ಸುದ್ದಿಮೂಲವಾರ್ತೆ
ಕೊಪ್ಪಳ ಅ 19:ಕೊಪ್ಪಳ ತಾಲೂಕಿನ ಚಿಕ್ಕಕಾಸನಕಂಡಿಯ ಬಳಿಯಲ್ಲಿರುವ ಉಕ್ಕಿ ಕಾರ್ಖಾನೆಗಳು ರೈತನ ಭೂಮಿ ಬಳಕೆ ಮಾಡಿಕೊಳ್ಳುವುದನ್ನು ವಿರೋಧಿಸಿ ಮಲ್ಲಿಕಾರ್ಜುನ ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಚಿಕ್ಕಕಾಸನಂಕಂಡಿ ಬಳಿಯಲ್ಲಿ ಕೃಷಿ ಭೂಮಿಯಲ್ಲಿ ಕೆಲಸ ಮಾಡುವಾಗ ಬಿ ಕೆಎಸ್, ಕಿರ್ಲೋಸ್ಕರ, ಎಚ್ ಆರ್ ಜಿ ಕಾರ್ಖಾನೆಯವರು ರಸ್ತೆ ಇಲ್ಲದಿದ್ದರೂ ರಸ್ತೆ ಬಳಕೆ ಮಾಡುತ್ತಿದ್ದಾರೆ. ತಡೆಯಲು ಹೋದರೆ ಗಲಾಟೆ ಮಾಡುತ್ತಾರೆ.
ನಿಮ್ಮನ್ನು ಕೊಲೆ ಮಾಡಿ ಯಾರಿಗೂ ಕಾಣದಂತೆ ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ವಿಷ ಸೇವಿಸಿದ ರೈತ ಅಣ್ಣ ಪರಸುರಾಮ ಹಾಗು ತಾಯಿ ಹುಲಿಗೆಮ್ಮ ಇಂದು ಮೀಡಿಯಾ ಕ್ಲಬ್ ನಲ್ಲಿ ಕಣ್ಣೀರು ಹಾಕಿದರು.
ಇಲ್ಲಿಯ ದೌರ್ಜನ್ಯ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ನಿನ್ನೆ ಸ್ಥಳೀಯರೊಬ್ಬರು ಹೊಲ ತಯಾರಿ ಮಾಡುವಾಗ ನಮ್ಮ ಹೊಲದಾಗ ತಗ್ಗು ತೆಗೆದರು. ಮತ್ತೆ ಬೇರೆ ಕಡೆ ದಾರಿ ಮಾಡಿಕೊಂಡರು. ಇದೇ ಕಾರಣ ಕ್ಕೆ ನನ್ನ ತಮ್ಮ ಬೇಸತ್ತು ಇಂದು ವಿಷ ಸೇವಿಸಿದ್ದಾನೆ. ದೌರ್ಜನ್ಯ ಹಾಗು ಗುಂಡಾಗಿರಿ ಮಾಡುತ್ತಿರುವದರಿಂದ ಅದಕ್ಕೆ ವಿಷ ಸೇವಿಸಿದ್ದಾನೆ. ವಿಷ ಸೇವಿಸಿದ ಮಲ್ಲಿಕಾರ್ಜುನ ಬೇಳೂರರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ. ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅವರು ಹೇಳಿದರು.
ನನ್ನ ಮಕ್ಕಳನ್ನು ಹೊಲಕ್ಕೆ ಕಳುಹಿಸಲು ಭಯವಾಗುತ್ತಿದೆ ಎಂದು ದುಃಖಿಸಿ ಮಾಧ್ಯಮದವರ ಮುಂದೆ ಕಣ್ಣೀರು ಹಾಕಿದರು.