ಸುದ್ದಿಮೂಲ ವಾರ್ತೆ ರಾಯಚೂರು,ೆ.26:
ವಿದ್ಯಾಾರ್ಥಿಗಳ ಭವಿಷ್ಯದಲ್ಲಿ ಸಂಸ್ಕಾಾರಭರಿತ ಜೀವನ ನಡೆಸಲು ಹಾಗೂ ಆರೋಗ್ಯಕರ ಸಮಾಜ ಕಟ್ಟಲು ರಾಷ್ಟ್ರೀಯ ಸೇವಾ ಯೊಜನೆ ಪೂರಕ ವೇದಿಕೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಕುಲಪತಿ ಪ್ರೊೊ.ಶಿವಾನಂದ ಕೆಳಗಿನಮನಿ ಅಭಿಪ್ರಾಾಯಪಟ್ಟರು.
ರಾಷ್ಟ್ರೀಯ ಸೇವಾ ಯೋಜನಾ ಕೋಶ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ, ಪ್ರಾಾದೇಶಿಕ ನಿರ್ದೇಶನಾಲಯ, ಎನ್.ಎಸ್.ಎಸ್ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಸಹಯೋಗದೊಂದಿಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ವಿವಿಯ ಸಭಾಂಗಣದಲ್ಲಿ ದಿನಾಂಕ 24 ರಂದು ನಡೆದ 7 ದಿನಗಳ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಉದ್ಘಾಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೊಜನೆ ಎನ್ನುವುದು ಭಾರತ ದೇಶದ ವಿಶಿಷ್ಟ ಅಂಗ ಸಂಸ್ಥೆೆಯಾಗಿದೆ. ಇದರ ಉದ್ದೇಶ ಭಾರತ ದೇಶದ ವೈವಿಧ್ಯಮಯವಾದ ಭಾಷೆ, ಜನಾಂಗ, ಧರ್ಮ, ಸಂಸ್ಕೃತಿ, ಇತಿಹಾಸ, ವಾಸ್ತುಶಿಲ್ಪ ಹಾಗೂ ಕಲೆಗಳಿಗೆ ವಿಭಿನ್ನವಾಗಿರುವ ಸಂಸ್ಕೃತಿಯನ್ನು ಜಾಗತಿಕ ಮಟ್ಟದೊಳಗೆ ತನ್ನದೇ ಆದ ಮಾನ್ಯತೆಯನ್ನು ಹೊಂದಿರುವ ರಾಷ್ಟ್ರದ ವಿವಿಧ ಪ್ರದೇಶದವರನ್ನು ನಾವೆಲ್ಲರೂ ಒಂದೇ ಎನ್ನುವ ಮನೋಭಾವವನ್ನು ಬೆಳೆಸುತ್ತದೆ ಹಾಗೂ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಿಂದ ರಾಷ್ಟ್ರೀಯತೆ, ಭಾವೈಕ್ಯತೆ, ಸಹಬಾಳ್ವೆೆ, ನಾಯಕತ್ವ ಗುಣ ಬೆಳೆಯುತ್ತದೆ. ಇದರಿಂದ ಯುವಕರಲ್ಲಿ ಸೇವಾ ಮನೋಭಾವ ಜೊತೆಗೆ ವೈಜ್ಞಾನಿಕತೆಯೂ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಡಾ.ಎ.ಚನ್ನಪ್ಪ ಅವರು ಮಾತನಾಡಿ, ವಿಶ್ವವಿದ್ಯಾಾಲಯಗಳಲ್ಲಿ ನಡೆಯುವ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾಾರ್ಥಿಗಳು ಪಾಲ್ಗೊೊಳ್ಳುವುದರಿಂದ ಸಾಮಾಜಿಕವಾಗಿ, ವ್ಯಕ್ತಿಿಗತವಾಗಿ ಅಭಿವೃದ್ಧಿಿ ಹೊಂದಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶಗಳನ್ನು ಜೀವನದ ಉದ್ದಕ್ಕೂ ಪಾಲಿಸಬೇಕು. ಶಿಬಿರದಲ್ಲಿ ಕಲಿತುಕೊಂಡ ವಿಚಾರಗಳನ್ನು, ಸಂಸ್ಕಾಾರ ಹೆಚ್ಚಿಿಸುವಂತ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಏಳು ದಿನಗಳ ಈ ಶಿಬಿರ ವಿದ್ಯಾಾರ್ಥಿಗಳಲ್ಲಿ ಶಿಸ್ತು, ಸಂಯಮ, ಆತ್ಮಸ್ಥೈಬರ್ಯ ಹಾಗೂ ಉತ್ತಮ ಪ್ರಜೆಗಳಾಗಿ ಬದುಕಲು ಕಲಿಸಿಕೊಡುತ್ತದೆ ಎಂದರು.
