ಸುದ್ದಿಮೂಲ ವಾರ್ತೆ ಲಿಂಗಸುಗೂರು, ೆ.22:
ಪಟ್ಟಣದ ಸರ್ಕಾರಿ ಆಸ್ಪತ್ರೆೆಯಲ್ಲಿ ಹೆರಿಗೆ ಮಾಡಲು ಲಂಚ ಪಡೆಯುವ ಆರೋಪದ ಕುರಿತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಸಮಿತಿ ಸದಸ್ಯ ಮೋಹನ ಗೋಸ್ಲೆೆ ಅವರು ಸ್ಪಷ್ಟನೆ ನೀಡಬೇಕೆಂದು ಕೆಆರ್ಎಸ್ ಪಕ್ಷದ ಮಸ್ಕಿಿ ತಾಲೂಕು ಅಧ್ಯಕ್ಷ ಬಸವರಾಜ ಅಮೀನಗಢ ಹೇಳಿದರು.
ಪಟ್ಟಣದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆೆಯ ಡಾ.ಉಮಾಮಹೇಶ್ವರಿ ಅವರು ೆ.3 ರಂದು ಹೆರಿಗೆ ಮಾಡಲು 11 ಸಾವಿರ ರೂ. ಲಂಚ ಪಡೆದಿದ್ದಾಾರೆ. ಲಂಚವನ್ನು ಧರ್ಮಣ್ಣ ಎಂಬ ಮಧ್ಯವರ್ತಿಯನ್ನು ಬಳಸಿಕೊಂಡು ವಸೂಲಿ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ವಿಷಯ ಕೆಆರ್ಎಸ್ ಪಕ್ಷದ ಗಮನಕ್ಕೆೆ ಬಂದ ತಕ್ಷಣ ಹಣ ನೀಡಿದವರಿಂದ ವೀಡಿಯೋ ಮೂಲಕ ಹೇಳಿಕೆ ಪಡೆದುಕೊಳ್ಳಲಾಗಿದೆ. ಆದರೆ ಇತ್ತಿಿಚಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಸಮಿತಿ ಸದಸ್ಯ ಮೋಹನ ಗೋಸ್ಲೆೆ ಅವರು ಡಾ.ಉಮಾಮಹೇಶ್ವರಿ ಅವರು ಲಂಚ ಪಡೆದ ಆರೋಪ ಸತ್ಯಕ್ಕೆೆ ದೂರವಾಗಿದೆ. ಕೆಆರ್ಎಸ್ ಪಕ್ಷದವರು ಸುಳ್ಳು ಆರೋಪ ಮಾಡುತ್ತಿಿದ್ದಾಾರೆಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾಾರೆ.
ಇದೇ ಗೋಸ್ಲೆೆ ಅವರು 2024 ಡಿ.25 ರಂದು ಇದೇ ವೈದ್ಯರ ವಿರುದ್ಧ ಹೇಳಿಕೆ ನೀಡುತ್ತ ಡೆಲಿವರಿ ಮಾಡಿದರೆ ಲಂಚ ಪಡೆಯುತ್ತಾಾರೆಂದು ಪತ್ರಿಿಕೆಗಳಿಗೆ ಹೇಳಿಕೆ ನೀಡಿದ್ದರು. ಸತ್ಯಾಾಸತ್ಯತೆ ಕುರಿತು ಅವರೇ ಸ್ಪಷ್ಟನೆ ನೀಡಬೇಕಿದೆ. ಸದರಿ ಪ್ರಕರಣವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪ್ರಾಾಮಾಣಿಕವಾಗಿ ತನಿಖೆ ನಡೆಸಿ ತಪ್ಪಿಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಾಯಿಸಿದರು. ಈ ವೇಳೆ ಪಕ್ಷದ ರೈತ ಘಟಕದ ಜಿಲ್ಲಾಾಧ್ಯಕ್ಷ ಶಿವು ಹಾಲಬಾವಿ, ಅಭಿಷೇಕ, ಮಧು ಕಿಲಾರಹಟ್ಟಿಿ, ಹನುಮನಗೌಡ ಇದ್ದರು.

