ಶ್ರೀನಿಧಿ.ಜೈನ್
ಬೆಂಗಳೂರು: ಹೆಸರಿಗೆ ಮಾತ್ರ ನಾಯಿ ಎಂದು ಕರೆಸಿಕೊಂಡರು. ಕೂಡ ಮನುಷ್ಯನಿಗಿಂತಲು ಹೆಚ್ಚು ನಿಯತ್ತಿನ ಪ್ರಾಣಿಯಾಗಿದೆ.ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರುವ ಶ್ವಾನ ಮನುಷ್ಯನಲ್ಲಿ ಆಗುವ ಬದಲಾವಣೆಯನ್ನು ಗುರುತಿಸುವ ಗುಣವನ್ನು ಹೊಂದಿರುತ್ತದೆ.
ನಾಯಿಗಳು ಮಾನವರ ಒಳ್ಳೆಯ ಮಿತ್ರರು ಸಹ ಹೌದು. ನಾಯಿಗಳಿಗೆ ಮನುಷ್ಯರ ಭಾವನೆಗಳು ಮತ್ತು ಮೂಡ್ ಚೆನ್ನಾಗಿ ಅರ್ಥವಾಗುತ್ತವೆ. ಅವುಗಳು ನಿಮ್ಮನ್ನು ಖುಷಿಯಾಗಿ ಇರಿಸಲು ಸಾಕಷ್ಟು ಶ್ರಮಪಡುತ್ತವೆ. ಒಮ್ಮೆ ನೀವು ನಾಯಿಯ ಜೊತೆಗೆ ಪಳಗಲು ಮತ್ತು ಜೀವಿಸಲು ಆರಂಭಿಸಿದರೆ ಸಾಕು, ನೀಮ್ಮ ಪ್ರೀತಿಗೆ ಪೂರಕವಾಗಿ ಬದುಕುತ್ತವೆ.
ಶ್ವಾನಗಳು ಸಾಕಿರುವವರ ಮೇಲೆ ಹೆಚ್ಚು ನಂಬಿಕೆಯನ್ನು ಹೊಂದಿರುತ್ತಾವಂತೆ. ಕುಟುಂಬದಲ್ಲಿ ಎಷ್ಟೇ ಜನ ಇದ್ದರು ಕೂಡ ಅದು ನಂಬುವುದು ಕೇವಲ ಒಬ್ಬರನ್ನು ಮಾತ್ರ ಅದರ ಮಾಲೀಕ ಎಂದು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಕೆಲವು ಸಂಶೋಧನೆಯ ಮೂಲಕ ತಿಳಿದು ಬಂದಿರುವ ಸಂಗತಿಗಳೇಂದರೆ ನಾಯಿಗಳನ್ನು ಅಥವಾ ಪ್ರಾಣಿಗಳನ್ನು ಸಾಕುವವರು ಹೆಚ್ಚು ಭಾವನೆಗಳನ್ನು ಹೊಂದಿದವರಾಗಿದ್ದು ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವವರಾಗಿರುತ್ತಾರೆ ಎಂಬುವುದು ಅನೇಕ ಸಂಶೋಧನೆಯ ಮೂಲಕ ತಿಳಿದು ಬಂದಿದೆ.
