಸಂಸ್ಕಾಾರ ಮಾಡಿ ಮರಳಿ ತಮ್ಮ ಊರಿಗೆ ಹೋಗುತ್ತಾಾರೆ, ಸಂಬಂಧಪಟ್ಟ ಅಧಿಕಾರಿಗಳು ನಮಗೂ ಹಾಗೂ ಸ್ಮಶಾನಕ್ಕೆೆ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುತ್ತಿಿದ್ದಾರೆ. ಹಾಗಾದರೆ ವಿದ್ಯುತ್ ದೀಪ ಅಳವಡಿಸುವವರು ಯಾರು ಎಂಬುದು ಸಾರ್ವಜನಿಕರಿಗೆ ಪ್ರಶ್ನೆೆಯಾಗಿ ಉಳಿದಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆೆತ್ತುಕೊಂಡು ಮುಕ್ತಿಿ ಧಾಮದಲ್ಲಿ ವಿದ್ಯುತ್ ದೀಪ ಅಳವಡಿಸುತ್ತಾಾರೋ ಅಥವಾ ಇಲ್ಲವೇ ಎಂದು ಕಾದುನೋಡಬೇಕಾಗಿದೆ.
ಪಟ್ಟಣದ ಸ್ಮಶಾನದಲ್ಲಿ ವಿದ್ಯುತ್ ದೀಪ ಇಲ್ಲದೆ ಸಾರ್ವಜನಿಕರ ಪರದಾಡುವ ಪರಿಸ್ಥಿಿತಿ ಬಂದಿದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮೌಖಿಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ, ಆದರೆ ಪುರಸಭೆ ಅಧಿಕಾರಿಗಳು ನಮ್ಮ ಬೇಡಿಕೆಯನ್ನು ಕಿವಿಗೆ ಹಾಕಿಕೊಂಡಿಲ್ಲ ಎಂದು ಮಂಜುನಾಥ ಮಸ್ಕಿಿ ಪಟ್ಟಣದ ನಿವಾಸಿ ಹೇಳಿದರು.
ಪಟ್ಟಣದ ನಿವಾಸಿ ನಾಗರಾಜ ಶೆಟ್ಟಿಿ, ಎಂಬುವವರು ಶುಕ್ರವಾರ ಮೃತಪಟ್ಟಿಿದ್ದರು, ಮೃತರ ಅಂತ್ಯಕ್ರಿಿಯ ನೆರವೇರಿಸಲು ಸ್ಮಶಾನಕ್ಕೆೆ ಹೋದರೆ ಅಲ್ಲಿ ವಿದ್ಯುತ್ ದೀಪವಿಲ್ಲದೆ ಪರದಾಡುವಂತ ಪರಿಸ್ಥಿಿತಿ ಬಂದಿದೆ ಈಗಲಾದರೂ ಪುರಸಭೆ ಹಾಗೂ ವಿದ್ಯುತ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ ಎಂದು ರಾಘವೇಂದ್ರ ಇವರು ಆಗ್ರಹಿಸಿದರು.
ಮಸ್ಕಿ ಬೆಳಕಿಲ್ಲದ ಸ್ಮಶಾನ..! ಬೆಳಕು ಕೊಡುವವರು ಯಾರಯ್ಯ? ರಾತ್ರಿಯ ವೇಳೆ ಕಗ್ಗತ್ತಲು ; ದೀಪಗಳು ಇಲ್ಲದೆ ಶವಸಂಸ್ಕಾರಕ್ಕೆ ಸಾರ್ವಜನಿಕರ ಪರದಾಟ

