ಸುದ್ದಿಮೂಲ ವಾರ್ತೆ ರಾಯಚೂರು, ೆ.21:
ಸಣ್ಣ ಭೂ ಹಿಡುವಳಿದಾರರ ಕೃಷಿಗೆ ಅನುಕೂಲ ಕಲ್ಪಿಿಸಿ, ಕೃಷಿ ಚಟುವಟಿಕೆಗಳಿಂದ ರೈತರ ಆರ್ಥಿಕ ಸಮತೋಲನೆಗಾಗಿ ನನ್ನ ಜವಾಬ್ದಾಾರಿಯ ಸಣ್ಣ ನೀರಾವರಿ ಹಾಗೂ ಅಂತರ್ಜಲ ಇಲಾಖೆಯಿಂದ ಎಸ್ ಸಿಪಿ ಮತ್ತು ಟಿಸ್ಪಿ ಯೋಜನೆಯಡಿ ಬಡ ರೈತರನ್ನು ಗುರುತಿಸಿ ಕೊಳವೆ ಬಾವಿ ಕೊರೆಸಿ ನೀರಾವರಿ ಸೌಲಭ್ಯಕ್ಕೆೆ ಅನುಕೂಲ ಕಲ್ಪಿಿಸಲು ಲಾನುಭವಿಗಳಿಗೆ ಮೋಟಾರ್ ಪಂಪ್ ಗಳನ್ನು ವಿತರಿಸಲಾಗುತ್ತಿಿದೆ. ರೈತರು ಕೃಷಿ ಚಟುವಟಿಕೆಗಳಿಗೆ ಕೊಳವೆ ಬಾವಿಗಳನ್ನು ಉಪಯೋಗಿಸಿಕೊಳ್ಳಬೇಕು. ನಾನು ಸಣ್ಣ ನೀರಾವರಿ ಇಲಾಖೆಯ ಸಚಿವನಾಗಿ ಜವಾಬ್ದಾಾರಿ ವಹಿಸಿದ ದಿನದಿಂದಲೂ ಅಂತರ್ಜಲ ವೃದ್ಧಿಿಯೊಂದಿಗೆ ರೈತರ ಹಿತ ಕಾಪಾಡಲು ಪ್ರಾಾಮಾಣಿಕವಾಗಿ ಪ್ರಯತ್ನಿಿಸುತ್ತಿಿದ್ದೇನೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್ಎಸ್ ಬೋಸರಾಜು ಅವರು ತಿಳಿಸಿದರು.
ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ವ್ಯಾಾಪ್ತಿಿಯ ಗ್ರಾಾಮೀಣ ಭಾಗದ14 ಹಳ್ಳಿಿಗಳಲ್ಲಿ ಆಯ್ಕೆೆಯಾದ ಲಾನುಭವಿಗಳಿಗೆ ಬೋಳಮಾನ ದೊಡ್ಡಿಿ ಶ್ರೀ ತಿಮ್ಮಪ್ಪ ದೇವಸ್ಥಾಾನದ ಬಳಿ ಮೋಟಾರ್ ಪಂಪ್ಗಳನ್ನು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರ ನಾಯಕ ಅವರೊಂದಿಗೆ ಸಚಿವ ಎನ್ಎಸ್ ಬೋಸರಾಜು ಅವರು ವಿತರಣೆ ಮಾಡಿ ಮಾತನಾಡಿದರು.
