ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ರಾಯಚೂರು ಜಿಲ್ಲೆಯಲ್ಲಿ ಎಡೆದೊರೆ ನಾಡು ರಾಯಚೂರು ಉತ್ಸವ ಕಾರ್ಯಕ್ರಮವು ಜನವರಿ 29, 30 ಹಾಗೂ 31ರಂದು ನಡೆಯಲಿದೆ.
ಜಿಲ್ಲೆಯ ಸಾಹಿತಿಗಳು, ಕವಿಗಳು, ಬುದ್ಧಿಿ ಜೀವಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವ್ಯಾಾಪಾರಸ್ಥರು, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಕಲಾವಿದರು ಮತ್ತು ಸಾರ್ವಜನಿಕರು ಹಾಜರಾಗುವ ಜೊತೆಗೆ ಈ ಸಾಂಸ್ಕೃತಿಕ ಹಬ್ಬವು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗದೆ, ಪ್ರತಿಯೊಬ್ಬ ನಾಗರಿಕನೂ ಹೆಮ್ಮೆೆಪಡುವಂತಹ ಜನೋತ್ಸವವಾಗಿ ಮೂಡಿಬರಲು ತಮ್ಮ ಅಮೂಲ್ಯ ಸಮಯ, ಸಲಹೆ ನೀಡಲು ಹಾಗೂ ಮಹತ್ಕಾಾರ್ಯ ಯಶಸ್ವಿಿಗೊಳಿಸಲು ಕೋರಿ ಪೂರ್ವಭಾವಿ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜನವರಿ 08ರ ಬೆಳಗ್ಗೆೆ 11ಕ್ಕೆೆ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದು, ಎಲ್ಲರೂ ಆಗಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

