ಸುದ್ದಿಮೂಲ ವಾರ್ತೆ
ಕೊಪ್ಪಳ,ಸೆ.02: ಕಳೆದೊಂದು ತಿಂಗಳಿನಿಂದ ಮಳೆಯಾಗದೆ ಬೆಳೆ ಒಣಗಿದೆ. ಇದರಿಂದ ರೈತರು ಈಗ ತಾವೇ ಬಿತ್ತಿದ ಬೆಳೆಯನ್ನು ಹರಗುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿರುವ ರೈತ ಈಗ ಕಂಗಾಲಾಗಿದ್ದಾನೆ.
ಕೊಪ್ಪಳ ಜಿಲ್ಲೆಯಲ್ಲಿ ಈಗ ಮಳೆ ಬಾರದೆ.ಬಿತ್ತನೆ ಮಾಡಿದ ಬೆಳೆಯು ಒಣಗಿದೆ.ಇದರಿಂದ ಬೇಸರದಿಂದಲೇ ತಾನೇ ಬಿತ್ತಿದ ಬೆಳೆಯನ್ನು ರೈತ ಹರಗುತ್ತಿದ್ದಾನೆ.
ಕೊಪ್ಪಳ ತಾಲೂಕಿನ ಬೆಟಗೇರಿಯಲ್ಲಿಯ ರೈತ
ವೀರಯ್ಯ ಎಂಬ ರೈತನಿಂದ ಬೆಳೆ ನಾಶ ಮಾಡುತ್ತಿದ್ದಾನೆ.2 ಎಕರೆ ಮೆಕ್ಕೆಜೋಳವನ್ನು ಹರಗಿದ ರೈತ ಕಳೆದ ಒಂದು ತಿಂಗಳಿನಿಂದ ಮಳೆಯಾಗದೆ ಮೆಕ್ಕೆ ಜೋಳ ಬೆಳೆದಿಲ್ಲ. ಇನ್ನೂ ಹದಿನೈದು ದಿನ ಮೊದಲಾಗಿದ್ದರೆ ಬೆಳೆ ಬರುತ್ತಿತ್ತು. ಆದರೆ ಈಗ ಬೆಳೆ ಬಾರದ ಹಿನ್ನೆಲೆಯಲ್ಲಿ
ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿರುವ ಬೆಳೆಯನ್ನು ನಾಶ ಮಾಡುತ್ತಿದ್ದೇನೆ.
ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಆಗ್ರಹಿಸುತ್ತಿರುವ ರೈತರು ಆಗ್ರಹಿಸಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ರೈತ ಸಂಕಷ್ಟ ಕ್ಕೊಳಗಾಗಿದ್ದಾನೆ. ಸರಕಾರ ರೈತ ನೆರವಿಗೆ ಬರಬೇಕೆಂದು ಆಗ್ರಹಿಸಿದ್ದಾರೆ.