ಸುದ್ದಿಮೂಲ ವಾರ್ತೆ ಬೆಂಗಳೂರು, ಅ.16:
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ರಾಜ್ಯದ ಎಲ್ಲ ಸಂಘ ಸಂಸ್ಥೆೆಗಳು ರಸ್ತೆೆಗಳಲ್ಲಿ ಮೆರವಣಿಗೆ ನಡೆಸುವುದು ಹಾಗೂ ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸವುದನ್ನು ತಡೆಯಲು ಕಾನೂನು ರೂಪಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಿಗೆ ನೀಡಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಸುದ್ದಿಗೋಷ್ಠಿಿಯಲ್ಲಿ ಮಾಹಿತಿ ನೀಡಿದರು.
ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಿಯಾಂಕ್ ಖರ್ಗೆ ಅವರು ಸರ್ಕಾರಿ ಜಾಗ ಹಾಗೂ ಸ್ಥಳದಲ್ಲಿ ಆರ್ಎಸ್ಎಸ್ ಚಟುವಟಿಕೆ ನಿಷೇಧಿಸುವಂತೆ ಸಿಎಂ ಪತ್ರ ಬರೆದ ಬೆನ್ನ ಹಿಂದೆಯೇ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೇ ಭಾವಿಸಲಾಗಿದೆ.
ನಾವು ತರಲು ಬಯಸುವ ನಿಯಮಗಳು ಸಾರ್ವಜನಿಕ ಸ್ಥಳಗಳು, ಸರ್ಕಾರಿ ಶಾಲೆಗಳು, ಕಾಲೇಜುಗಳು, ಸರ್ಕಾರಿ ಆವರಣಗಳು, ಸರ್ಕಾರಿ ಸ್ವಾಾಮ್ಯದ ಸಂಸ್ಥೆೆಗಳು ಮತ್ತು ಅನುದಾನಿತ ಸಂಸ್ಥೆೆಗಳಿಗೆ ಸಂಬಂಧಿಸಿವೆ. ಗೃಹ ಇಲಾಖೆ, ಕಾನೂನು ಇಲಾಖೆ ಮತ್ತು ಶಿಕ್ಷಣ ಇಲಾಖೆ ಹೊರಡಿಸಿದ ಹಿಂದಿನ ಆದೇಶಗಳನ್ನು ಒಟ್ಟುಗೂಡಿಸಿ ಹೊಸ ನಿಯಮವನ್ನು ರೂಪಿಸುತ್ತೇವೆ. ಮುಂದಿನ ಎರಡು ಮೂರು ದಿನಗಳಲ್ಲಿ, ಹೊಸ ನಿಯಮವು ಕಾನೂನು ಮತ್ತು ಸಂವಿಧಾನದ ಚೌಕಟ್ಟಿಿನೊಳಗೆ ಜಾರಿಗೆ ಬರಲಿದೆ ಎಂದು ತಿಳಿಸಿದರು.’
ನಾವು ಯಾವುದೇ ಸಂಸ್ಥೆೆಯನ್ನು ನಿಯಂತ್ರಿಿಸಲು ಸಾಧ್ಯವಿಲ್ಲ, ಆದರೆ, ಇಂದಿನಿಂದ ನೀವು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ರಸ್ತೆೆಗಳಲ್ಲಿ ನಿಮಗೆ ಬೇಕಾದುದನ್ನು ಮಾಡಲು ಸಾಧ್ಯವಿಲ್ಲ. ನೀವು ಏನೇ ಮಾಡಬೇಕಾದರೂ, ಸರ್ಕಾರದ ಅನುಮತಿ ಪಡೆದ ನಂತರವೇ ಅದನ್ನು ಮಾಡಬೇಕು’ ಎಂದು ಅವರು ಹೇಳಿದರು.
