ಸುದ್ದಿಮೂಲ ವಾರ್ತೆ ಬೀದರ್, ಅ.18:
ನಗರದ ಪ್ರತಿಷ್ಠಿಿತ ಬ್ರಿಿಮ್ಸ್ ಆಸ್ಪತ್ರೆೆ ಮತ್ತೇ ಸುದ್ದಿಯಲ್ಲಿದೆ. ಸರಿ ಹೋಗಲಾರದ ಯಾವುದಾದರೂ ಸಮಸ್ಯೆೆ ಇದ್ದರೆ ಅದು ನಗರದ ಬ್ರಿಿಮ್ಸ್ ಆಸ್ಪತ್ರೆೆಯೇ ಆಗಿರುತ್ತದೆ ಎಂಬಷ್ಟರ ಮಟ್ಟಿಿಗೆ ವಿವಾದಗಳು ಹುಟ್ಟಿಿಕೊಳ್ಳುತ್ತಿಿವೆ.
ಇತ್ತೀಚಿಗಷ್ಟೇ ಬಾಣಂತನದ ವೇಳೆ ನವಜಾತ ಶಿಶು ಸಾವನ್ನಪ್ಪಿಿದ್ದು, ವೈದ್ಯರ ನಿರ್ಲಕ್ಷ್ಯತನದ ವಿರುದ್ಧ ಆರೋಪ ಕೇಳಿ ಬಂದಿತ್ತು.
ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರಿಯಾಗಿ ಜವಾಬ್ದಾಾರಿ ನಿಭಾಯಿಸದಿರುವುದೂ ಕೂಡ ಪ್ರಮುಖ ಕಾರಣವಾಗಿದೆ ಎಂದು ಹೇಳಬಹುದು.
ಸದ್ಯ, ನಗರದ ಬ್ರಿಿಮ್ಸ್ ಆಸ್ಪತ್ರೆೆಯಲ್ಲಿ ರೋಗಿಗಳಿಗೆ ರಕ್ತ ಪರೀಕ್ಷೆಗಳು ನಡೆಯುತ್ತಿಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಆಸ್ಪತ್ರೆೆಯಲ್ಲಿರುವ ಲ್ಯಾಾಬ್ನಲ್ಲಿ ರೋಗಿಗಳಿಗೆ ಹಲವಾರು ಪರೀಕ್ಷೆಗಳು ಮಾಡಲಾಗುತ್ತದೆ. ಆದರೆ, ಸದ್ಯ, ಎರಡ್ಮೂರು ಪರೀಕ್ಷೆಗಳು ಮಾತ್ರ ಮಾಡಲಾಗುತ್ತಿಿದ್ದು, ಉಳಿದ ಪರೀಕ್ಷೆಗಳಿಗೆ ಖಾಸಗಿ ಲ್ಯಾಾಬ್ ಗೆ ಹೋಗುವ ಪರಿಸ್ಥಿಿತಿ ಉದ್ಭವವಾಗಿದೆ ಎಂದು ರೋಗಿಗಳ ಸಂಬಂಧಿಕರು ಅಳಲು ತೋಡಿಕೊಳ್ಳುತ್ತಿಿದ್ದಾರೆ.
ಖಾಸಗಿ ಲ್ಯಾಾಬ್ ಗಿಂತ ಕಡಿಮೆ ದರದಲ್ಲಿ ಪರೀಕ್ಷೆಗಳು ನಡೆಯುತ್ತವೆ ಹಾಗೂ ಉಚಿತ ಚಿಕಿತ್ಸೆೆಗಾಗಿ ರೋಗಿಗಳು ಬ್ರಿಿಮ್ಸ್ ಆಸ್ಪತ್ರೆೆಗೆ ಬರುತ್ತಾಾರೆ. ಆದರೆ, ಒಂದಿಲ್ಲೊಂದು ವಿವಾದಗಳ ಮೂಲಕ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆೆ ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದೆ.
ಕಳೆದ ಒಂದು ತಿಂಗಳಿಗಿಂತ ಹೆಚ್ಚಿಿನ ಕಾಲದಿಂದ ಸಮಸ್ಯೆೆ ಮುಂದುವರೆದಿದ್ದು, ಅಧಿಕಾರಿಗಳು ಮಾತ್ರ ಮೌನಕ್ಕೆೆ ಶರಣಾಗಿರುವುದು ವಿಚಿತ್ರವಾಗಿದೆ.
ಬಾಕ್ಸ್
ಶೆಟಕಾರ್-ಶ್ರೀಕಾಂತ್ ಮಧ್ಯೆೆ ಜಟಾಪಟಿ ?
ಸರ್ಕಾರ ವೈದ್ಯಕೀಯ ಚಿಕಿತ್ಸೆೆಗಾಗಿ ಭರಪೂರ ಅನುದಾನ ಮೀಸಲು ಇಡುತ್ತದೆ. ಕೋಟ್ಯಾಾಂತರ ರೂ. ಅನುದಾನ ಬಂದರೂ ಬ್ರಿಿಮ್ಸ್ ಆಸ್ಪತ್ರೆೆಯಲ್ಲಿ ಸಾವಿರಾರು ರೂಗೆ ದೊರಕುವ ಕೆಮಿಕಲ್ ಕೊರತೆಯಿಂದ ರೋಗಿಗಳಿಗೆ ಪರೀಕ್ಷೆ ನಡೆಸುತ್ತಿಿಲ್ಲ ಎಂಬುದು ವಿಚಿತ್ರವಾದರೂ ಸತ್ಯ.