ಕಳೆದ ಎರಡುವರೆ ವರ್ಷದಿಂದ ರಾಜ್ಯದಾದ್ಯಂತ ಅಂತರ್ಜಲ ಮಟ್ಟ ವೃದ್ಧಿಿಗೊಳಿಸಲು ನೀರು ಹರಿಯುವ ಪ್ರದೇಶಗಳಲ್ಲಿ ಚಕ್ ಡ್ಯಾಾಮ್, ಕೆರೆಗಳ ನಿರ್ಮಾಣ, ಬಿಡ್ಜ್ ಕಮ್ ಬ್ಯಾಾರೇಜ್ ನಿರ್ಮಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳಕ್ಕೆೆ ವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸಿದ್ದೇವೆ. ಅತಿ ಹೆಚ್ಚು ಅಂತರ್ಜಲ ಉಪಯೋಗ ಮಾಡುವುದರಲ್ಲಿ ರಾಷ್ಟ್ರದಲ್ಲಿಯೇ ನಾವು 9 ನೇ ಸ್ಥಾಾನದಲ್ಲಿದ್ದೆವು ನಮ್ಮ ಇಲಾಖೆಯ ವೈಜ್ಞಾನಿಕ ಯೋಜನೆಗಳ ಅನುಷ್ಠಾಾನದಿಂದ ಪ್ರಸ್ತುತ 2% ಅಂತರ್ಜಲ ಹೆಚ್ಚಾಾಗಿದೆ ಎಂದು ತಿಳಿಸಿದರು.
ಮಾರುಕಟ್ಟೆೆಯಲ್ಲಿ ಸಾವಿರಾರು ರೂಪಾಯಿ ಸುರಿದು ಪಂಪ್, ಮೋಟಾರ್ ಮತ್ತು ಪೈಪ್ಗಳನ್ನು ಕೊಂಡುಕೊಳ್ಳಲಾಗದ ಬಡ ರೈತರನ್ನು ಗುರುತಿಸಿ ನಮ್ಮ ಇಲಾಖೆಯಿಂದ ಎಸ್ ಸಿ ಮತ್ತು ಎಸ್ ಟಿ ರೈತರಿಗೆ ಉಚಿತವಾಗಿ ಪಂಪ್, ಮೋಟಾರ್ ಸೆಟ್ ನೀಡುವುದಲ್ಲದೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿಿದೆ. ಅರ್ಹ ಲಾನುಭವಿಗಳಿಗೆ ಉಚಿತ ಪಂಪ್ಸೆಟ್ ಹಾಗೂ ಪರಿಕರಗಳನ್ನು ನೀಡುತ್ತಿಿದ್ದು, ರೈತರು ಸದುಪಯೋಗಪಡಿಸಿ ಕೊಳ್ಳುವಂತೆ ಹೇಳಿದರು.
ಕೊಳವೆ ಬಾವಿ ಮೂಲಕ ಸಣ್ಣ ಭೂ ಹಿಡುವಳಿದಾರರು ಹನಿ ನೀರಾವರಿ, ತುಂತುರು ನೀರಾವರಿಯಂತಹ ಬೇಸಾಯದೊಂದಿಗೆ ಮಿಶ್ರ ಕೃಷಿ ಪದ್ದತಿಗೆ ಪ್ರಯತ್ನಿಿಸಬೇಕು. ಮಿಶ್ರ ಬೆಳೆ ಬಿತ್ತನೆಯಿಂದ ರೈತರಿಗೆ ಲಾಭವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆೆಸ್ ಮುಖಂಡರಾದ ಮೊಹಮ್ಮದ್ ಶಾಲಂ, ಜಯಣ್ಣ, ನರಸಿಂಹಲು ಮಾದಗಿರಿ ಕುರುಬ ದೊಡ್ಡಿಿ ಆಂಜನೇಯ, ಜಿ ಶಿವಮೂರ್ತಿ, ಅಮರೇಗೌಡ ಹಂಚಿನಾಳ ತಾಯಣ್ಣ, ಬಿ ರಮೇಶ್, ಮಹಾದೇವ್, ತಿಮ್ಮಪ್ಪ, ಹನುಮಂತ, ಗೋವಿಂದಪ್ಪ ಸೇರಿ ಅನೇಕರಿದ್ದರು.
14 ಹಳ್ಳಿಗಳ ಲಾನುಭವಿಗಳಿಗೆ ಮೋಟಾರ್ಪಂಪು ವಿತರಿಸಿದ ಸಚಿವ ಎನ್ಎಸ್ ಬೋಸರಾಜು ‘ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು’