ಅನುಮತಿ ನೀಡಲು ಕೆಲವು ಮಾನದಂಡಗಳಿವೆ ಎಂದು ಹೇಳಿದ ಸಚಿವರು, ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ನೀವು ರಸ್ತೆೆಯಲ್ಲಿ ಕೋಲುಗಳನ್ನು ಬೀಸುತ್ತಾಾ ನಡೆಯಲು ಅಥವಾ ‘ಪಥ ಸಂಚಲನ’ (ಮೆರವಣಿಗೆ) ನಡೆಸಲು ಸಾಧ್ಯವಿಲ್ಲ. ಈ ಎಲ್ಲಾ ವಿಷಯಗಳು ನಾವು ಪರಿಚಯಿಸಲಿರುವ ನಿಯಮಗಳ ಭಾಗವಾಗಿರುತ್ತವೆ ಎಂದು ಹೇಳಿದರು.
1200 ಚದರ ಅಡಿ ನಿವೇಶನಗಳಿಗೆ ಒಸಿ ವಿನಾಯಿತಿ: ಸುಪ್ರೀೀಂ ಕೋರ್ಟ್ ಆದೇಶದ ಹಿನ್ನೆೆಲೆಯಲ್ಲಿ ಸ್ವಾಾಧೀನ ಪ್ರಮಾಣ ಪತ್ರ ಇಲ್ಲದೆ ನಿರ್ಮಿಸುವ ಮನೆಗಳಿಗೆ ವಿದ್ಯುತ್ , ನೀರು ಸೇರಿದಂತೆ ಮೂಲಸೌಲಭ್ಯ ಒದಗಿಸದಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಆದೇಶ ಹೊರಡಿಸಿ ಸೂಚನೆ ನೀಡಿತ್ತು. ಇದರಿಂದ ರಾಜ್ಯದಲ್ಲಿ ಮನೆ ನಿರ್ಮಿಸಿದವರಿಗೆ ವಿದ್ಯುತ್ ಹಾಗೂ ನೀರು ಸಂಪರ್ಕ ದೊರೆತಿರಲಿಲ್ಲ. ಇದನ್ನು ಮನಗಂಡು ಸರ್ಕಾರ 1200 ಚದರ ಅಡಿ ನಿವೇಶನಗಳಿಗೆ ಒಸಿ ಪಡೆಯುವುದಕ್ಕೆೆ ರಿಯಾಯಿತಿ ನೀಡಿದೆ. ಅಲ್ಲದೆ ಸಚಿವ ಸಂಪುಟದಲ್ಲಿ ಒಪ್ಪಿಿಗೆ ನೀಡಿದೆ.
ಸಚಿವ ಸಂಪುಟದಲ್ಲಿ ಒಪ್ಪಿಿಗೆ ನೀಡಿದ ವಿಷಯಗಳು
1200 ಚ.ಅಡಿ ನಿವೇಶನಗಳಿಗೆ ಒಸಿಗೆ ವಿನಾಯಿತಿ:
ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆೆ 1976 ಕಲಂ 310 (3) ಅಡಿ ಸರ್ಕಾರಕ್ಕೆೆ ಇರುವ ಅಧಿಕಾರದಂತೆ 1200 ಚ.ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸುವ ನೆಲ ಅಂತಸ್ತು ಸೇರಿ ಎರಡು ಅಂತಸ್ತು ಅಥವಾ ಮೂರು ಅಂತಸ್ತಿಿನವರೆಗಿನ ವಾಸದ ಕಟ್ಟಡಗಳಿಗೆ ಸ್ವಾಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲು ಸಂಚಿವ ಸಂಪುಟ ನಿರ್ಧರಿಸಿತು.
ಬೆಳೆ ನಷ್ಟಕ್ಕೆೆ ಹೆಚ್ಚಿಿನ ಸಬ್ಸಿಿಡಿ:
ಮುಂಗಾರು ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಸಂಭವಿಸಿದ 12.82 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಹಾನಿಯಾದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಗೆ ಎನ್ಡಿಿಆರ್ಎ್ ಹಾಗೂ ಎಸ್ಡಿಿಆರ್ಎ್ ಮಾನ ದಂಡದ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ 8.500 ರೂ. ಇದನ್ನು ಎರಡು ಹೆಕ್ಟೇರ್ಗೆ ಸೀಮಿತಗೊಳಿಸಲಾಗಿದೆ. ಪ್ರತಿ ಹೆಕ್ಟೇರ್ಗೆ 17 ಸಾವಿರ ರೂ. ಹಾಗೂ ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್ಗೆ 25,500 ರೂ. ಹಾಗೂ ಬಹು ವಾರ್ಷಿಕ ಬೆಳೆಗೆ 31 ಸಾವಿರ ರೂ. ಸಬ್ಸಿಿಡಿ ನಿಗದಿ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಿಗೆ ನೀಡಿದೆ.
