ಸುದ್ದಿಮೂಲ ವಾರ್ತೆ
ಆನೇಕಲ್, ಏ.20: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸುವರ್ಣ ಎಂಬ ಆನೆ ಹೊಟ್ಟೆಯಲ್ಲಿ ಮೃತಪಟ್ಟಿದ್ದ ಮರಿಯನ್ನು ಹೊರತೆಗೆಯುವಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆರೋಗ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ..
ಬನ್ನೇರುಘಟ್ಟ ಉದ್ಯಾನವನದಲ್ಲಿ 47 ವರ್ಷದ ಕಾಡಾನೆ ಹೊಟ್ಟೆಯಲ್ಲಿ ಮರಿ ಮೃತಪಟ್ಟಿದ್ದು ಸುಮಾರು ಮೂರು ದಿನಗಳಿಂದ ಹೆರಿಗೆ ನೋವಿನಿಂದ ತುಂಬಾ ಕಷ್ಟ ಪಟ್ಟಿತ್ತು. ಅದನ್ನ ಹೊರ ತೆಗೆಯಲು ಆರೋಗ್ಯ ಸಿಬ್ಬಂದಿ ಹರ ಸಾಹಸಪಟ್ಟಿದ್ದಾರೆ.
ಸುವರ್ಣ ಆನೆ ಇದುವರೆಗೆ 9 ಮರಿಗಳಿಗೆ ಜನ್ಮ ನೀಡಿದೆ. ಆದರೆ ದುರದೃಷ್ಟವಶಾತ್ 10ನೇ ಮರಿಗೆ ಹೊಟ್ಟೆಯಲ್ಲಿ ಸಾವನಪ್ಪಿದೆ. ಇನ್ನು ಸುವರ್ಣ ಆನೆ ಆರೋಗ್ಯವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಪನ್ವಾರ್ ಮಾಹಿತಿ ನೀಡಿದರು.