ಸುದ್ದಿಮೂಲ ವಾರ್ತೆ ಸಿಂಧನೂರು, ೆ.24:
ನಗರದ ರಾಘವೇಂದ್ರ ಸ್ವಾಾಮಿ ಮಠದಲ್ಲಿ ಮಂಗಳವಾರ ರಾಯರ 431ನೇ ವರ್ಧಂತಿ ಉತ್ಸವವು ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆೆ ರಾಯರ ಬೃಂದಾವನಕ್ಕೆೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ವರ್ಧಂತಿ ಉತ್ಸವದ ಪ್ರಯುಕ್ತ ಶ್ರೀ ಗುರುರಾಯರ ಅಷ್ಟಾಾಕ್ಷರ ಹೋಮ ಅರ್ಚಕ ಶಂಕರಾಚಾರ್ಯ ಆಲಂಪಲ್ಲಿ ನಡೆಸಿದರು. ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು.
ನೂರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವವು ಜರುಗಿತು.
ಶ್ರೀ ಮಠದಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆೆ ಕಲ್ಪಿಿಸಲಾಗಿತ್ತು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಠದ ವಿಚಾರಣಾಕರ್ತ ರಾಘವೇಂದ್ರ ರಾವ್ ಕುಲಕರ್ಣಿ, ನವೀನ್ ಆಚಾರ್, ಪಂಡಿತರಾದ ಗುರುರಾಜ ದಾಸ್, ರಾಮಕೃಷ್ಣ ಆಚಾರ್ಯ ಗೋನವಾರ, ಮಠಾಧಿಕಾರಿ ನರಸಿಂಹ ಆಚಾರ್ಯ ಪುರೋಹಿತ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ನಗರಸಭೆ ಮಾಜಿ ಸದಸ್ಯ ಸದಸ್ಯರಾದ ಚಂದ್ರಶೇಖರ್ ಮೈಲಾರ, ವೆಂಕಟರಾವ್ ಬಂಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಶರಣಪ್ಪ ಗೋನಾಳ, ಮುಖಂಡರಾದ ರಾಜೇಂದ್ರಗೌಡ ಬಾದರ್ಲಿ, ಶಶಿಧರಗೌಡ ವಕೀಲ, ಮಹೇಶ ಸೌದ್ರಿಿ ಅನೇಕರು ಭಾಗವಹಿಸಿದ್ದರು.
ಶ್ರೀ ಗುರುರಾಯರ ಅಷ್ಟಾಕ್ಷರ ಹೋಮ ಸಿಂಧನೂರಿನಲ್ಲಿ ವಿಜೃಂಭಣೆಯಿಂದ ನಡೆದ ವರ್ಧಂತಿ ಉತ್ಸವ

