ಸುದ್ದಿಮೂಲ ವಾರ್ತೆ ಮಾನ್ವಿ, ಡಿ.25:
ಮಾನ್ವಿಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಚರ್ಚ್ಗಳಲ್ಲಿ ಕ್ರಿಿಸ್ ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕೋನಾಪುರಪೇಟೆಯ ಸೈಂಟ್ ಮೇರಿಸ್ ಚರ್ಚ್ನಲ್ಲಿ ಹಾಗೂ ಚರ್ಚ್ ಹೊರಗಡೆ ವಿದ್ಯುತ್ ದೀಪದ ಅಲಂಕಾರ ಮಾಡಿ ಗೋದಲಿಗೆ ಬಣ್ಣ ಬಣ್ಣದ ಬಲೂನ್ ಹಾಗೂ ಅಲಂಕಾರದ ಲೈಟು ಆಳವಡಿಸಲಾಗಿತ್ತು.
ಎರಡು ಸಾವಿರ ಇಪ್ಪತೈದು ವರ್ಷಗಳ ಹಿಂದೆ ಯೇಸು ಕ್ರಿಿಸ್ತ ಮಧ್ಯರಾತ್ರಿಿ ದನದ ಕೊಟ್ಟಿಿಗೆಯಲ್ಲಿ ಜನಿಸಿರುವ ಸ್ಥರಣಾರ್ಥವಾಗಿ ಬುಧವಾರ ರಾತ್ರಿಿ ವಿಶೇಷ ಪ್ರಾಾರ್ಥನೆ, ಪೂಜೆ ನೆರವೇರಿಸಲಾಯಿತು.
ಚರ್ಚ್ನ ವಂದನೀಯ ಗುರುಗಳಾದ ವಂ. ಾ.ವಿನ್ಸೆೆಂಟ್ ಸುರೇಶ, ಬೆಂಗಳೂರಿನ ವಂ. ಾ. ವಿಲಿಯಂ ಪ್ರಭು, ವಂ.ಾ.ವಸಂತಕುಮಾರ ಇವರು ಕ್ರಿಿಸ್ತನ ಜನನದ ಕುರಿತು ವಿಶೇಷ ಪ್ರಬೋಧನೆ ನೀಡಿದರು.
ಕ್ರಿಿಸ್ಮಸ್ ಅಂಗವಾಗಿ ಬಾಲಯೇಸುವಿನ ಮೂರ್ತಿಯನ್ನು ಮನೆ ಮನೆಗೆ ತೆಗೆದು ಕೊಂಡು ಯುವಕರು, ಮಕ್ಕಳು ವಾದ್ಯಗಳೊಂದಿಗೆ ಗಾಯನ, ಭಜನಾ ಹಾಡುತ್ತಾಾ ಕಿಸ್ತನ ಜನನವನ್ನು ಕೊಂಡಾಡಿದರು.
ಗುರುವಾರ ಬೆಳಿಗ್ಗೆೆ ಕ್ರಿಿಸ್ ಮಸ್ ಹಬ್ಬದ ಪೂಜೆ ನೆರವೇರಿತು. ನಂತರ ಕ್ರಿಿಸ್ ಮಸ್ ಕೇಕ್ ವಿತರಿಸಲಾಯಿತು, ಭಕ್ತಾಾದಿಗಳು ಪರಸ್ಪರ ಕ್ರಿಿಸ್ ಮಸ್ ಶುಭಾಶಯ ಕೋರಿದರು.
ಶಾಸಕ ಹಂಪಯ್ಯ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಕಾಂಗ್ರೆೆಸ್ ಮುಖಂಡ ರವಿ ಬೋಸರಾಜು ಹಾಗೂ ಇತರ ಗಣ್ಯರು, ಮುಖಂಡರು ಚರ್ಚ್ಗೆ ಭೇಟಿ ನೀಡಿ ಗುರುಗಳಿಗೆ ಕೇಕ್ ನೀಡಿ, ಅವರನ್ನು ಸನ್ಮಾಾನಿಸುವ ಮೂಲಕ ಗುರುಗಳಿಗೆ ಮತ್ತು ಭಕ್ತಾಾಧಿಗಳಿಗೆ ಶುಭಾಶಯ ಕೋರಿದರು.
ಕ್ರಿಿಸ್ಮಸ್ ಅಂಗವಾಗಿ ಸಾಯಂಕಾಲ ಚರ್ಚ್ ಆವರಣದಲ್ಲಿ ಸರ್ವಧರ್ಮ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತು. ನಂತರ ಯುವಕ-ಯುವತಿಯರು ಹಾಗೂ ಮಕ್ಕಳಿಂದ ಕ್ರಿಿಸ್ಮಸ್ ಸಂದೇಶ ಸಾರುವ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪಟ್ಟಣದ ಮೆಥೋಡಿಸ್ಟ್ ಚರ್ಚ್, ಹೊಸಾನ್ನ ಚರ್ಚ್ ಸೇರಿದಂತೆ ಗ್ರಾಾಮೀಣ ಪ್ರದೇಶದ ಜಾಗೀರ ಪನ್ನೂರು, ಪೋತ್ನಾಾಳ್, ಕುರ್ಡಿ, ಮಾಡಗಿರಿ, ಕಲ್ಲೂರು, ಹರನಹಳ್ಳಿಿ, ಚೀಕಲಪರ್ವಿ ಮುಂತಾದ ಚರ್ಚುಗಳಲ್ಲಿ ಕ್ರೈಸ್ತ ಭಕ್ತಾಾದಿಗಳು ಕ್ರಿಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

