ಸುದ್ದಿಮೂಲ ವಾರ್ತೆ ಮಾನ್ವಿ, ಡಿ.09:
ವಿದ್ಯಾಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿಿತ್ವ ಹಾಗೂ ಭವಿಷ್ಯ ರೂಪಿಸುವ ನಿಟ್ಟಿಿನಲ್ಲಿ ನೂರಾರು ಯುವಕರಿಗೆ ವೃತ್ತಿಿ ಬದುಕು ಕಟ್ಟಿಿಕೊಟ್ಟ ಪ್ರಾಾಧ್ಯಾಾಪಕ ಡಾ.ಸೈಯದ್ ಮಿನಾಜುಲ್ ಹಸನ್ ಅವರ ಶೈಕ್ಷಣಿಕ ಸೇವೆ ಮತ್ತು ಸಾಧನೆ ಶ್ಲಾಾಘನೀಯ ಎಂದು ಕೆಪಿಸಿಸಿ ಮಾಧ್ಯಮ ವಕ್ತಾಾರ ಡಾ.ರಝಾಕ್ ಉಸ್ತಾಾದ್ ಹೇಳಿದರು.
ರವಿವಾರ ಸಂಜೆ ಪಟ್ಟಣದ ಗ್ಯಾಾಲಕ್ಸಿಿ ಂಕ್ಷನ್ ಹಾಲ್ ನಲ್ಲಿ ಭಾರತೀಯ ಐಟಿ ಉದ್ಯಮಗಳಲ್ಲಿ ಸೈಬರ್ ಅಪರಾಧಗಳ ನಿಯಂತ್ರಣಕ್ಕಾಾಗಿ ಕೃತಕ ಬುದ್ಧಿಿಮತ್ತೆೆಯ ಬಳಕೆ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ, ಅಲಿಗಡ್ನ ಮಂಗಲಯಾತನ ವಿಶ್ವವಿದ್ಯಾಾಲಯದ ಕಂಪ್ಯೂೂಟರ್ ವಿಜ್ಞಾನ ವಿಭಾಗದ ವತಿಯಿಂದ ಪಿಎಚ್.ಡಿ (ಡಾಕ್ಟರೇಟ್) ಪದವಿಗೆ ಭಾಜನರಾದ ಪ್ರಾಾಧ್ಯಾಾಪಕ ಡಾ. ಸೈಯದ್ ಮಿನಾಜುಲ್ ಹಸನ್ ಅವರಿಗೆ ಗೆಳೆಯರು ಹಾಗೂ ವಿದ್ಯಾಾರ್ಥಿಗಳ ಬಳಗ ಹಮ್ಮಿಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಾಧ್ಯಾಾಪಕ ಡಾ.ರವಿ ಮಸ್ಕಿಿ ಅವರು ಸೈಬರ್ ಅಪರಾಧಗಳ ನಿಯಂತ್ರಣ ಕುರಿತು ಡಾ.ಮಿನಾಜುಲ್ ಹಸನ್ ಅವರು ಕೈಗೊಂಡಿರುವ ಸಂಶೋಧನೆ ಕುರಿತು ವಿವರಿಸಿದರು.
ಮುಖಂಡರಾದ ಹ್ಯಾಾರಿಸ್ ಸಿದ್ದಿಕಿ, ಸಾಜೀದ್ ಖಾದ್ರಿಿ, ಖಾಲೀದ್ ಖಾದ್ರಿಿ, ಸುರೇಶ ಕುರ್ಡಿ, ಆರ್ೀ ಮಿಯಾ ಚಾಗಭಾವಿ, ತಾಯಪ್ಪ ಬಿ.ಹೊಸೂರು, ಮೊಹಮ್ಮದ್ ಸಾಜೀದ್ ರಾಯಚೂರು, ಮಹಾಂತೇಶ ಓಲೇಕಾರ, ನಿವೃತ್ತ ಶಿಕ್ಷಕರಾದ ಹುಸೇನಪ್ಪ ಕುರ್ಡಿ, ಮಧುಕುಮಾರಿ ಪಾಂಡೆ, ಮಹಿಮೂದಾ ಬೇಗಂ ಮತ್ತಿಿತರರು ಮಾತನಾಡಿ ಸೈಯದ್ ಮಿನಾಜುಲ್ ಹಸನ್ ಅವರ ಶೈಕ್ಷಣಿಕ ಸಾಧನೆ ಮತ್ತು ಸೇವೆಯ ಬಗ್ಗೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗೌರವ ಸನ್ಮಾಾನ ಸ್ವೀಕರಿಸಿ ಮಾತನಾಡಿದ ಪ್ರಾಾಧ್ಯಾಾಪಕ ಸೈಯದ್ ಮಿನಾಜುಲ್ ಹಸನ್, ನನ್ನ ಶೈಕ್ಷಣಿಕ ಹಾಗೂ ವೃತ್ತಿಿ ಜೀವನದ ಯಶಸ್ಸಿಿಗೆ ತಂದೆ-ತಾಯಿಯ ಆಶೀರ್ವಾದ, ವಿದ್ಯೆೆ ಕಲಿಸಿದ ಗುರುಗಳ ಮಾರ್ಗದರ್ಶನ, ಕುಟುಂಬ ಸದಸ್ಯರ ಪ್ರೋೋತ್ಸಾಾಹ, ಸ್ನೇಹಿತರು ಹಾಗೂ ಸಹೋದ್ಯೋೋಗಿಗಳ ಸಹಕಾರ ಮುಖ್ಯ ಕಾರಣ. ವಿದ್ಯಾಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ಹಾಗೂ ಉದ್ಯೋೋಗ ಕಲ್ಪಿಿಸುವುದು ಮತ್ತು ಶಾಂತಿ, ಸೌಹಾರ್ದ, ಸಹೋದರತ್ವದ ಸಮಾಜ ನಿರ್ಮಾಣಕ್ಕೆೆ ಶ್ರಮಿಸುವುದು ನನ್ನ ಸಂಕಲ್ಪ’ ಎಂದು ಹೇಳಿದರು.
