ಸುದ್ದಿಮೂಲ ವಾರ್ತೆ ರಾಯಚೂರು, ೆ.23:
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ಯುವ ವಿದ್ಯಾಾರ್ಥಿನಿಯರಿಗಾಗಿ ಎರಡು ದಿನಗಳ ಪ್ರಥಮ ಪ್ರತಿಕ್ರಿಿಯೆ ತರಬೇತಿ ಕಾರ್ಯಕ್ರಮ ಹಮ್ಮಿಿಕೊಂಡಿತ್ತು.
ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಪ್ರಾಾಂಶುಪಾಲೆ ಡಾ. ಸುಗುಣಾ ಬಸವರಾಜ್ ವಿದ್ಯಾಾರ್ಥಿನಿಯರಿಗೆ ಆಕಸ್ಮಿಿಕವಾಗಿ ಸಂಭವಿಸಬಹುದಾದ ಜೀವದ ಆಪತ್ತಿಿನ ಸಂದರ್ಭಗಳಲ್ಲಿ ಗಾಬರಿಗೊಳ್ಳದೆ ಆ ಸಂದರ್ಭಕ್ಕೆೆ ಪ್ರಾಾಥಮಿಕವಾಗಿ ಹೇಗೆ ಪ್ರತಿಕ್ರಿಿಯಿಸಬೇಕು ಎಂಬ ಉಪಾಯಗಳನ್ನು ಕಲಿಸಿಕೊಡಲು ಈ ತರಬೇತಿ ಸದುಪಯೋಗವಾಗಲಿದೆ ಎಂದು ಹೇಳಿದರು.
ಜಿಲ್ಲಾ ತರಬೇತಿ ಕೇಂದ್ರದ ಎ.ಡಿ ವಿಜಯಕುಮಾರ, ಕಿರಣ್ ಹೆಗಡೆ, ಆಸಿಯಾ ಅಂಜುಮ್ ಅವರು ಜೀವಾಪಾಯದ ನೀರಿನಲ್ಲಿ ಮುಳುಗುವುದು, ಅಗ್ನಿಿ ಅವಘಡದಿಂದಾಗುವ ದೈಹಿಕ ತೊಂದರೆಗಳು, ಗಾಯ, ಅಪಘಾತ, ಮೂಳೆ ಮುರಿತ, ನಾಯಿ ಕಡಿತ, ಹಾವು ಕಡಿತ, ಮೂರ್ಚೆ, ಹೃದಯಾಘಾತ, ಹೃದಯ ಸ್ತಂಭನ ಹಾಗೂ ಹೃದಯ-ಶ್ವಾಾಸಕೋಶದ ಪುನರುಜ್ಜೀವನ (ಸಿಪಿಆರ್) ಮಾಡಬೇಕಾದ ವಿಧಾನಗಳ ಬಗ್ಗೆೆ ಪ್ರಾಾತ್ಯಕ್ಷಿಕೆ ಮೂಲಕ ಪ್ರಾಾಯೋಗಿಕವಾಗಿ ತಿಳಿಸಿಕೊಟ್ಟರು.
ಪ್ರಾಾಸ್ತಾಾವಿಕವಾಗಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ಮಾತನಾಡಿದರು. ಪ್ರಾಾಧ್ಯಾಾಪಕರಾದ ಡಾ. ಸಯೀದಾ ರಶೀದಾ ಪರ್ವೀನ್, ಡಾ. ಉಮಾದೇವಿ, ಡಾ. ಪ್ರಸನ್ನಕುಮಾರ, ಸುಮಿತ್ರಾಾ ಪ್ಯಾಾಟಿ, ಉಪನ್ಯಾಾಸಕರಾದ ಡಾ. ಶಿವಪುತ್ರಪ್ಪ, ಡಾ. ವೀರಾಂಜನೇಯ, ರೇಷ್ಮಾಾ ಸೇರಿದಂತೆ ಬೋಧಕ ಸಿಬ್ಬಂದಿ ಮತ್ತು ವಿದ್ಯಾಾರ್ಥಿನಿಯರು ಉಪಸ್ಥಿಿತರಿದ್ದರು.
ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಪ್ರಥಮ ಪ್ರತಿಕ್ರಿಯೆ ತರಬೇತಿ