ಪ್ರಾಣಿಗಳನ್ನು ಸಾಕುವವರು ಹೆಚ್ಚು ಭಾವನಾತ್ಮಕರಾಗಿದ್ದು ಹೆಚ್ಚು ಖುಷಿಯಾಗಿರುವುದನ್ನು ಬಯಸುತ್ತಾರೆ.ಅತಿಯಾಗಿ ಚಿಂತೆ ಮಾಡುವ ವ್ಯಕ್ತಿಗಳು ಮನೆಯಲ್ಲಿ ನಾಯಿ ಸಾಕಿಕೊಂಡರೆ ಚಿಂತೆ ದೂರವಾಗುವುದರಲ್ಲಿ ಆಶ್ಚರ್ಯವಿಲ್ಲ. ಮನೆಯಲ್ಲಿ ನಾಯಿ ಸೇರಿದಂತೆ ಸಾಕು ಪ್ರಾಣಿಗಳಿದ್ದರೆ ಅಲರ್ಜಿ ಆಗಬಹುದು, ಮಕ್ಕಳಿಗೆ ಸೋಂಕು ತಗುಲಬಹುದು ಎಂದು ಹೆದರಬೇಕಾಗಿಲ್ಲ. ಆದರೆ ಸಣ್ಣ ಮಕ್ಕಳ ಸುತ್ತ ಸಾಕು ಪ್ರಾಣಿಗಳು ಓಡಾಡುತ್ತಿದ್ದರೆ ಅವುಗಳ ಇಮ್ಯುನಿಟಿ ಪವರ್ ಹೆಚ್ಚುತ್ತದೆ. ಇದನ್ನು ಸಾಖಷ್ಟು ಅಧ್ಯಯನಗಳು ಸಾಬೀತು ಮಾಡಿವೆ.
ನಾಯಿ ಎಷ್ಟು ಚುರುಕಾಗಿರುತ್ತವೆ ಅಂದರೆ ತಮ್ಮ ಯಜಮಾನನ ಮನಸ್ಸು ಸರಿ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತವೆ ಹಾಗೂ ಅವರ ಮೂಡ್ ಸರಿ ಮಾಡಲು ತಮ್ಮಿಂದಾಗುವ ಎಲ್ಲ ಪ್ರಯತ್ನ ಮಾಡುತ್ತವೆ.ಬೇಗ ಟೆನ್ಸ್ ಆಗುವುದು ಬೇಗನೆ ರಿಲ್ಯಾಕ್ಸ್ ಮೂಡ್ಗೆ ಬರುವಂತೆ ಮಾಡುತ್ತವೆ. ಒಂಟಿಯಾಗಿರುವವರು ಹಾಗೂ ಕೆಲಸದ ಒತ್ತಡದಿಂದ ಸ್ಪಲ್ಪ ಮಟ್ಟಿಗೆಯಾದರು ರಿಲ್ಯಾಕ್ಸ್ ಬೇಕೆನಿಸುವವರು ಈ ನಾಯಿ ಸಾಕುವುದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ.
ಹೆಸರಿಗೆ ನಾಯಿ ಎಂದೇ ಕರೆಸಿಕೊಂಡರು, ಜನರ ಭಾವನೆಯನ್ನು ಬೇಗನೇ ಅರ್ಥೈಸಿಕೊಳ್ಳುವ ಗುಣಗಳನ್ನು ಹೊಂದಿರುವ ಪ್ರಾಣಿ, ಎಷ್ಟೋ ಜನಕ್ಕೆ ನಾಯಿ ಸಾಕುವ ಹುಚ್ಚು ಹೆಚ್ಚಿರುತ್ತದೆ ಆದರೆ ಪ್ರಾಣಿಗಳನ್ನು ಸಾಕುವ ಮೊದಲು ಅವುಗಳ ಆರೈಕೆಗೆ ಬೇಕಿರುವಂತಹ ಕೆಲವು ಮಾಹಿತಿಯನ್ನು ತಿಳಿದ ನಂತರ ಸಾಕುವುದು ಸೂಕ್ತ. ಕೆಲವರಿಗೆ ಇದು ಶೋಕಿಯಾಗಿ ಪರಿಣಮಿಸಿದೆ. ಶೋಕಿಗಾಗಿ ಸಾಕುವವರು ಅವುಗಳ ಆರೈಕೆಯ ಮೇಲೆಯಾದರು ಸ್ಪಲ್ಪ ಗಮನ ಕೊಡಿ.. ಮರಿ ಚಿಕ್ಕಾದಿದ್ದಾಗಲೆ ಕೆಲವು ವ್ಯಾಕ್ಸಿನ್ಗಳನ್ನು ಮಾಡಿಸುವುದರಿಂದ ಅವುಗಳ ಆರೋಗ್ಯದ ಮೇಲೆ ಯಾವುದೇ ಹಾನಿ ಉಂಟಾಗದ ರೀತಿಯಲ್ಲಿ, ಅಂಟುರೋಗಗಳಿಂದ ದೂರ ಇರಿಸುವಲ್ಲಿ ವ್ಯಾಕ್ಸಿನ್ ಹೆಚ್ಚು ಸಹಕಾರಿಯಾಗಿದೆ.