ಹಾಲಿ ಬ್ರಿಿಮ್ಸ್ ನಿರ್ದೇಶಕ ಡಾ. ಶಿವಕುಮಾರ್ ಶೆಟಕಾರ್ ಹಾಗೂ ಹಣಕಾಸು ಆಡಳಿತ ಅಧಿಕಾರಿ ಶ್ರೀಕಾಂತ್ ವೈರಾಗ್ಯ ನಡುವೆ ಸಮನ್ವಯ ಕೊರತೆಯೇ ಇದಕ್ಕೆೆಲ್ಲಾ ಕಾರಣ ಎಂದು ಹೇಳಲಾಗುತ್ತಿಿದೆ. ಆಸ್ಪತ್ರೆೆಗೆ ಕೋಟ್ಯಾಾಂತರ ರೂ. ಅನುದಾನ ಬರುವ ಕಾರಣ ಗುತ್ತಿಿಗೆ ವ್ಯವಹಾರಕ್ಕಾಾಗಿ ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದೆಯಾ? ಎಂಬ ಅನುಮಾನಗಳು ಕೇಳಿಬರುತ್ತಿಿವೆ. ಇತ್ತೀಚಿಗೆ ಆಸ್ಪತ್ರೆೆಯ ಹಣಕಾಸು ಆಡಳಿತ ಹೆಚ್ಚುವರಿಯಾಗಿ ವಹಿಸಿಕೊಂಡಿರುವ ಶ್ರೀಕಾಂತ್ ವೈರಾಗ್ಯ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯೂ ಹೌದು. ಒಬ್ಬೇ ಅಧಿಕಾರಿಗೆ ಎರಡೆರಡು ದೊಡ್ಡ ಜವಾಬ್ದಾಾರಿ ನೀಡಿರುವುದೂ ಕೂಡ ಆಡಳಿತ ನಿರ್ವಹಣೆ ಕಗ್ಗಂಟಾಗಿದೆಯಾ ? ಎಂಬ ಪ್ರಶ್ನೆೆಗಳು ಉದ್ಭವಿಸಿವೆ.
ಬಾಕ್ಸ್
ಲ್ಯಾಾಬ್ ಟೆಸ್ಟ್ಗೆ ಪರದಾಟ : ದೃಢ
ನಗರದ ಬ್ರಿಿಮ್ಸ್ ಆಸ್ಪತ್ರೆೆಯಲ್ಲಿ ಕೆಮಿಕಲ್ ಕೊರತೆಯಿಂದ ಪ್ರಮುಖ ಟೆಸ್ಟ್ಗಳು ನಡೆಯದಿರುವ ಬಗ್ಗೆೆ ಸುದ್ದಿಮೂಲಕ್ಕೆೆ ಬ್ರಿಿಮ್ಸ್ ಆಸ್ಪತ್ರೆೆಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ರೋಗಿಗಳು ಟೆಸ್ಟ್ ನಡೆಯುತ್ತಿಿಲ್ಲ ಎಂದು ಪರದಾಡುವುದು ತಮ್ಮ ಗಮನಕ್ಕೂ ಬಂದಿದೆ. ಕೆಮಿಕಲ್ ಕೊರತೆಯಿಂದ ಹೀಗಾಗುತ್ತಿಿದೆ. ನಿತ್ಯ ರೋಗಿಗಳಿಂದ ಜಮಾ ಆಗುವ ಹಣದಿಂದಲೇ ಇಂಥ ಕೊರತೆ ನೀಗಿಸಬಹುದಾಗಿದೆ. ಆದರೆ, ಸಂಬಂಧಿಸಿದವರು ಗಮನಹರಿಸದೇ ಇರುವುದೇ ಸಮಸ್ಯೆೆ ಉಲ್ಬಣಕ್ಕೆೆ ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೋಟ್ಯಂತರ ಅನುದಾನ ಬಂದರೂ ಉಪಯೋಗವಿಲ್ಲ !
ನಗರದ ಬ್ರಿಿಮ್ಸ್ ಆಸ್ಪತ್ರೆೆಗೆ ಕೋಟ್ಯಂತರ ರೂ. ಅನುದಾನ ಬಂದರೂ ಉಪಯೋಗಕ್ಕೆೆ ಬಾರದಂತಾಗಿದೆ. ಶೌಚಾಲಯ ಸೇರಿದಂತೆ ಇಡೀ ಆಸ್ಪತ್ರೆೆ ಪರಿಸರದಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿಿದೆ. ಅಧಿಕಾರಿಗಳು ಭ್ರಷ್ಟಾಾಚಾರದಲ್ಲಿ ತೊಡಗಿರುವುದೇ ಇದಕ್ಕೆೆಲ್ಲಾ ಕಾರಣ.
-ದಿಲೀಪಕುಮಾರ್ ವರ್ಮಾ ಸಂಸ್ಥಾಾಪಕ ರಾಜ್ಯಾಾಧ್ಯಕ್ಷ, ಇಂಡಿಯನ್ ನ್ಯಾಾಷನಲ್ ಭೀಮ್ ಆರ್ಮಿ, ಬೀದರ್.