ಸುದ್ದಿಮೂಲ ವಾರ್ತೆ ಕಾರಟಗಿ, ಡಿ.22:
ಪಟ್ಟಣದ ಚಳ್ಳೂರು ರಸ್ತೆೆಯಲ್ಲಿ ಉದ್ಯಮಿ ಕೆ.ಸೂಗಪ್ಪರು ತಮಗೆ ಸೇರಿದ ಜಮೀನಿನಲ್ಲಿ ಆಸ್ಪತ್ರೆೆಗೆಂದು ದಾನವಾಗಿ ನೀಡಿದ 6 ಎಕರೆ ಪ್ರದೇಶದಲ್ಲಿ 42 ಕೋಟಿರೂ. ವೆಚ್ಚದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆೆ ಮತ್ತು ಗಂಗಾವತಿ ರಸ್ತೆೆಯ ಜೂರಟಗಿ ಬಳಿ ಸರ್ಕಾರಿ ಜಮೀನು ಸರ್ವೆ ನಂ.260ರ ಎರಡು ಎಕರೆ ಪ್ರದೇಶದಲ್ಲಿ 6.52ಕೋಟಿರೂ. ವೆಚ್ಚದ ನೂತನ ತಾಲೂಕು ಪ್ರಜಾಸೌಧ ಕಟ್ಟಡಗಳ ಕಾಮಗಾರಿಗೆ ಸೋಮವಾರ ಜಿಲ್ಲಾಾ ಸಚಿವ ಶಿವರಾಜ ತಂಗಡಗಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಈ ಎರಡೂ ಕಾಮಗಾರಿಗೆ ಕಳೆದ ತಿಂಗಳ ಕೊಪ್ಪಳದಲ್ಲಿ ಮುಖ್ಯಮಂತ್ರಿಿ ಸಿದ್ಧರಾಮಯ್ಯರವರು ಶಂಕುಸ್ಥಾಾಪನೆ ಮಾಡಿದ್ದರು. ಈಗ ನಾನು ಇವುಗಳ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿರುವೆ. ಕಾರಟಗಿ ಜನತೆಯ ಕನಸಾಗಿದ್ದ 100 ಹಾಸಿಗೆ ಆಸ್ಪತ್ರೆೆ, ತಾಲೂಕು ಪ್ರಜಾಸೌಧ ಕಟ್ಟಡಗಳು ಕಾರಟಗಿ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಾಗಿವೆ ಎಂದರು.
ಪ್ರಜಾಸೌಧ ಸುತ್ತ-ಮುತ್ತ ಒಟ್ಟು 12 ಎಕರೆ ಸರ್ಕಾರಿ ಜಮೀನಿದೆ. ಇದರಲ್ಲಿ 2 ಎಕರೆ ಪ್ರಜಾಸೌಧಕ್ಕೆೆ, 6 ಎಕರೆ ನೂತನ ತಾಲೂಕು ಕ್ರೀೆಡಾಂಗಣ ಮತ್ತು ಈಗಾಗಲೇ 7 ಕೋಟಿರೂ. ಮಂಜೂರಾದ ನ್ಯಾಾಯಾಲಯ ಸಮುಚ್ಛಯಗಳ ನಿರ್ಮಾಣಕ್ಕೆೆ 4 ಎಕರೆ ಉಳಿದ ಎರಡು ಎಕರೆಯಲ್ಲಿ ವಸತಿ ಗೃಹಗಳ ಕಟ್ಟಡಕ್ಕೆೆ ಬಳಸಲಾಗುವುದು. ಪ್ರಜಾಸೌಧಕ್ಕೆೆ ಸಂಚರಿಸಲು ಆರ್ ಜಿ ರಸ್ತೆೆಯಿಂದ 40 ಫೀಟ್ ಅಗಲ, 800 ಮೀಟರ್ ಉದ್ದದಷ್ಟು 2.90ಕೋಟಿರೂ.ವೆಚ್ಚದಲ್ಲಿ ನೂತನ ರಸ್ತೆೆ ನಿರ್ಮಿಸಲಾಗುವುದು. ಈಗಾಗಲೇ ಕೆಕೆಆರ್ಡಿಬಿಯಲ್ಲಿ ಅನುದಾನ ಮಂಜೂರಿಗೆ ಪ್ತಸ್ತಾಾವನೆ ಸಲ್ಲಿಸಲಾಗಿದೆ. ರಸ್ತೆೆಗೆ ಭೂಮಿ ನೀಡಿದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು. ಕಾರಟಗಿ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಎಲ್ಲಿಯೂ ಜಾಗ ಸಿಗದ ಕಾರಣ ಅನಿವಾರ್ಯವಾಗಿ ಈ ಪ್ರದೇಶದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲಾಗುತ್ತಿಿದೆ ಎಂದರು.
