ಸುದ್ದಿಮೂಲ ವಾರ್ತೆ ಕುಕನೂರು, ೆ.21:
ಕುಕನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾಾನಕ್ಕೆೆ ಜನವರಿ 22ರಂದು ರಾಜೀನಾಮೆ ನೀಡಲಾಗಿತ್ತು ಒಂದು ತಿಂಗಳ ನಂತರ 21-02- 2026ರಂದು ಚುನಾವಣೆ ಪ್ರಕ್ರಿಿಯೆ ಮಧ್ಯಾಾಹ್ನ 1:45 ಗಂಟೆಗೆ ಈ ಪ್ರಕ್ರಿಿಯೆ ತಹಸೀಲ್ದಾಾರ್ ಬಸವರಾಜ್ ಬೆಣ್ಣೆೆ ಶಿರೂರು ಅವರ ಸಮ್ಮುಖದಲ್ಲಿ ನಡೆಯಿತು.
ಪಟ್ಟಣ ಪಂಚಾಯತಿ ಸದಸ್ಯರು ಮತ್ತು ಲೋಕಸಭೆ ಸದಸ್ಯರು ಹಾಗೂ ವಿಧಾನಸಭೆ ಸದಸ್ಯರು ಭಾಗವಹಿಸಿ ಕೈ ಎತ್ತುವುದರ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆೆಯನ್ನು ಮಾಡಲಾಯಿತು. ಚುನಾವಣೆಯ ಪ್ರಕ್ರಿಿಯೆಯನ್ನು ಬಹಳ ಶಾಂತಿಯುತವಾಗಿ ನಡೆಸಲಾಯಿತು
ಪಟ್ಟಣ ಪಂಚಾಯಿತಿಯ 19 ಸದಸ್ಯರು ಭಾಗವಹಿಸಿದ್ದರು ಕಾಂಗ್ರೆೆಸ್ ಪಕ್ಷದಿಂದ 10 ಸದಸ್ಯರು ಹಾಗೂ ಬಿಜೆಪಿ ಪಕ್ಷದಿಂದ 9 ಸದಸ್ಯರು ಇದ್ದರು
ಅಧ್ಯಕ್ಷ ಸ್ಥಾಾನಕ್ಕೆೆ ಎರಡು ನಾಮಪತ್ರಗಳು ಹಾಗೂ ಉಪಾಧ್ಯಕ್ಷ ಸ್ಥಾಾನಕ್ಕೆೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದವು ಕಾಂಗ್ರೆೆಸ್ ಪಕ್ಷದಿಂದ ಲೀಲಾವತಿ ಗಂಡ ಪ್ರವೀಣ್ ಕುಮಾರ್ ಮುಧೋಳ್ 12 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾಾನಕ್ಕೆೆ ಆಯ್ಕೆೆಯಾದರು.
ಮಂಜುಳಾ ಗಂಡ ಯಲ್ಲಪ್ಪ ಕಲ್ಮನಿ 12 ಮತಗಳ ಪಡೆದು ಉಪಾಧ್ಯಕ್ಷ ಸ್ಥಾಾನಕ್ಕೆೆ ಆಯ್ಕೆೆಯಾದರು.
ಬಿಜೆಪಿಯಿಂದ ಅಧ್ಯಕ್ಷ ಸ್ಥಾಾನಕ್ಕೆೆ ಸ್ಪರ್ಧೆ ಮಾಡಿದ ಲಕ್ಷ್ಮಿಿ ಸಬರದ 9 ಮತಗಳು ಹಾಗೂ ಉಪಾಧ್ಯಕ್ಷ ಸ್ಥಾಾನಕ್ಕೆೆ ನೇತ್ರಾಾವತಿ ಮಾಲಗಿತ್ತಿಿ 9 ಮತಗಳು ಪಡೆದುಕೊಂಡಿದ್ದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ರಾಯರೆಡ್ಡಿಿ,ಸಂಸದ ರಾಜಶೇಖರ್ ಹಿಟ್ನಾಾಳ್ ಮತ ಚಲಾಯಿಸಿ ಗೆದ್ದ ಅಭ್ಯರ್ಥಿಗಳಿಗೆ ಶುಭ ಕೋರಿದರು.
ಈ ವೇಳೆಯಲ್ಲಿ ಅಧಿಕಾರಿಗಳಾದ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ನಾಗೇಶ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ ಪೊಲೀಸ್ ಬಂದೋಬಸ್ತಿಿನಲ್ಲಿ ಚುನಾವಣೆ ಪ್ರಕ್ರಿಿಯೆ ನಡೆಯಿತು.
ಕುಕನೂರು ಪ.ಪಂ ; ಪ್ರಮೀಳೆಯರಿಗೆ ಪಟ್ಟ

