ಸುದ್ದಿಮೂಲ ವಾರ್ತೆ
ಕೆಜಿಎಫ್, ಜೂ 27 : ತಾಲೂಕು ಆಡಳಿತ ವತಿಯಿಂದ ತಾಲೂಕು ಕಚೇರಿಯ ಆವರಣದಲ್ಲಿ. ಶಾಸಕಿ ರೂಪಕಲಾ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ 514ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಸಕಿ ರೂಪಕಲಾ ಮಾತನಾಡಿ, ವಿಶ್ವದಲ್ಲೇ ಹೆಸರು ಪಡೆದಿರುವ ಬೆಂಗಳೂರು ಇದಕ್ಕೆ ಕಾರಣಕರ್ತರು ಸೃಷ್ಟಿಕರ್ತರು ಇದೇ ಕೆಂಪೇಗೌಡ ನಾವು ಇಂಥವರ ಜಯಂತಿಯನ್ನು ಆಚರಣೆ ಮಾಡಿ. ಅವರ ತತ್ವ ಸಿದ್ಧಾಂತಗಳನ್ನು ನಾವು ಅಳವಡಿಸಿಕೊಂಡು ಮುಂದೆ ನಡೆದರೆ, ನಾವು ಅವರಿಗೆ ಸ್ಪೂರ್ತಿಯಾಗಿ ಉಳಿಯಬೇಕು ಎಂದರು.
ನಾನು ಸಹ ಕೆಜಿಎಫ್ ಜನತೆಗೆ ನನ್ನ ಕೈಲಾದ ಸಹಾಯ ಮಾಡುವ ಸಲುವಾಗಿ ಇಲ್ಲೆ ಕಾರ್ಖಾನೆಗಳ ನಿರ್ಮಿಸಿ ಜನರಿಗೆ ಕೆಲಸ ಕೊಡುವ ಉದ್ದೇಶದಿಂದ 900 ಎಕರೆಯನ್ನು ಪಡೆದುಕೊಂಡಿದ್ದು ಕೆಜಿಎಫ್ ಜನತೆಗೆ ಉದ್ಯೋಗ ನೀಡಿ ಮತ್ತು ರೈತರಿಗೆ ಅನುಕೂಲವಾಗಲಿ ಎಂದು ಕೃಷಿ ಮಾರುಕಟ್ಟೆ ನಿರ್ಮಿಸಲು 25 ಎಕರೆ ಮೀಸಲಿಟ್ಟಿದ್ದೇವೆ. ಎಲ್ಲಾ ಕಾರ್ಯಗಳು ಪೂರ್ಣಗೊಂಡರೆ ನನ್ನ ಕ್ಷೇತ್ರದ ಜನತೆ ಸಂತೋಷದಿಂದ ಇರಲಿ ಎಂಬುದು ನನ್ನ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ .ಅ ಮು ಲಕ್ಷ್ಮಣ್ ನಾರಾಯಣ್, ಒಕ್ಕಲಿಗ ಸಂಘ ಅಧ್ಯಕ್ಷರು ರಾಜಗೋಪಾಲ್ ಗೌಡ ನಗರಸಭೆ ಸದಸ್ಯರು ಮಾಣಿಕ್ಯ, ಆಂಜನೇಯ ಗೌಡ, ವರದರಾಜಯ್ಯ ಹಲವಾರು ಮುಖಂಡರು ಭಾಗವಹಿಸಿದ್ದರು.