ಕಾರಟಗಿ ಹೊರ ವಲಯದ ಯರಡೋಣಾ ಸೀಮಾದಲ್ಲಿ 12 ಎಕರೆ ಸರ್ಕಾರಿ ಜಮೀನಿನಲ್ಲಿ 36 ಕೋಟಿರೂ. ವೆಚ್ಚದಲ್ಲಿ ಸರ್ಕಾರಿ ಕಾರ್ಮಿಕ ವಸತಿ ಶಾಲೆ ಮಂಜೂರಾಗಿದೆ. ಕಾರಟಗಿ ತಾಲೂಕು ಕ್ರೀೆಡಾಂಗಣಕ್ಕೆೆ ಅಗತ್ಯ ಅನುದಾನಕ್ಕೆೆ ಈಗಾಗಲೇ ಸರ್ಕಾರಕ್ಕೆೆ ಪ್ರಸ್ತಾಾವನೆ ಸಲ್ಲಿಸಲಾಗಿದೆ. ನೂರು ಹಾಸಿಗೆ ಆಸ್ಪತ್ರೆೆ ಮತ್ತು ಪ್ರಜಾಸೌಧ ಟೆಂಡರ್ ನಿಯಮಾನುಸಾರ ಕಾಲಾವಧಿಯಲ್ಲಿ ಪೂರ್ಣಗೊಳ್ಳಲಿವೆ ಎಂದರು.
ಮುಖ್ಯಮಂತ್ರಿಿಗಳ ವಿಶೇಷ ಯೋಜನೆಯಲ್ಲಿ 50 ಕೋಟಿರೂ. ಕಲ್ಯಾಾಣ ಪಥ, ಕೆಕೆಆರ್ಡಿಬಿ, ಲೋಕೋಪಯೋಗಿ,ಎಸ್ಎಸ್ಡಿಪಿ, ಗ್ರಾಾಮೀಣ ರಸ್ತೆೆ ಸುಧಾರಣೆ ಯೋಜನೆಗಳಲ್ಲಿ ಒಟ್ಟು 400 ಕೋಟಿರೂ. ಮಂಜೂರಾಗಿದ್ದು, ಇದರಲ್ಲಿ ಈಗಾಗಲೇ ನಾನಾ ಗ್ರಾಾಮೀಣ ರಸ್ತೆೆಗಳ ದುರಸ್ಥಿಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೆಲವು ಕಡೆ ಪೂರ್ಣಗೊಂಡಿವೆ. ಕೆಲವು ಕಡೆ ಪ್ರಗತಿಯಲ್ಲಿವೆ. ಇನ್ನೂ ಹಲವು ರಸ್ತೆೆಗಳ ದುರಸ್ಥಿಿಗೆ ಟೆಂಡರ್ ಕರೆಯಲಾಗಿದೆ. ಇನ್ನೂ ಕೆಲವೊಂದು ರಸ್ತೆೆಗಳಿಗೆ ಟೆಂಡರ್ ಕರೆಯಬೇಕಿದೆ. ಒಟ್ಟಾಾರೆ ನನ್ನ ಅವಧಿಯಲ್ಲಿ ಕನಕಗಿರಿ ವಿಧಾನ ಸಭೆ ಕ್ಷೇತ್ರದ ಎಲ್ಲ ಗ್ರಾಾಮೀಣ ರಸ್ತೆೆಗಳನ್ನು ದುರಸ್ಥಿಿ ಮಾಡಿಸುವೆ ಎಂದರು.
