ಸುದ್ದಿಮೂಲ ವಾರ್ತೆ ಬೆಂಗಳೂರು, ೆ.24:
ಕ್ವಾಾಂಟಮ್ ತಂತ್ರಜ್ಞಾನದ ಅಭಿವೃದ್ದಿಗೆ ಜಾಗತಿಕ ಅಭಿವೃದ್ದಿಯನ್ನು ಮುನ್ನಡೆಸುವ ‘ಬ್ರಿಿಕ್ಸ್’ ರಾಷ್ಟ್ರಗಳು ಪರಸ್ಪರ ಸಹಕಾರಕ್ಕೆೆ ಮುಂದಾಗಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ಇಂದು ವಿಧಾನಸೌಧದಲ್ಲಿ ತಮ್ಮ ನ್ನು ಭೇಟಿಯಾದ ಬ್ರೆೆಜಿಲ್ನ ಸಾರ್ವಜನಿಕ ಸೇವೆಗಳ ನಿರ್ವಹಣೆ ಮತ್ತು ನಾವೀನ್ಯತೆ ಸಚಿವೆಯಾದ ಎಸ್ತರ್ ಡ್ವೆೆಕ್ ಅವರ ನೇತೃತ್ವದ ಬ್ರೆೆಜಿಲ್ ದೇಶದ ಉನ್ನತ ಮಟ್ಟದ ನಿಯೋಗದೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಸಿಯಾನ್ನಂತಹ ಇತರ ಅಂತರರಾಷ್ಟ್ರೀಯ ಒಕ್ಕೂಟಗಳು ಈಗಾಗಲೇ ಕ್ವಾಾಂಟಮ್ ಶೃಂಗಸಭೆಗಳನ್ನು ಆಯೋಜಿಸುತ್ತಿಿವೆ. ಬ್ರಿಿಕ್ಸ್ ಸದಸ್ಯರಾಗಿ ನಾವು ಕೃಷಿ, ಔಷಧ ಸಂಶೋಧನೆ ಜಲಸಂಪನ್ಮೂಲ ನಿರ್ವಹಣೆ, ಹವಾಮಾನ ಮುನ್ಸೂಚನೆ ಮತ್ತು ಪ್ರವಾಹ ನಿರ್ವಹಣೆಯನ್ನು ಸುಧಾರಿಸಲು ಕ್ವಾಾಂಟಮ್ ತಂತ್ರಜ್ಞಾನವನ್ನು ಬಳಸುವ ನಿಟ್ಟಿಿನಲ್ಲಿ ಒಟ್ಟಾಾಗಿ ಕೆಲಸ ಮಾಡಬೇಕು. ಆ ಮೂಲಕ ನಮ್ಮ ಸಮಸ್ಯೆೆಗಳನ್ನು ಜಂಟಿಯಾಗಿ ಬಗೆಹರಿಸಿಕೊಂಡು ದೇಶದ ಅಭಿವೃದ್ದಿಗೆ ಮುಂದಾಗಬೇಕಾಗಿದೆ’ ಎಂದು ಸಚಿವರು ತಿಳಿಸಿದರು.
ಬ್ರೆಜಿಲ್ ನಿಯೋಗದೊಂದಿಗೆ ಮಹತ್ವದ ದ್ವಿಪಕ್ಷೀಯ ಸಭೆಯಲ್ಲಿ ಸಚಿವ ಎನ್.ಎಸ್.ಭೋಸರಾಜು ಅಭಿಮತ ಕ್ವಾಾಂಟಮ್ ತಂತ್ರಜ್ಞಾನದ ಅಭಿವೃದ್ದಿಗೆ ಬ್ರಿಕ್ಸ್ ಸಹಕಾರ ಅಗತ್ಯ

