ಸುದ್ದಿಮೂಲ ವಾರ್ತೆ ರಾಯಚೂರು, ೆ.26:
ರಾಷ್ಟ್ರೀಯ ಹೆದ್ದಾಾರಿ ನಿರ್ಮಾಣದ ಅಕ್ಕ ಪಕ್ಕದ ಜಮೀನುಗಳಿಗೆ ರೈತರು ಹೋಗುವ ರಸ್ತೆೆ ಇಲ್ಲವಾಗಿದೆ ತಕ್ಷಣ ವ್ಯವಸ್ಥೆೆ ಮಾಡಲು ಮಸ್ಕಿಿ ತಾಲೂಕಿನ ಗೋನವಾರ ರೈತರು ಒತ್ತಾಾಯಿಸಿದರು.
ನಗರದ ರಾಷ್ಟ್ರೀಯ ಹೆದ್ದಾಾರಿ ಪ್ರಾಾಧಿಕಾರದ ಕಚೇರಿ ಬಳಿ ಪ್ರತಿಭಟನೆ ನಡೆಸಿದ ರೈತರು ತಮ್ಮ ಜಮೀನುಗಳಿಗೆ 129ರ ಹೊಸ ರಾಷ್ಟ್ರೀಯ ಹೆದ್ದಾಾರಿ ನಿರ್ಮಾಣದಿಂದಾಗಿ ಹೋಗಲು ಇದ್ದ ರಸ್ತೆೆ ಇಲ್ಲವಾಗಿದ್ದು ಕೃಷಿ ಚಟುವಟಿಕೆ, ಯಂತ್ರೋೋಪಕರಣ ತೆಗೆದುಕೊಂಡು ಹೋಗಿ ಒಕ್ಕಲುತನ ಮಾಡಲು ತೊಂದರೆಯಾಗಿದೆ ಎಂದು ದೂರಿದರು.
ಹೆದ್ದಾಾರಿ ನಿರ್ಮಾಣದಲ್ಲಿ ಸೇತುವೆ ನಿರ್ಮಿಸಿಕೊಟ್ಟರೆ ಅನುಕೂಲ ಆಗಲಿದೆ. ಈಗಿನ ಸ್ಥಿಿತಿಯಲ್ಲಿ ಕಿಲೋಮಿಟರ್ ಗಟ್ಟಲೆ ದೂರ ಹೋಗಿ ಸರ್ಜಾಪೂರು, ಕುಪ್ಪಿಿಗುಡ್ಡಘಿ, ಗ್ರಾಾಮದ ಜಮೀನಿಗೆ ತೆರಳಲು ಅನುಕೂಲ ಮಾಡಿಕೊಡಲು ಕೋರಿದರು. ಹಾಗಾಗಿ, ಸರ್ವಿಸ್ ರಸ್ತೆೆಗಳ ನಿರ್ಮಿಸಿಕೊಡಲು ಕೋರಿದರು.
ಈ ಸಂದರ್ಭದಲ್ಲಿ ಎನ್.ಎಸ್.ವೀರೇಶ, ಸಿದ್ದರಾಮಪ್ಪಘಿ, ಬಹದ್ದೂರ್ ಸಾಬ್ ದೇವರೆಡ್ಡಿಿ ಮೇಟಿ, ಅಮರೇಶ, ವಿನೋದ, ಮಲ್ಲನಗೌಡ, ಅಮರೇಗೌಡ ಮಾಳಾಪೂರು, ತಿರುಪತಿ ಇತರರಿದ್ದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹ

