ಸುದ್ದಿಮೂಲ ವಾರ್ತೆ ರಾಯಚೂರು, ೆ.23:
ಚಂದ್ರಬಂಡಾ ಹೋಬಳಿಯ ಆತ್ಕೂರು ಸೀಮಾಂತರದ ಜಮೀನು ಸರ್ವೆ ಮಾಡುವ ಮುನ್ನ ಅಕ್ಕ ಪಕ್ಕದ ಜಮೀನು ಮಾಲೀಕರಿಗೆ ನೋಟೀಸ್ ನೀಡದ ಬಗ್ಗೆೆ ಪ್ರಶ್ನಿಿಸಿದರೆ ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳು, ಸರ್ವೆಯರ್ಗಳು ಸುಳ್ಳು ದೂರು ನೀಡಿದ್ದಕ್ಕೆೆ ಪೊಲೀಸರು ಕಿರುಕುಳ ನೀಡುತ್ತಿಿದ್ದಾಾರೆ ನಮ್ಮ ದೂರು ಸ್ವೀಕರಿಸದಿರುವುದು ಖಂಡಿಸಿ ಮಾ.5ರಂದು ಧರಣಿ ನಡೆಸುವುದಾಗಿ ರೈತ ಜಗದೀಶ ಗೌಡ ಎಚ್ಚರಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಸರ್ವೆ ನಂ.282/4 ಹಾಗೂ 283/4ರಲ್ಲಿನ ಭೂಮಿ ಸರ್ವೆ ಮಾಡುವ ಮುನ್ನ ಅಕ್ಕ ಪಕ್ಕದ ರೈತರಾಗಿರುವ ತಮಗೆ ಎಡಿಎಲ್ಆರ್, ಡಿಡಿಎಲ್ಆರ್ ಹಾಗೂ ಸರ್ವೆಯರ್ಗಳು ನೋಟೀಸ್ ನೀಡದೆ ಮಾವಿನ ತೋಟ, ಶೇಂಗಾ ಬೆಳೆ ಮನಸಿಗೆ ಬಂದಂತೆ ತುಳಿದಾಡಿದ್ದಾಾರೆ.
ಪ್ರಶ್ನಿಿಸಿದರೆ ನಮ್ಮ ವಿರುದ್ಧ ಸದರ ಬಜಾರ ಠಾಣೆಗೆ ದೂರು ನೀಡಿದ್ದು ಸುಳ್ಳು ದೂರು ಪಡೆದ ಪಿಐ ಉಮೇಶ ಕಾಂಬ್ಳೆೆ ವಾಸ್ತವ ಗಮನಿಸಿ ವಿಚಾರಿಸದೆ ಬೆದರಿಕೆ ಹಾಕುತ್ತಿಿದ್ದಾಾರೆ. ನಾವು ನೀಡಿದ ದೂರನ್ನೂ ದಾಖಲಿಸುತ್ತಿಿಲ್ಲ ಎಂದು ದೂರಿದರು.
ಭೂ ದಾಖಲೆ ಇಲಾಖೆ ಉಮೇಶ ಎನ್ನುವವರು ರಾಜಿಗೆ ಒತ್ತಡ ಹಾಕುತ್ತಿಿದ್ದಾಾರೆ ಜಮೀನು ಮಧ್ಯೆೆ ಭೂಮಿ ಖರೀದಿಸಿದ ವೆಂಕಟರಾಮರೆಡ್ಡಿಿ ಎಂಬುವವರ ಆಮೀಷಕ್ಕೆೆ ಬಲಿಯಾಗಿದ್ದಾಾರೆ. ನಿಯಮ ಪಾಲಿಸಿ ಸರ್ವೆ ಮಾಡಿದರೆ ನಮ್ಮದೇನು ಆಕ್ಷೇಪವಿಲ್ಲಘಿ. ಬೆಳೆ ಇದ್ದಾಾಗ ಸರ್ವೆ ಮಾಡುವುದಿಲ್ಲಘಿ. ಇಲ್ಲಿ ಅದನ್ನು ಪಾಲಿಸಿಲ್ಲ ಎಂದು ಆಪಾದಿಸಿದರು. ತಕ್ಷಣ ಈ ಬಗ್ಗೆೆ ಕ್ರಮ ವಹಿಸಬೇಕು, ಇಲ್ಲಿಯೇ ಬೀಡು ಬಿಟ್ಟ ಭೂ ದಾಖಲೆ ಇಲಾಖೆ ಅಧಿಕಾರಿಗಳ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಮಲ್ಲಿಕಾರ್ಜುನ ಇತರರಿದ್ದರು.

