ಸುದ್ದಿಮೂಲ ವಾರ್ತೆ ಸಿಂಧನೂರು, ೆ.26:
ನಗರದ ಶಾದಿ ಮಹಲ್ನಲ್ಲಿ ಶನಿವಾರ ಸಿಪಿಐ (ಎಂಎಲ್)ರೆಡ್ ಸ್ಟಾಾರ್ ಕಮ್ಯುನಿಸ್ಟ್ ಪಕ್ಷದಿಂದ ವಿಚಾರ ಸಂಕಿರಣ ಹಮ್ಮಿಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ್ ತಿಳಿಸಿದರು.
ಗುರುವಾರ ನಗರದ ಪತ್ರಿಿಕಾಭವನದಲ್ಲಿ ಸುದ್ದಿಗೋಷ್ಠಿಿನಡೆಸಿ ಅವರು ಮಾತನಾಡಿದರು. ವಿಚಾರ ಸಂಕಿರಣದಲ್ಲಿ ಭಾರತದ ಸ್ವಾಾತಂತ್ರ್ಯ ಚಳುವಳಿಯಲ್ಲಿ ಕಮ್ಯುನಿಷ್ಟರ ಪಾತ್ರ ಹಾಗೂ ಜಾತಿ ನಿರ್ಮೂಲನೆಗಾಗಿ ಮಾರ್ಕ್ಸ್ ವಾದಿ ಹಾಗೂ ಅಂಬೇಡ್ಕರ್ ವಾದಿಗಳ ಐಕ್ಯತೆಯ ಸವಾಲುಗಳು ಎಂಬ ಎರಡು ಮಹತ್ವದ ರಾಷ್ಟ್ರೀಯ ವಿಷಯಗಳ ಮೇಲೆ ವಿಷಯ ಮಂಡನೆ ಹಾಗೂ ಚರ್ಚೆ ನಡೆಯಲಿದೆ ಎಂದು ವಿವರಿಸಿದರು.
ವಿಷಯ ಮಂಡನೆಗಾಗಿ ಕಮ್ಯುನಿಸ್ಟ್ ಪಕ್ಷದ ಪಾಲಿಟಿ ಬ್ಯುರೊ ಸದಸ್ಯ ಆರ್.ಮಾನಸಯ್ಯ ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಭಾಗವಹಿಸಲಿದ್ದಾಾರೆ. ಉಪನ್ಯಾಾಸಕ ಹಾಗೂ ಪ್ರಗತಿಪರ ಚಿಂತಕ ನಾರಾಯಣ ಬೆಳಗುರ್ಕಿ ಹಾಗೂ ಸಾಮಾಜಿಕ ಹೋರಾಟಗಾರ ಹಾಗೂ ಸಾಂಸ್ಕೃತಿಕ ಚಿಂತಕ ಹೆಚ್.ಎನ್.ಬಡಿಗೇರ್ ಸಂವಾದಕರಾಗಿ ಮಾತನಾಡಲಿದ್ದಾಾರೆ. ಪಕ್ಷದ ರಾಯಚೂರು ಜಿಲ್ಲಾಾ ಕಾರ್ಯದರ್ಶಿ ಎಂ.ಡಿ.ಅಮೀರ ಅಲಿ ಅಧ್ಯಕ್ಷತೆ ವಹಿಸಲಿದ್ದಾಾರೆ ಎಂದರು.
ಈ ಸಂದರ್ಭದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾಾರ್ ಪಾರ್ಟಿ ಜಿಲ್ಲಾಾ ಸಮಿತಿ ಸದಸ್ಯರಾದ, ಆದೇಶ ಹಿರೇನಗನೂರ, ಯಲ್ಲಪ್ಪ ಊಟಕನೂರ, ಹೆಚ್ ಆರ್ ಹೊಸಮನಿ, ತಾಲೂಕು ಸಮಿತಿಯ ಮುದಿಯಪ್ಪ ಹೆಚ್ ಎನ್ ಕ್ಯಾಾಂಪ್ ಸೇರಿದಂತೆ ಇತರರು ಇದ್ದರು.