ವಿವಿಯ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ರಾಷ್ಟ್ರೀಯ ಏಕತೆ, ಸಾಂಸ್ಕೃತಿಕ ವಿನಿಮಯ ಮತ್ತು ದೇಶ ಭಕ್ತಿಿಯನ್ನು ಬೆಳೆಸಲು ವಿನ್ಯಾಾಸಗೊಳಿಸಲಾದ 7 ದಿನಗಳ ವಸತಿ ಶಿಬಿರವಾಗಿದ್ದು, ನಮ್ಮ ವಾಲ್ಮೀಕಿ ವಿಶ್ವವಿದ್ಯಾಾನಿಲಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಶಿಬಿರವನ್ನು ಹಮ್ಮಿಿಕೊಂಡಿದ್ದು ಇದರಲ್ಲಿ ಕರ್ನಾಟಕದ ಹತ್ತು ವಿಶ್ವವಿದ್ಯಾಾಲಯಗಳಿಂದ ಹಾಗೂ ಕರ್ನಾಟಕದ ಹೊರ ರಾಜ್ಯಗಳ ಐದು ವಿಶ್ವವಿದ್ಯಾಾಲಯಗಳಿಂದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡು ಒಳಗೊಂಡು ಸುಮಾರು 150 ಶಿಬಿರಾರ್ಥಿಗಳು ಏಳು ದಿನದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂದು ತಮ್ಮ ಪ್ರಾಾಸ್ತಾಾವಿಕ ನುಡಿಗಳಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊೊ.ಜ್ಯೋೋತಿ ಧಮ್ಮ ಪ್ರಕಾಶ್ ಹಾಗೂ ಕಾಲೇಜು ಅಭಿವೃದ್ದಿ ಮಂಡಳಿ ನಿದೇರ್ಶಕ ಡಾ.ಸುಯಮೀಂದ್ರ ಕುಲಕರ್ಣಿ ಮತ್ತು ವಿಶ್ವವಿದ್ಯಾಾನಿಲಯದ ಸಿಂಡಿಕೇಟ್ ಸದಸ್ಯರುಗಳಾದ ಡಾ.ಮೀನಾಕ್ಷಿ ಖಂಡಿಮಠ ಹಾಗೂ ಜೀಶಾನ್ ಅಖಿಲ ಸಿದ್ದೀಖಿ ಮಾತನಾಡಿದರು.
ವಿವಿಯ ವಿದ್ಯಾಾರ್ಥಿ ಕಲ್ಯಾಾಣಾಧಿಕಾರಿ ಹಾಗೂ ಹಿರಿಯ ಪ್ರಾಾಧ್ಯಾಾಪಕರಾದ ಪ್ರೊೊ.ಪಾರ್ವತಿ ಸಿ.ಎಸ್., ವಿವಿ ಸಿಂಡಿಕೇಟ್ ಸದಸ್ಯರುಗಳಾದ ಡಿ.ಆರ್.ಚಿನ್ನ, ಶಿವಣ್ಣ, ಶ್ರೇಯಾಂಕ ಹೆಚ್.ವಿ. ವೇದಿಕೆಯ ಮೇಲೆ ಉಪಸ್ಥಿಿತರಿದ್ದರು.
ಹಿರಿಯ ಪ್ರಾಾಧ್ಯಾಾಪಕರಾದ ಪ್ರೊೊ. ಪಿ. ಭಾಸ್ಕರ್ ಹಾಗೂ ಸಹಪ್ರಾಾಧ್ಯಾಾಪಕರಾದ ಡಾ. ಲತಾ.ಎಂ.ಎಸ್, ಡಾ.ಶ್ರೀನಿವಾಸ ರಾಯಚೂರ್ಕರ್, ಎಸ್.ಎಸ್.ಎಸ್ ಸಹಾಯಕ ನಿರ್ದೇಶಕರಾದ ಶಿವರಾಜ ಹರವಿ, ನಾಗವೇಣಿ ಡಿ. ಸೇರಿದಂತೆ ಎನ್.ಎಸ್.ಎಸ್ ಶಿಬಿರಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಮುಖ್ಯದ್ವಾಾರದಿಂದ ಸಭಾಂಗಣದವರೆಗೆ ನೀರಮಾನ್ವಿಿಯ ಲಿಂಗರಾಜ ತಂಡದಿಂದ ಡೊಳ್ಳು ಕುಣಿತದೊಂದಿಗೆ ಸಾಂಸ್ಕೃತಿಕ ಮೆರವಣಿಗೆ ಮತ್ತು ವಿವಿಧ ರಾಜ್ಯದ ಸಾಂಪ್ರದಾಯಿಕ ಉಡುಗೆ-ತೊಡುಗೆ ಮತ್ತು ವಾದ್ಯಗಳ ಬಳಕೆಯೊಂದಿಗೆ ಸಾಂಸ್ಕೃತಿಕ ಮೆರವಣಿಗೆಯನ್ನು ಆಯೋಜಿಸಲಾಯಿತು.
ಗಣಿತ ವಿಭಾಗದ ವಿದ್ಯಾಾರ್ಥಿ ರೂಪಾಶ್ರೀ ಪ್ರಾಾರ್ಥಿಸಿದರು, ಉಪ ಕುಲಸಚಿವ ಡಾ.ಕೆ.ವೆಂಕಟೇಶ ಸ್ವಾಾಗತಿಸಿದರು, ಇಂಗ್ಲಿಿಷ್ ವಿಭಾಗದ ಉಪನ್ಯಾಾಸಕ ಹಾಗೂ ಎನ್.ಎಸ್.ಎಸ್ ಸಹಾಯಕ ನಿರ್ದೇಶಕ ಅನಿಲ್ ಅಪ್ರಾಾಳ ನಿರೂಪಿಸಿದರು. ಸಮಾಜಕಾರ್ಯ ಉಪನ್ಯಾಾಸಕ ಹಾಗೂ ಎನ್.ಎಸ್.ಎಸ್ ಸಹಾಯಕ ನಿರ್ದೇಶಕ ಬಜಾರಪ್ಪ ವಂದಿಸಿದರು.
ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ – ಪ್ರೊ. ಶಿವಾನಂದ ಕೆಳಗಿನಮನಿ