ಕಾರಟಗಿ ಪುರಸಭೆ ಅಧ್ಯಕ್ಷೆ ರೇಖಾ ಬಸವರಾಜ ಆನೆಹೊಸೂರು ತಮ್ಮ ಸ್ಥಾಾನಕ್ಕೆೆ ರಾಜೀನಾಮೆ ನೀಡಿದ್ದಾಾರೆ. ಇನ್ನೂ ರಾಜೀನಾಮೆ ಪತ್ರ ಅಂಗೀಕಾರವಾಗಿಲ್ಲ. ತೆರವಾದ ಈ ಸ್ಥಾಾನಕ್ಕೆೆ ಕಾಂಗ್ರೆೆಸ್ ಪಕ್ಷದ ಸದಸ್ಯರನ್ನೇ ಕೂಡಿಸಲಾಗುವುದು ಎಂದು ಇದೇ ಸಂದರ್ಬದಲ್ಲಿ ಸಚಿವರು ತಿಳಿಸಿದರು.
ಆಸ್ಪತ್ರೆೆ ಭೂದಾನಿ ಉದ್ಯಮಿ ಕೆ.ಸೂಗಪ್ಪ, ಕೆ.ನಾಗಪ್ಪ, ತಹಶೀಲ್ದಾಾರ ಎಂ.ಕುಮಾರಸ್ವಾಾಮಿ, ಮಹಿಳಾ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಡಿಹೆಚ್ಓ ಬಿ.ಲಿಂಗರಾಜ, ಟಿಹೆಚ್ಓ ಡಾ.ಗೌರಿಶಂಕರ್, ಬಳ್ಳಾಾರಿ ಎಇಇ ವೆಂಕಟೇಶ, ಕರ್ನಾಟಕ ಗೃಹಮಂಡಳಿ ಎಇಇ ಅನ್ನಪೂರ್ಣ, ಎಇ ರಮೇಶ ಜಂಗವಾಡ, ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು, ಉಪಾಧ್ಯಕ್ಷೆ ದೇವಪ್ಪ ಗಂಗಪ್ಪ, ಸ್ಥಾಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ, ಸದಸ್ಯರಾದ ಮಂಜುನಾಥ ಮೇಗೂರು, ಹಿರೇಬಸಪ್ಪ ಸಜ್ಜನ್, ಪದ್ಮಾಾವತಿ ಮೂಕಣ್ಣ, ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿ ಜಿಲ್ಲಾಾಧ್ಯಕ್ಷ ರೆಡ್ಡಿಿ ಶ್ರೀನಿವಾಸ, ಸದಸ್ಯ ಸೋಮನಾಥ ದೊಡ್ಡಮನಿ, ತಾಲೂಕಾಧ್ಯಕ್ಷ ದೇವರಾಜ ಬರಗೂರು, ಕಾಂಗ್ರೆೆಸ್ ಪಕ್ಷದ ಮುಖಂಡರಾದ ಕೆ.ಎನ್. ಪಾಟೀಲ್, ಶರಣೇಗೌಡ ಮಾಲಿ ಪಾಟೀಲ್, ಚನ್ನಬಸಪ್ಪ ಸುಂಕದ, ಬೂದಿಗಿರಿಯಪ್ಪ, ಶಿವಾರೆಡ್ಡಿಿ ನಾಯಕ, ಜಿ.ವೆಂಕನಗೌಡ್ರು, ಜಿ.ಸಿದ್ಧನಗೌಡ, ಬಿ.ಶರಣ್ಯಯ್ಯಸ್ವಾಾಮಿ, ಅಮರೇಶ ಪಾಟೀಲ್, ಮೋಹನರಾವ್, ಶರಣಪ್ಪ ಪರಕಿ, ಅಯ್ಯಪ್ಪ ಉಪ್ಪಾಾರ, ಉದಯಕುಮಾರ ಈಳಿಗೇರ್ ಅನೇಕರಿದ್ದರು.
ಕಾರಟಗಿಯಲ್ಲಿ 100 ಹಾಸಿಗೆ ಆಸ್ಪತ್ರೆೆ, ತಾಲೂಕು ಪ್ರಜಾಸೌಧ ಕಟ್ಟಡಗಳ ಕಾಮಗಾರಿಗೆ ಸಚಿವ ಶಿವರಾಜ ತಂಗಡಗಿಯಿಂದ ಚಾಲನೆ ಕಾರಟಗಿ ಇತಿಹಾಸದಲ್ಲಿ ಆಸ್ಪತ್ರೆೆ , ಪ್ರಜಾಸೌಧ ಹೊಸ ಮೈಲುಗಲ್ಲಾಾಗಿ

