ಸುದ್ದಿಮೂಲ ವಾರ್ತೆ ಬೀದರ, ೆ.22:
ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರಕ್ಕೆೆ ಬಹಿರಂಗ ಪತ್ರ ಬಿಡುಗಡೆ ಮಾಡಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ವಹಿಸಿಕೊಂಡು ಪುನರಾರಂಭಿಸುವಂತೆ ಹಾಗೂ ರೈತರ ಎಲ್ಲಾ ಸಾಲಗಳನ್ನು ಸಂಪೂರ್ಣ ಮನ್ನಾಾ ಮಾಡುವಂತೆ ಒತ್ತಾಾಯಿಸಲಾಗಿದೆ.
ರೈತ ಪ್ರಮುಖರು ನಗರದಲ್ಲಿ ಸಭೆ ಸೇರಿ ಸರ್ಕಾರಕ್ಕೆೆ ಒತ್ತಾಾಯಿಸಿದ್ದಾರೆ.
ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ರೈತರು ಷೇರು ಪಡೆದಿದ್ದಾರೆ ಎಂದು ತಿಳಿಸಲಾಗಿದೆ. ಕಾರ್ಖಾನೆ ಮುಚ್ಚಿಿರುವುದರಿಂದ ರೈತರು, ಕಾರ್ಮಿಕರು ಹಾಗೂ ಅವರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆೆ ಒಳಗಾಗಿದ್ದು, ಸುಮಾರು ಸಾವಿರ ಕಾರ್ಮಿಕರು ಉದ್ಯೋೋಗ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾರ್ಮಿಕರಿಗೆ ಸುಮಾರು ರೂ.32.99 ಕೋಟಿ ಸಂಬಳ ಬಾಕಿ ಹಾಗೂ ರೂ.2 ಕೋಟಿ ಉಪದಾನ ಹಣ ಪಾವತಿಸಬೇಕಿದೆ ಎಂದು ಹೇಳಲಾಗಿದೆ.
ಇದೇ ವೇಳೆ, 2024 ಡಿಸೆಂಬರ್ನಲ್ಲಿ ನಡೆದ ಸಭೆಯಲ್ಲಿ 2025-26 ಹಂಗಾಮಿನಲ್ಲಿ ಕಾರ್ಖಾನೆ ಪ್ರಾಾರಂಭಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ, ಅಕ್ಟೋೋಬರ್ 2025ರಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮೋರ್ಚಾ ಅಸಮಾಧಾನ ವ್ಯಕ್ತಪಡಿಸಿದೆ.
ಬೀದರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ವಹಿಸಿಕೊಂಡು 2026-27 ಹಂಗಾಮಿನಲ್ಲಿ (ಅಕ್ಟೋೋಬರ್ 2026) ಪ್ರಾಾರಂಭಿಸಲು ಬಜೆಟ್ನಲ್ಲಿ ಹಣ ಕಾಯ್ದಿಿರಿಸುವುದು. ಕರ್ನಾಟಕದ ಎಲ್ಲಾ ರೈತರ ಎಲ್ಲಾ ತರಹದ ಸಾಲಗಳನ್ನು ಸಂಪೂರ್ಣ ಮನ್ನಾಾ ಮಾಡಬೇಕು ಎಂದು ಒತ್ತಾಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವರಾಯ ಮುದಾಳೆ, ಮಲ್ಲಿಕಾರ್ಜುನ ಸ್ವಾಾಮಿ ಮಾರುತಿ ಬೌದ್ಧೆೆ, ಬಾಬುರಾವ ಹೊನ್ನಾಾ, ನಾಗಶೆಟ್ಟಿಿ ಲಂಜವಾಡ, ಬಸವರಾಜ ಅಷ್ಟೂರೆ, ವಿಠಲರೆಡ್ಡಿಿ, ಅರುಣ ಪಾಟೀಲ್, ಶಾಂತಮ್ಮ ಮೂಲಗೆ, ವೀರಶೆಟ್ಟಿಿ ವಟಂಬೆ, ಮಹೇಶ ನಾಡಗೌಡ, ನಜೀರ ಅಹ್ಮದ, ಎಂ.ಡಿ. ಖಮರ ಪಟೇಲ್, ನನ್ನೆೆಸಾಬ್ ಎಂ.ಡಿ. ಶಾಯತ್ ಅಲಿ, ಜಯಶೀಲ ಕುಮಾರ, ಸೂರ್ಯಕಾಂತ, ಕೋಂಡಿಬಾ ಪಾಂಡ್ರೆೆ ಇದ್ದರು.
ಬಿಎಸ್ಎಸ್ಕೆ ಪುನರಾರಂಭಿಸಿ : ಸರ್ಕಾರಕ್ಕೆ ಕಿಸಾನ್ ಮೋರ್ಚಾ ಆಗ್ರಹ

