ಸುದ್ದಿಮೂಲ ವಾರ್ತೆ ಕೊಪ್ಪಳ, ೆ.21:
ಕೊಪ್ಪಳದಲ್ಲಿ ವಿದೇಶಿಗರ ಮೋಜು ಮಸ್ತಿಿ ಹಾವಳಿನ ಹೆಚ್ಚಾಾಗಿದೆ.ರೆಸಾರ್ಟ್ ಮಾಲೀಕರು ಯಾವುದೇ ಅನುಮತಿ ಪಡೆಯದೆ ವಿದೇಶಿಗರ ಪಾರ್ಟಿಗಳನ್ನ ಆಯೋಜನೆ ಮಾಡ್ತೀದ್ದಾಾರೆ.ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಾಪ್ತಿಿಯಲ್ಲಿ ಕಳೆದ 16 ರಂದು ದಿ ಹಂಪಿ ಕೆೆ ಮಾಲೀಕರು ವಿದೇಶಿಗರಿಗೆ ಭರ್ಜರಿ ಪಾರ್ಟಿ ಆಯೋಜನೆ ಮಾಡಿದ್ದರು. ವಿಶೇಷ ಅಂದ್ರೆೆ ಅಂದು ಇಸ್ರೇೇಲ್ ಮಹಿಳೆ ಮೇಲೆ ಅತ್ಯಾಾಚಾರ ಮಾಡಿದ ಮೂವರು ಕಿರಾತಕರಿಗೆ ಗಂಗಾವತಿ ಜಿಲ್ಲಾಾ ಹೆಚ್ಚುವರಿ ಸತ್ರ ನ್ಯಾಾಯಾಲಯ ಮರಣ ದಂಡನೆ ಆದೇಶ ನೀಡಿತ್ತು. ಕಳೆದ ವರ್ಷ ಮಾರ್ಚ್ ಆರರಂದು ಸಾಣಾಪೂರ ಭಾಗದಲ್ಲಿ ನಡೆದ ಘಟನೆ ದೇಶ ವಿದೇಶದಲ್ಲಿ ಸುದ್ದಿಯಾಗಿತ್ತು, ಈ ಪ್ರಕರಣದ ಮೂವರು ಆರೋಪಿಗಳಾದ ಹಂದಿ ಮಲ್ಲ, ಚರಣ್ ಸಾಯಿ ಹಾಗೂ ಶರಣಬಸವರಾಜ್ ಗೆ ನ್ಯಾಾಯಾಲಯ ಮರಣ ದಂಡನೆ ಆದೇಶ ನೀಡಿತ್ತು,ಈ ಐತಿಹಾಸಿಕ ತೀರ್ಪು ಬಂದ ದಿನವೇ ಮೋಜು ಮಾಸ್ತಿಿ ಆಯೋಜನೆ ಮಾಡಿರೋ ವಿಡಿಯೋ ವೈರಲ್ ಆಗಿತ್ತು,
ಈ ಬೆನ್ನಲ್ಲಿಯೇ ದಿ ಹಂಪಿ ಕೆೆ ಮಾಲೀಕರು ಹಾಗೂ ಮ್ಯಾಾನೇಜರ್ ವಿರುದ್ದ ಇದೀಗ ದೂರು ದಾಖಲಾಗಿದೆ.ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಹಂಪಿ ಕೆೆ ಮಾಲೀಕ ಪಿಯೂಶ್ ಹಾಗೂ ಮ್ಯಾಾನೇಜರ್ ವಿರುದ್ದ ದೂರು ದಾಖಲಾಗಿದೆ.ಇದೀಗ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ನೋಟಿಸ್ ಕೂಡಾ ನೀಡಿದ್ದಾಾರೆ.
ಸಾಣಾಪುರ ಪ್ರಕರಣದ ತೀರ್ಪಿನ ದಿನ ಭರ್ಜರಿ ಪಾರ್ಟಿ; ಪ್ರಕರಣ ದಾಖಲು

