ಸುದ್ದಿಮೂಲ ವಾರ್ತೆ ಮಾನ್ವಿ, ೆ.24:
ಪವಿತ್ರವಾದ ಸ್ನೇಹದಲ್ಲಿ ಜಾತಿ, ಧರ್ಮದ ಭೇದಭಾವ ಇರುವುದಿಲ್ಲ ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.
ಮಂಗಳವಾರ ಜಾಗೀರ ಪನ್ನೂರು ಗ್ರಾಾಮದ ಲೋಯೋಲಾ ಸಂಸ್ಥೆೆಯ ಕಾಪಿಪಲಾಡಿ ಶಾಲೆಯಲ್ಲಿ ಆಯೋಜಿಸಿದ್ದ ಹಳೆಯ ವಿದ್ಯಾಾರ್ಥಿಗಳ ಸ್ನೇಹ ಸಮ್ಮಿಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿಿದ್ದರು.
ಪ್ರೀೀತಿಯಲ್ಲಿ ಹಲವು ಸಲ ಸ್ವಾಾರ್ಥ ಸುಖದ ವಿರಸ ಕಾಣುತ್ತದೆ. ಆದರೆ ಸ್ನೇಹದಲ್ಲಿ ಯಾವಾಗಲೂ ಸಮರಸ ಭಾವದ ನಿಸ್ವಾಾರ್ಥ ಇರುತ್ತದೆ. ಕಷ್ಟದ ದಿನಗಳಲ್ಲಿ ಕೈ ಹಿಡಿದು ಮುನ್ನಡೆಸುವ ಸ್ನೇಹಿತರೇ ನಮ್ಮೆೆಲ್ಲರ ನಿಜವಾದ ಸಂಪತ್ತು. ಸ್ನೇಹದಲ್ಲಿ ಅಂತಸ್ತಿಿನ ಅಹಂಕಾರ ಇರುವುದಿಲ್ಲ. ಸಜ್ಜನಿಕೆಯ ಸ್ನೇಹಿತರು ದೇವರು ಕೊಟ್ಟ ವರ. ಆದರೂ ಸ್ನೇಹಿತರ ಆಯ್ಕೆೆಯಲ್ಲಿ ಒಂದಿಷ್ಟು ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಪ್ರಸ್ತುತ ದಿನಗಳಲ್ಲಿ ಬಂದಿದೆ ಎಂದರು.
ಸಂಸ್ಥೆೆಯ ನಿರ್ದೇಶಕ ವಂದನೀಯ ಾ.ರಾಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಶಾಲೆಯ ಸಹಾಯಕ ನಿರ್ದೇಶಕ ವಂದನೀಯ ಾ.ಬರ್ತಾಲೋಮ್, ಮುಖ್ಯೋೋ ಪಾಧ್ಯಾಾಯಿನಿ ಸಿಸ್ಟರ್ ಸೆಲಿನಾ ಮೇರಿ, ಸಂಯೋಜಕರಾದ ಶಿಕ್ಷಕ ಮರಿಯಪ್ಪ, ವೀರೇಶಗೌಡ ಉಪಸ್ಥಿಿತರಿದ್ದರು.
ಸಮಾರಂಭದಲ್ಲಿ ಶಾಲೆಯ ಶಿಕ್ಷಕರು ಮತ್ತು ಹಳೆಯ ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾಾರ್ಥಿಗಳನ್ನು ಸನ್ಮಾಾನಿಸಲಾಯಿತು.
ಸರಿತಾ ಶಿಕ್ಷಕಿ ಸ್ವಾಾಗತಿಸಿದರು. ಶಿಕ್ಷಕ ಆನಂದ ನಿರೂಪಿಸಿದರು. ಶಿಕ್ಷಕಿ ಪ್ರಮೀಳಾ ವಂದಿಸಿದರು.
ಜಾಗೀರ ಪನ್ನೂರು ಶಾಲೆಯಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಪವಿತ್ರವಾದ ಸ್ನೇಹದಲ್ಲಿ ಜಾತಿ, ಧರ್ಮದ ಭೇದವಿರದು – ರಮೇಶಬಾಬು ಯಾಳಗಿ

