ಸುದ್ದಿಮೂಲ ವಾರ್ತೆ ಜಾಲಹಳ್ಳಿಿ, ೆ.24:
ಕಲಿಕಾ ಹಬ್ಬ ಮಕ್ಕಳಲ್ಲಿ ಕಲಿಕೆಯ ಆಸಕ್ತಿಿ ಹೆಚ್ಚಿಿಸುವುದರ ಜೊತೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸ್ಪೂರ್ತಿ ಕೊಡುತ್ತದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಮಲ್ಲಿಕಾರ್ಜುನ ಅಭಿಪ್ರಾಾಯ ವ್ಯಕ್ತಪಡಿಸಿದರು.
ಗಾಣದಾಳ ಗ್ರಾಾಮ ಪಂಚಾಯತಿ ವ್ಯಾಾಪ್ತಿಿಯಲ್ಲಿ ಬರುವ ಸುಣ್ಣದಕಲ್ಲ ಗ್ರಾಾಮದ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ ಮತ್ತು ಎಲ್ಕೆಜಿ/ಯುಕೆಜಿ ನೂತನ ಕಟ್ಟಡ ಉದ್ಘಾಾಟನೆ ಮಾಡಿ ಮಾತನಾಡಿದ ಅವರು, ಶಾಲೆಗಳಲ್ಲಿ ವಿದ್ಯಾಾರ್ಥಿಗಳಿಗೆ ಕಲಿಕಾ ಹಬ್ಬ ಕಲಿಕೆಗೆ ಅನುಕೂಲ ವಾಗುತ್ತದೆ ಜೊತೆಗೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾಾರ್ಥಿಗಳಿಗೆ ಸ್ಪೂರ್ತಿ ಕೊಡುತ್ತದೆ ಎಂದು ಅಭಿಪ್ರಾಾಯ ವ್ಯಕ್ತಪಡಿಸಿದರು.
ಶಿಕ್ಷಕರು ಕೂಡ ಕಲಿಸುವಾಗ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರಿತಿಸಬೇಕು ಎಂದು ಮಾತನಾಡಿದರು. ಇದೆ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಿವರಾಜ ಪೂಜಾರಿ ಕಲಿಕಾ ಹಬ್ಬ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಹನುಮಂತ್ರಾಾಯ ಶಾಖೆ, ಶಿಕ್ಷಕರ ಸಂಘದ ಅಧ್ಯಕ್ಷರಾದ ವಿರುಪನಗೌಡ, ಕಾರ್ಯದರ್ಶಿ ಗಂಗಾಧರ, ನಿರ್ದೇಶಕ ಪ್ರಕಾಶ ಹೊನ್ನಟಗಿ, ಗಂಗಾರೆಡ್ಡಿಿ ಪಾಟೀಲ್, ಇಸಿಒ ರಾಜನಗೌಡ, ವೆಂಕಟೇಶ, ಸಿಆಪಿರ್ಗಳಾದ ಸೋಮಶೇಖರ್ ದೊರೆ, ಕೃಷ್ಣಮೂರ್ತಿ, ಎಸ್ಡಿಎಮ್ಸಿ ಅಧ್ಯಕ್ಷರಾದ ರಾಘವೇಂದ್ರ ಕೊಟ್ನೆೆಕಲ್, ಅಧ್ಯಕ್ಷತೆಯನ್ನು ಮುಖ್ಯೋೋಪಾಧ್ಯಾಾಯ ರಾದ ಸಿದ್ದಯ್ಯ ಸ್ವಾಾಮಿ ಸೊನ್ನದ್ ವಹಿಸಿದ್ದರು.
ಕಲಿಕಾ ಹಬ್ಬದಿಂದ ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಳ : ಮಲ್ಲಿಕಾರ್ಜುನ

