ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.08: ಬಿತ್ತನೆ ಮಾಡಿ 2 ತಿಂಗಳಾಗಿದೆ. ಆಗಾಗ ಮಳೆಯಾಗಿದ್ದರೂ ಸಂಪೂರ್ಣ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆಯು ಕಾಳು ಕಟ್ಟುತ್ತಿಲ್ಲ. ಈಗಿರುವ ಬೆಳೆಯಿಂದ ಒಂದು ಹಿಡಿ ಕಾಳು ಸಹ ಬರುವುದಿಲ್ಲ. ಇದರಿಂದ ರೈತರು ತಮ್ಮ ಹೊಲದಲ್ಲಿದ್ದ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಆಗ್ರಹಿಸುತ್ತಿದ್ದಾರೆ.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ವಿನೋದ ರೈತರು ತಮ್ಮ ಭೂಮಿಯಲ್ಲಿ 8 ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿ 70-80 ದಿನವಾಗಿದೆ. ಇನ್ನೊಂದು ತಿಂಗಳಲ್ಲಿ ಕಟಾವು ಹಂತಕ್ಕೆ ಬರಬೇಕಿತ್ತು. ಆದರೆ ಮೆಕ್ಕೆಜೋಳವು ಕಾಳು ಕಟ್ಟಿಲ್ಲ. ಅವಧಿ ಮೀರಿದ್ದರಿಂದ ರೈತ ಟ್ರಾಕ್ಟರ್ ಮೂಲಕ ತನ್ನ ಬೆಳೆಯನ್ನು ನಾಶ ಮಾಡುತ್ತಿದ್ದಾನೆ. ಪ್ರತಿ ಎಕರೆಗೆ 20 ಸಾವಿರಕ್ಕಿಂತ ಅಧಿಕ ಖರ್ಚು ಮಾಡಿರುವ ರೈತನಿಗೆ ಈಗ ಭೂಮಿಯಲ್ಲಿ ಒಂದು ರೂಪಾಯಿ ಆದಾಯ ಬರುವುದಿಲ್ಲ ಎಂದುಕೊಂಡು ಮೆಕ್ಕೆಜೋಳವನ್ನು ಹರಗುತ್ತಿದ್ದಾನೆ.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ರೈತರು ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಕೊಪ್ಪಳ ತಾಲೂಕು ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹಿಸುತ್ತಿದ್ದಾರೆ.
ಈ ಕುರಿತು ಬೆಟಗೇರಿಯ ರೈತ ಏಳುಕೊಟೇಶ ಕೋಮಲಾಪುರ ಕೊಪ್ಪಳ ತಾಲೂಕನ್ನು ಬರಪೀಡತ ತಾಲೂಕು ಎಂದು ಘೋಷಿಸಲು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಟ್ವಿಟ್ ಮಾಡಿ ಅಗ್ರಹಿಸಿದ್ದಾರೆ.