ಸುದ್ದಿಮೂಲ ವಾರ್ತೆ ರಾಯಚೂರು, ೆ.26:
ಮಸ್ಕಿಿ ತಾಲೂಕಿನ ಮಟ್ಟೂರು ತಾಂಡಾದಲ್ಲಿ ಪಿಎಸ್ಐ ಮೇಲೆ ಹಲ್ಲೆೆ ಮಾಡಿದ್ದಾಾಗಿ ಸುಳ್ಳು ದೂರು ನೀಡಿ ಜೈಲಿಗೆ ಕಳುಹಿಸಿದ್ದು ಈ ಬಗ್ಗೆೆ ತನಿಖೆ ಮಾಡಲು ಮಹಿಳಾ ಆಯೋಗಕ್ಕೆೆ ದೂರು ನೀಡಿದ್ದರೂ ಯಾವುದೆ ತನಿಖೆ, ಕ್ರಮ ಆಗುತ್ತಿಿಲ್ಲ ಎಂದು ಸಕ್ಕುಬಾಯಿ, ರಾಮಪ್ಪ ದಂಪತಿಗಳು ಆಪಾದಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಕಳೆದ ಆಗಸ್ಟ್ 29ರಂದು ಮನೆಯ ಮುಂದೆ ಮಕ್ಕಳ ಆಟಕ್ಕೆೆ ಸಂಬಂಧಿಸಿದ ಆದ ಘಟನೆಯ ಬಗ್ಗೆೆ ಮುದಗಲ್ ಠಾಣೆಗೆ ದೂರು ನೀಡಲಾಗಿತ್ತುಘಿ. ಆ ದೂರಿನನ್ವಯ ರೈಲ್ವೆೆ ಪೊಲೀಸ್ ರಾಘವೇಂದ್ರಗೆ ಜಾಮೀನು ಸಿಗದ ಕಾರಣ ಅವರ ಕುಮ್ಮಕ್ಕಿಿನಿಂದ ಒಪ್ಪಂದ ಮಾಡಿಕೊಂಡು ದೂರು ವಾಪಾಸ್ ಪಡೆಯಲು ಒತ್ತಡ ಹಾಕಲಾಗಿತ್ತುಘಿ.
ತಮ್ಮ ಮನೆಗೆ ಆರೋಪಿತ ರಾಘವೇಂದ್ರ ಜೊತೆಗೆ ಮುದಗಲ್ ಪಿಎಸ್ಐ ವೆಂಕಟೇಶ ಅವರು ಆಗಮಿಸಿದಾಗ ಚಿತ್ರೀಕರಣ ಮಾಡಿದ್ದರಿಂದ ತನ್ನ ಮೇಲೆ ದೈಹಿಕ ಹಲ್ಲೆೆ ಮಾಡಿದ್ದಾಾರೆ ಆದರೆ, ಪಿಎಸ್ಐ ಅವರ ಮೇಲೆ ತಾನಾಗಲಿ, ತನ್ನ ಪತಿಯಾಗಿ ಯಾವುದೆ ಹಲ್ಲೆೆ ಮಾಡಿಲ್ಲಘಿ. ಆದರೆ, ಸುಳ್ಳು ದೂರು ಕೊಟ್ಟು ತಮ್ಮಿಿಬ್ಬರನ್ನು ಜೈಲಿಗೆ ಹಾಕಿಸಿದ್ದು ವಾಸ್ತವ ತನಿಖೆ ಮಾಡಲು ಮಹಿಳಾ ಆಯೋಗ, ಡಿಜಿಪಿ, ಎಸ್ಪಿ ಅವರಿಗೂ ಮನವಿ ಮಾಡಿದರೂ ಸ್ಪಂದಿಸಿಲ್ಲಘಿ. ಬಡವರಿಗೊಂದು ಅಧಿಕಾರದಲ್ಲಿರುವವರಿಗೊಂದು ನ್ಯಾಾಯ ಎಂಬಂತೆ ಭಾಸವಾಗುತ್ತಿಿದೆ ಎಂದು ದೂರಿದರು.
ಮುದಗಲ್ನ ಕೆಲ ಪೊಲೀಸರು ತಮ್ಮ ವೃತ್ತಿಿ ಬದ್ದತೆ ಮರೆತು ತಾಂಡಾದಲ್ಲಿ ದಬ್ಬಾಾಳಿಕೆ ಮಾಡುತ್ತಿಿದ್ದಾಾರೆ ತಕ್ಷಣ ಪಿಎಸ್ಐ ಮತ್ತು ಪೊಲೀಸರ ಅಮಾನತ್ತು ಮಾಡಿ ಉನ್ನತಾಧಿಕಾರಿಗಳಿಂದ ತನಿಖೆ ಮಾಡಲಿ ನಮ್ಮದು ತಪ್ಪಿಿದ್ದರೆ ಶಿಕ್ಷೆೆ ಅನುಭವಿಸಲು ಸಿದ್ದರಿದ್ದೇವೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಲಾಲಮ್ಮಘಿ, ಶಿಲ್ಪಾಾ ಇದ್ದರು.