ಅಂತಾರಾಷ್ಟ್ರೀಯ ಕ್ರಿಿಕೆಟ್ ಕ್ರೀೆಡಾಂಗಣ:
ಕರ್ನಾಟಕ ಗೃಹ ಮಂಡಳಿ ಬೆಂಗಳೂರಿನ ಹೊರ ವಲಯ ಸೂರ್ಯನಗರ್ ಇಂಡ್ಲವಾಡಿ ಗ್ರಾಾಮದ ಅಂದಾಜು 75 ಎಕರೆ ಜಮೀನಿನಲ್ಲಿ 2350.00 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಂತಾರಾಷ್ಟ್ರೀಯ ಕ್ರಿಿಕೆಟ್ ಮೈದಾನ ನಿರ್ಮಿಸಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅಲ್ಲದೆ ಈ ಬಗ್ಗೆೆ ವಿಸ್ತೃತವಾಗಿ ಚರ್ಚೆ ನಡೆಸಲು ಮುಂದಿನ ಸಚಿವ ಸಂಪುಟದಲ್ಲೂ ಮಂಡಿಸುವಂತೆ ಸೂಚಿಸಲಾಯಿತು.
ವಿಜಯಪುರ ಜಿಲ್ಲಾಸ್ಪತ್ರೆೆ ಉಪಕರಣ ಖರೀದಿಗೆ ಹಣ:
ವಿಜಯಪುರ ಜಿಲ್ಲೆಯ ಜಿಲ್ಲಾ ಆಸ್ಪತ್ರೆೆ ಆವರಣದಲ್ಲಿರುವ 100 ಹಾಸಿಗೆಯ ಸೂಪರ್ ಸ್ಪೆೆಷಾಲಿಟಿ ಆಸ್ಪತ್ರೆೆಯನ್ನು ಪ್ರಾಾರಂಭಿಸಲು ಅವಶ್ಯಕ ಇರುವ ಉಪಕರಣಗಳನ್ನು 54.92 ಕೋಟಿ ರೂ. ಅಂದಾಜು ಮೊತ್ತದಲ್ಲಿ ಖರೀದಿಸಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕಲಬುರಗಿಯಲ್ಲಿ ನಿಮ್ಹಾಾನ್ಸ್ ಮಾದರಿ ಸಂಸ್ಥೆೆ ನಿರ್ಮಾಣ:
ಮೈಸೂರು ಮತ್ತು ಕಲಬುರಗಿ ಜಿಲ್ಲೆಯಲ್ಲಿ ನಿಮ್ಹಾಾನ್ಸ್ ಮಾದರಿಯ ಸಂಸ್ಥೆೆಗಳನ್ನು ನಿರ್ಮಿಸಲು ತಲಾ 100 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಆಡಳಿತಾತ್ಮ ಕ ಅನುಮೋದನೆ ನೀಡಿದೆ.
ಕಲಬುರಗಿ ಜಿಲ್ಲೆಯ ನಿಮ್ಹಾಾನ್ಸ್ ಮಾದರಿ ಸಂಸ್ಥೆೆಯನ್ನು ಕಲ್ಯಾಾಣ ಕರ್ನಾಟಕ ಪ್ರದೇಶಾಭಿವೃದ್ಧಿಿ ಮಂಡಳಿಯ ಅನುದಾನದಿಂದ ಅನುಷ್ಠಾಾನಗೊಳಿಸಲು ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ಸಭೆ ನೀಡಿದೆ.