ಸುದ್ದಿಮೂಲ ವಾರ್ತೆ ಬೀದರ್ , ಜ.06:
ನಗರ ಹೊರವಲಯದ ಚಿಕ್ಕಪೇಟ್ ಸಮೀಪದ ಗುರುನಾನಕ್ ಝೀರಾ ೌಂಡೇಶನ್ ವತಿಯಿಂದ ರಚಿಸಲಾದ ಬಡಾವಣೆ ಅಕ್ರಮವಾಗಿ ರಚಿಸಲಾಗಿದೆ ಎಂಬ ಆರೋಪದ ಹಿನ್ನಲೆ ಸೋಮವಾರವಷ್ಟೇ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹುಮ್ನಾಾಬಾದ್ ಶಾಸಕ ಸಿದ್ದು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ನಡುವೆ ನಡೆದ ಹೊಡೆದಾಟ ಘಟನೆ ಸಂಬಂಧಿಸಿದಂತೆ ನಗರದ ನಿವಾಸಿಯೊಬ್ಬರು ಜಮೀನಿನ ಮೂಲ ಮಾಲೀಕರು ತಾವೇ ಇರುವುದಾಗಿ ವಾದಿಸಿರುವುದು ಪ್ರಕರಣಕ್ಕೆೆ ಮತ್ತೊೊಂದು ತಿರುವು ಸಿಕ್ಕಂತಾಗಿದೆ.
ನಗರದ ಬಸವನಗರ ನಿವಾಸಿ ವೀರಕುಮಾರ್ ದಿವಂಗತ ರಾಮಣ್ಣ ಹಳೆಂಬರ (ದತ್ತಕ ಪುತ್ರ) ಎಂಬುವವರು ಈ ಕುರಿತು ಪತ್ರಿಿಕಾ ಪ್ರಕಟಣೆ ಹೊರಡಿಸಿ ಈ ಸಂಬಂಧ ವಿವರಣೆ ನೀಡಿದ್ದಾರೆ.
ತಾಲ್ಲೂಕಿನ ಚಿಕ್ಕಪೇಟ ಗ್ರಾಾಮದ ಸರ್ವೆ ನಂ.34ರಲ್ಲಿರುವ 26 ಎಕರೆ 08 ಗುಂಟೆ ವಿಸ್ತೀರ್ಣದ ಜಮೀನನ್ನು ಕಾನೂನು ಬಾಹಿರವಾಗಿ ಕಬಳಿಸಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಈ ಹಿಂದೆ ಶಾಸಕರಾಗಿದ್ದ ಮಾಣಿಕರಾವ್ ುಲೆಕರ ಅವರು ನಕಲಿ ದಾಖಲೆಗಳನ್ನು ಸೃಷ್ಟಿಿಸಿ ತಮ್ಮ ಹೆಸರಿಗೆ ಪಹಣಿ ಮಾಡಿಸಿಕೊಂಡು, ಅದನ್ನು ಆಧಾರವಾಗಿ ಮಾಡಿಕೊಂಡು ಸದರಿ ಜಮೀನನ್ನು ಶ್ರೀ ನಾನಕ್ ಝೀರಾ ಸಾಹೇಬ್ ೌಂಡೇಶನ್ ಪ್ರತಿನಿಧಿ ಹಾಗೂ ಅಧ್ಯಕ್ಷ ಸರದಾರ ಬಲಬೀರ ಸಿಂಗ್ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಹೈಕೋರ್ಟ್ನಲ್ಲಿ ಆರ್.ಎ್.ಎ. ನಂ.200154/2025 ಹಾಗೂ ಅಪೀಲೆಟ್ ಟ್ರಿಿಬುನಲ್ ಬೆಂಗಳೂರಿನಲ್ಲಿ ರಿವಿಜನ್ ಅಪೀಲ್ ಸಂ.496/22 ಪ್ರಕರಣಗಳು ಈಗಾಗಲೇ ಚಾಲ್ತಿಿಯಲ್ಲಿವೆ. ನ್ಯಾಾಯಾಲಯದಲ್ಲಿ ವಿಚಾರಣೆ ನಡೆಯುತ್ತಿಿರುವ ಸಂದರ್ಭದಲ್ಲಿ ಜಮೀನಿಗೆ ಸಂಬಂಧಿಸಿದ ಯಾವುದೇ ವ್ಯವಹಾರ, ರಜಿಸ್ಟರ್ ಸೇಲ್ ಡೀಡ್, ಮುಟೇಶನ್, ಖಾತಾ ಬದಲಾವಣೆ ಮಾಡಬಾರದೆಂದು ವೀರಕುಮಾರ ಅವರು ಮನವಿ ಮಾಡಿದ್ದಾರೆ.
ಅಲ್ಲದೇ, ಜಮೀನಿನಲ್ಲಿ ಅನಧಿಕೃತವಾಗಿ ಲೇಔಟ್ ಮಾಡಿ ಪ್ಲಾಾಟ್ ಮಾರಾಟ ಮಾಡಲಾಗುತ್ತಿಿದ್ದು, ಕೋಟಿಗಟ್ಟಲೆ ಹಣದ ವಂಚನೆ ನಡೆಯುತ್ತಿಿದೆ ಎಂದು ಆರೋಪಿಸಿರುವ ಅವರು, ತಪ್ಪಿಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಿ ನ್ಯಾಾಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಾಯಿಸಿದ್ದಾರೆ.

