ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ನ.30: ನಗರದ ತಾಲ್ಲೂಕು ಕಚೇರಿ ಹಾಗೂ ತಾಲ್ಲೂಕು ಕುರುಬರ ಸಂಘದ ವತಿಯಿಂದ 536ನೇ ದಾಸ ಶ್ರೇಷ್ಠರಾದ ಕನಕದಾಸರ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶಿಡ್ಲಘಟ್ಟ ನಗರದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರವುಳ್ಳ ಪಲ್ಲಕ್ಕಿಗಳ ಮೆರವಣಿಗೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಈ ಕಾರ್ಯಕ್ರಮಕ್ಕೆ ಮೆರೆಗು ತಂದವು.
ಕನಕದಾಸರ ಜಯಂತಿ ಅಂಗವಾಗಿ ಕುರುಬರ ಸಮುದಾಯದ 5 ಜನ ಹಿರಿಯ ಮುಖಂಡರಿಗೆ ಸನ್ಮಾನ ಮಾಡಲಾಯಿತು. ಅಲ್ಲದೆ, ಕುರುಬ ಸಮುದಾಯದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಎಚ್.ಡಿ ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಚಾರಿಟಬಲ್ ಟ್ರಸ್ಟ್ ವತಿಯಿಂದ 5000 ಸಹಾಯಧನವನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ. ಎನ್ ರವಿಕುಮಾರ್, ಮೊದಲಿಗೆ ಕ್ಷೇತ್ರ ಜನತೆಗೆ ಕನಕದಾಸರ ಜಯಂತಿ ಶುಭಾಶಯಗಳು ತಿಳಿಸಿ ಕನಕ ಎಂಬುದು ಹಿಂದಿನ ಕಾಲದಲ್ಲಿ ಬಂಗಾರವನ್ನ ಕನಕ ಎಂದು ಕರೆಯುತ್ತಾರೆ. ಇದು ಒಂದು ಇತಿಹಾಸ. ನಾವು ಸಹ ಎಲ್ಲಾ ಮಹನೀಯರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡರೆ ಈ ಸಮಾಜದಲ್ಲಿ ನಮ್ಮ ಕೈಲಾದ ಮಟ್ಟಿಗೆ ನಾವು ಕೆಲಸ ಮಾಡಬೇಕು. ಆಗ ಸಾಮಾಜಕ್ಕೆ ಒಳ್ಳೆದಾಗುತ್ತದೆ. ಸಮುದಾಯದ ಪರವಾಗಿ ನಾನೂ ಅಧಿಕಾರದಲ್ಲಿರುವ ತನಕ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ಎನ್ ಸ್ವಾಮಿ, ರಾಜ್ಯ ಕಂಡ ಅತ್ಯಂತ ಶ್ರೇಷ್ಠರಲ್ಲಿ ಒಬ್ಬರಾದಂತಹ ಮಹನೀಯರು ಹಳೆಯ ಸಮಾಜದಲ್ಲಿ ಹೆಚ್ಚು ಜಾತಿ ವ್ಯವಸ್ಥೆ ಇದ್ದಂತಹ ಸಮಾಜದಲ್ಲಿ ಕೆಳವರ್ಗದಲ್ಲಿ ಜನಸಿ ಎಲ್ಲಾರು ಮೆಚ್ಚುವಂತಹ ಸಾಮಾಜಿಕ ಸುಧಾರಣೆ ಮಾಡಿದರು. ಅವರ ಕೀರ್ತನೆಗಳು ಸಮಾಜದಲ್ಲಿದ್ದಂತಹ ಹಲವು ಮೂಡನಂಬಿಕೆಗಳು ಜಾತಿ ವ್ಯವಸ್ಥೆಯ ವಿರುದ್ಧ ಅರಿವು ಮೂಡಿಸುವ ಕೆಲಸ ಮಾಡಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರಕ್ಷಕ ವೃತ್ತ ನಿರೀಕ್ಷಕರಾದ ಎನ್.ಶ್ರೀನಿವಾಸ್ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಮುನಿರಾಜು. ನಗರಸಭೆ ಪೌರಾಯುಕ್ತರು ಮಂಜುನಾಥ್, ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಎ.ನಾಗರಾಜ್, ಡಾ.ಡಿ.ಟಿ.ಸತ್ಯ ನಾರಾಯಣ್, ಡಾ.ಸಂದೀಪ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಮಂಜುನಾಥ್ , ಗೌರವ ಅಧ್ಯಕ್ಷ ಗಣೇಶಪ್ಪ, ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ, ಮುಂಖಡರಾದ ಬಂಕ್ ಮುನಿಯಪ್ಪ, ಎ.ರಾಮಚಂದ್ರಪ್ಪ, ಮೇಲೂರು ಟಿ.ಮಂಜುನಾಥ್, ಭಕ್ತರಹಳ್ಳಿ ಬೈರೇಗೌಡ, ಸಿ.ವಿ.ಲಕ್ಷ್ಮಣ್ ರಾಜು ಹಾಗೂ ಕುರುಬರ ಸಮುದಾಯ ಮುಖಂಡರು ಇನ್ನು ಮುಂತಾದವರು ಹಾಜರಿದ್ದರು.