ಸುದ್ದಿಮೂಲ ವಾರ್ತೆ ರಾಯಚೂರು, ೆ.26:
ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಪ್ರಸೂತಿ ಆರೈಕೆ ಸೇವೆಗೆ ಹೆಚ್ಚಿಿನ ಮಹತ್ವ ನೀಡುತ್ತಿಿರುವ ಕರ್ನಾಟಕ ಸರಕಾರದ ದೂರ ದೃಷ್ಟಿಿ ಹೊಂದಿದ ಹಿನ್ನಲೆ ಹಾಗೂ ಮಹತ್ವಾಾಕಾಂಕ್ಷಿ ಸಂಪೂರ್ಣತಾ ಯೋಜನೆಯಡಿ ಜಿಲ್ಲೆಯು ಇರುವ ಕಾರಣದಿಂದಾಗಿ ಜಿಲ್ಲೆಯಲ್ಲಿ ತಾಯಿ ಮಕ್ಕಳ ಸುರಕ್ಷತೆಗಾಗಿ ಜಿಲ್ಲಾಧಿಕಾರಿ ನಿತೀಶ್ ಕೆ. ಖುದ್ದು ಒತ್ತಾಾಸೆ ಹಾಗೂ ಮುತವರ್ಜಿ ವಹಿಸಿ ಜಿಲ್ಲೆಯ ದೇವದುರ್ಗ ತಾಲೂಕಿಗೆ ಸೇವಾ ನಿರತ ಹಾಗೂ ಸ್ನಾಾತಕೋತ್ತರ ಪದವಿ ಪೂರ್ಣಗೊಳಿಸಿ ಸ್ಥಳ ನಿಯುಕ್ತಿಿಗಾಗಿ ಕಾಯುತ್ತಿಿದ್ದ ಇಬ್ಬರೂ ಪ್ರಸೂತಿ ತಜ್ಞರನ್ನು ನೇಮಕ ಮಾಡಿಸುವ ಮೂಲಕ ದೇವದುರ್ಗ ತಾಲೂಕಿನ ಗ್ರಾಾಮೀಣ ಭಾಗದ ಜನತೆಯು ಹೆರಿಗೆಗಾಗಿ ರಾಯಚೂರಿಗೆ ಅಲೆಯುವುದನ್ನು ನಿಲ್ಲಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಅಧಿಕಾರಿ ಡಾ ಸುರೇಂದ್ರ ಬಾಬು ಅವರು ತಿಳಿಸಿದ್ದಾರೆ.