ಶ್ವಾನಗಳು ಎಷ್ಟು ಸೂಕ್ಷ್ಮವಾಗಿರುತ್ತದೆ ಎಂದರೇ ಕುಟುಂಬಸ್ಥರ ಮಾನಸ್ಥಿತಿಯನ್ನು ಬೇಗ ಅರ್ಥ ಮಾಡಿಕೊಳ್ಳುವಂತಹ ಪ್ರಾಣಿಯಾಗಿರುತ್ತದೆ. ಮನುಷ್ಯರ ಭಾವನೆಗೆ ಅತಿ ಬೇಗನೆ ಸ್ವಂಧಿಸುವ ಗುಣಗಳನ್ನು ಹೊಂದಿರುತ್ತದೆ.
ನಾಯಿಯು ತೋಳದ ಜಾತಿಗೆ ಸೇರಿದ ಒಂದು ಪ್ರಾಣಿಯಾದರು ಕೂಡ ತನ್ನ ಮಾಲೀಕನ ಮಾತನ್ನು ಕೇಳುವ, ಆಜ್ಞೆಯನ್ನು ಪಾಲಿಸುವ ನಿಯತ್ತಿನ ಪ್ರಾಣಿಯಾಗಿರುತ್ತದೆ. ಒಂದು ತುತ್ತು ಅನ್ನವನ್ನು ಹಾಕಿದರೇ ಸಾಕು ಆ ಮನುಷ್ಯನನ್ನು ಬಿಟ್ಟು ಕದಲುವುದಿಲ್ಲ, ಆದರೆ ಪ್ರಾಣಿಗಳು ನಾವು ಹಾಕುವ ಅನ್ನದ ಆಸೆಗೆ ನಮ್ಮ ಜೊತೆ ಉಳಿಯುವುದಿಲ್ಲ ಆಹಾರವನ್ನು ನೀಡದಿದ್ದರೂ ಕೂಡ ಅವು ಸಹಿಸಬಹುದು ಆದರೆ ಮನುಷ್ಯ ಕೊಡುವ ಪ್ರೀತಿ ಸಮಯದ ಮೇಲೆ ಸಾಕು ಪ್ರಾಣಿಗಳು ನಮ್ಮೊಂದಿಗೆ ಹೆಚ್ಚು ಕಾಲ ಉಳಿಯುತ್ತವೆ ಮತ್ತು ಆತ್ಮಿಯತೆಯಿಂದ ಕೂಡಿರುತ್ತದೆ.
ಸಾಕಿದ ಮಾಲೀಕರನ್ನು ಎಷ್ಟು ಅವಲಂಬಿತವಾಗಿರುತ್ತದೆ ಎಂದರೇ ಒಂದೇ ಒಂದು ದಿನ ಆತ ಅದರ ಕಣ್ಣು ಮುಂದೆ ಇಲ್ಲವೆಂದರೆ ಊಟ ಬಿಟ್ಟು ಕೊರಗುವ ಉದಾಹರಣೆಗಳು ಇವೇ.ಒಮ್ಮೊಮ್ಮೆ ನಾಯಿಗಳು ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತವೆ ನಾಯಿಗಳು ಸಹ ಮನಷ್ಯರಂತೆ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲುವ ಪ್ರಯತ್ನ ಮಾಡುತ್ತದೆ.