ಸುದ್ದಿಮೂಲ ವಾರ್ತೆ,
ಮಸ್ಕಿ: ಪಟ್ಟಣ ಬಳಿ ತುಂಗಭದ್ರಾ ಎಡದಂಡೆ ಕಾಲುವೆಗೆ ಶುಕ್ರವಾರ ಸ್ನಾನ ಮಾಡಲು ತೆರಳಿದ್ದ ಪೌರಕಾರ್ಮಿಕ ರಾಯಚೂರು ನಿವಾಸಿ ಜಂಬಯ್ಯ ( 44) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ನಿನ್ನೆ ರಾತ್ರಿ ರಾಯಚೂರಿನಿಂದ ಚುನಾವಣೆ ಮತಯಂತ್ರವನ್ನು ತೆಗೆದುಕೊಂಡು ಬಂದಂತಹ ಈತ, ಶುಕ್ರವಾರ ಬೆಳಗ್ಗೆ ಕಾಲುವೆಯಲ್ಲಿ ಸ್ನಾನ ಮಾಡಲೆಂದು ಇಬ್ಬರು ಕಾಲುವೆಗೆ ಇಳಿದಿದ್ದರು ಜಂಬಯ್ಯ. ನೀರಿನ ಸೆಳೆವಿಗೆ ಕೊಚ್ಚಿಕೊಂಡು ಹೋಗಿ, ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.