ಪಟ್ಟಣದ ಹಲವಾರು ಗಣ್ಯರು, ಸಂಘ ಸಂಸ್ಥೆೆಗಳ ಮುಖಂಡರು, ಸರ್ಕಾರಿ ನೌಕರರ ಸಂಘ ಹಾಗೂ ಮುಸ್ಲಿಿಂ ನೌಕರರ ಸಂಘದ ಪದಾಧಿಕಾರಿಗಳು, ಉಪನ್ಯಾಾಸಕರು ಹಾಗೂ ವಿದ್ಯಾಾರ್ಥಿಗಳು ಸೈಯದ್ ಮಿನಾಜುಲ್ ಹಸನ್ ಅವರನ್ನು ಸನ್ಮಾಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸೈಯದ್ ಮಿನಾಜುಲ್ ಹಸನ್ ಅವರ ಶಿಕ್ಷಣ ಮತ್ತು ವೃತ್ತಿಿ ಬದುಕಿನ ಮಹತ್ವದ ಸಾಧನೆಗಳ ಕಿರುಚಿತ್ರ ಪ್ರದರ್ಶಿಸಲಾಯಿತು.
ಶಿಕ್ಷಕ ಅಬ್ದುಲ್ ಯೂನುಸ್ ಅಭಿನಂದನಾ ಭಾಷಣ ಮಾಡಿದರು. ಹಿರಿಯ ವಕೀಲ ಸೈಯದ್ ತನ್ವೀರುಲ್ ಹಸನ್ ಕಾರ್ಯಕ್ರಮ ಉದ್ಘಾಾಟಿಸಿದರು. ಯುವ ಮುಖಂಡ ಮಹಮ್ಮದ್ ಬೇಗ್ ಸಂವಿಧಾನ ಪೀಠಿಕೆ ಬೋಧಿಸಿದರು.
ಹಸನ್ ಕುಟುಂಬದ ಸದಸ್ಯರಾದ ಸೈಯದ್ ಶಂಶೀರ ಉಲ್ ಹಸನ್, ಸೈಯದ್ ಸರ್ರಾಜ ಉಲ್ ಹಸನ್, ಶೇಖ್ ಅಲಿ ಮತ್ತಿಿತರರು ಉಪಸ್ಥಿಿತರಿದ್ದರು.
ಎಂ.ಎ.ಎಚ್.ಮುಖೀಮ್ ಪ್ರಾಾಸ್ತಾಾವಿಕ ಭಾಷಣ ಮಾಡಿದರು. ಉಪನ್ಯಾಾಸಕ ಮಹಿಬೂಬ್ ಮದ್ಲಾಾಪುರ ಸ್ವಾಾಗತಿಸಿದರು ಶಿಕ್ಷಕ ಅಜಗರ್ಅಲಿ ನಿರೂಪಿಸಿದರು. ಪ್ರಾಾಧ್ಯಾಾಪಕ ಸೈಯದ್ ಮುಜೀಬ್ ಅಹ್ಮದ್ ವಂದಿಸಿದರು.
ಗೆಳೆಯರ ಬಳಗದಿಂದ ಅಭಿನಂದನಾ ಸಮಾರಂಭ ಯುವಕರ ವೃತ್ತಿ ಬದುಕಿಗೆ ಪ್ರಾಧ್ಯಾಪಕ ಸೈಯದ್ ಮಿನಾಜುಲ್ ಹಸನ್ ಪ್ರೇರಣೆ – ಡಾ.ರಝಾಕ್ ಉಸ್ತಾದ್

